ಹಂಗಮಾ ಡಿಜಿಟಲ್ ಮೀಡಿಯಾ ಒಡೆತನದ ಪ್ರಮುಖ ವಿಡಿಯೋ ಆನ್ ಡಿಮ್ಯಾಂಡ್ ಪ್ಲಾಟ್‌ಫಾರ್ಮ್ ಆಗಿರುವ ಹಂಗಮಾ ಪ್ಲೇನಲ್ಲಿ ರೆಡ್ ಲೈಟ್ ಏರಿಯಾಗಳಲ್ಲಿ ನಡೆಯಬಹುದಾದ 5 ವಿಭಿನ್ನ ಮತ್ತು ಚಿಂತನಶೀಲ ಕಥೆಗಳನ್ನು ಒಳಗೊಂಡ 'ರಾತ್ರಿಯ ಯಾತ್ರಿಕ' ಎಂಬ ಹೊಸ ಕನ್ನಡ ಕಾರ್ಯಕ್ರಮ ಪ್ರಸಾರ ಆಗಲಿದೆ.
ಪ್ರತಿಯೊಂದು ಕಥೆಯು ಅಪೂರ್ಣ ಜೀವನದ ಮತ್ತು ಅನ್ವೇಷಣೆಯ ಪಾತ್ರಗಳನ್ನು ಒಳಗೊಂಡಿವೆ. ಪ್ರೀತಿ, ದೈಹಿಕ ಸುಖ, ನಿರಾಶ್ರಿತರ ಕಥೆಗಳನ್ನು ಒಳಗೊಂಡಿವೆ. ವೇಶ್ಯೆಯ ಮಗನೆಂದು ನಾಚಿಕೆ ಪಡುವ ವ್ಯಕ್ತಿಯೊಬ್ಬ ಆತ ಅತಿಯಾಗಿ ದ್ವೇಷಿಸುವ ಸ್ಥಳದಲ್ಲೇ ಹೇಗೆ ಅರಿವು ಪಡೆಯುತ್ತಾನೆ. 69 ವರ್ಷದ ವ್ಯಕ್ತಿಯೊಬ್ಬ ಹೇಗೆ ತನ್ನ ದೈಹಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹಾತೊರೆಯುತ್ತಾನೆ ಮತ್ತು ಅದಕ್ಕಾಗಿ ಸಮಾಜದ ಬಗ್ಗೆ ಹೆದರದೆ, ನಾಚಿಕೆ ಪಡದೆ ಜೀವಿಸುತ್ತಾನೆ. ಜೈಲಿನಿಂದ ಹೊರಬಂದ ಪ್ರೇಮಿಯೊಬ್ಬ ವಾಸ್ತವಿಕತೆಯನ್ನು ಒಪ್ಪಿಕೊಂಡು ಹೇಗೆ ತನ್ನ ಹೊಸ ಬದುಕಿನ ಅಧ್ಯಾಯವನ್ನು ಪ್ರಾರಂಭಿಸುತ್ತಾನೆ. 18 ವರ್ಷ ವಯಸ್ಸಿನ ಹುಡುಗನೊಬ್ಬ ಎಲ್ಲಾ ಲೌಕಿಕ ಸುಖಗಳನ್ನು ತ್ಯಜಿಸುವ ಮೊದಲು ಏಕೆ ಒಮ್ಮೆ ದೈಹಿಕ ಸುಖ ಪಡೆಯಲು ಬಯಸುತ್ತಾನೆ. ಜನರನ್ನು ದೋಚಿ ಜೀವನ ನಡೆಸುವ ವ್ಯಕ್ತಿಯೊಬ್ಬನ ಬಳಿ ಇರುವ ಅಮೂಲ್ಯವಾದ ವಸ್ತುವೊಂದನ್ನು ಕದ್ದು ಹೋಗುವ ಸಂದರ್ಭಗಳ ರೋಚಕ ಕಥೆಗಳು ಸರಣಿಯಲ್ಲಿ ಇರಲಿವೆ.
ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳು ತಮ್ಮ ಜೀವನದಲ್ಲಿ ಮೊದಲ ಬಾರಿಗೆ 'ರೆಡ್ ಲೈಟ್' ಏರಿಯಾಗೆ ಭೇಟಿ ನೀಡುತ್ತವೆ ಮತ್ತು ಅಂತಿಮವಾಗಿ ಇಲ್ಲಿ ಸಾಂತ್ವನ ಮತ್ತು ಪರಿಹಾರವನ್ನು ಕಂಡುಕೊಳ್ಳುತ್ತವೆ. ಅವರ ಅನುಭವಗಳು ಕೆಲವೊಮ್ಮೆ ಪ್ರಚೋದನಕಾರಿಯೇ ಇರಬಹುದು. ಆದರೆ ಅದನ್ನು ಲೆಕ್ಕಿಸದೆ, ಒಂದೇ ರಾತ್ರಿಯಲ್ಲಿ ಅವರ ದೃಷ್ಟಿಕೋನ ಶಾಶ್ವತವಾಗಿ ಬದಲಾಗುತ್ತದೆ.