ನಿನ್ನೆಯಷ್ಟೆ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಒಂದು ದಿನ ಕಳೆಯುವುದರೊಳಗೆ ಮನೆಯಿಂದ ವಾಪಸಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬೆಳಗಾಗಿ ಬಿಗ್ಬಾಸ್ ಮನೆ ಬಿಟ್ಟು ಹೊರಬಂದ ರವಿ ಬೆಳಗೆರೆ... ಕಾರಣ? - Bigg Boss season 7 news
ನಿನ್ನೆಯಷ್ಟೇ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಒಂದು ದಿನ ಕಳೆಯುವುದರೊಳಗೆ ಮನೆಯಿಂದ ವಾಪಸ್ಸಾಗಿದ್ದಾರೆ.
![ಬೆಳಗಾಗಿ ಬಿಗ್ಬಾಸ್ ಮನೆ ಬಿಟ್ಟು ಹೊರಬಂದ ರವಿ ಬೆಳಗೆರೆ... ಕಾರಣ?](https://etvbharatimages.akamaized.net/etvbharat/prod-images/768-512-4746224-thumbnail-3x2-lek.jpg)
ರವಿ ಬೆಳಗೆರೆ
ಹೌದು, ಬಿಗ್ಬಾಸ್ ಮನೆಯಲ್ಲಿ ಮೆಟ್ಟಿಲ ಮೇಲೆ ಜಾರಿ ಬಿದ್ದು ಕಾಲಿಗೆ ಪೆಟ್ಟಾದ ಹಿನ್ನೆಲೆ ರವಿ ಬೆಳಗೆರೆ ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಇನ್ನು ಬೆಳಗೆರೆ ಆಪ್ತ ಮೂಲಗಳ ಪ್ರಕಾರ, ರವಿ ಬೆಳಗೆರೆಗೆ ಬಿಗ್ಬಾಸ್ ಮನೆಯಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ನಿನ್ನೆ ದಿನ ಕುರಿ ಪ್ರತಾಪ್ ಸಹಾಯದಿಂದಲೇ ನಡೆದಾಡುತ್ತಿರುವುದು ಕಂಡು ಬಂದಿತ್ತು. ಬಿಗ್ಬಾಸ್ ಮನೆಯಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದೇ ಹೊರ ಬಂದಿದ್ದಾರೆ ಎಂದೂ ಹೇಳಲಾಗುತ್ತಿದೆ. ಅದ್ರೆ ಅವರು ಅಲ್ಲಿ ಜಾರಿ ಬಿದ್ದು ಕಾಲಿಗೆ ಪೆಟ್ಟಾದ ಹಿನ್ನೆಲೆ ಮತ್ತು ಆರೋಗ್ಯದ ದೃಷ್ಟಿಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.