ಕರ್ನಾಟಕ

karnataka

ETV Bharat / sitara

"ಮನಸ್ಸೆಲ್ಲಾ ನೀನೆ" ಎನ್ನುತ್ತಾ ಕಿರುತೆರೆಗೆ ಮರಳಿದ್ದಾರೆ ರಶ್ಮಿ ಪ್ರಭಾಕರ್ - Manassella Nine kannada serial

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ"ಮನಸ್ಸೆಲ್ಲಾ ನೀನೆ"ಯಲ್ಲಿ ನಾಯಕಿ ರಾಗ ಆಗಿ ಅಭಿನಯಿಸುವ ಮೂಲಕ, ರಶ್ಮಿ ಪ್ರಭಾಕರ್ ಅವರು ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ..

ರಶ್ಮಿ ಪ್ರಭಾಕರ್
ರಶ್ಮಿ ಪ್ರಭಾಕರ್

By

Published : Nov 2, 2020, 6:02 PM IST

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಅಲಿಯಾಸ್ ಚಿನ್ನು ಆಗಿ ಮನೆ ಮಾತಾಗಿರುವ ಮುದ್ದು ಮುಖದ ಚೆಲುವೆ ರಶ್ಮಿ ಪ್ರಭಾಕರ್, ಇದೀಗ ರಾಗ ಆಗಿ ನಿಮ್ಮ ಮುಂದೆ ಬರುತ್ತಿದ್ದಾರೆ. ಮೂರು ವರ್ಷ ಚಿನ್ನು ಆಗಿ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ರಶ್ಮಿ, ತೆಲುಗಿನ ಪೌರ್ಣಮಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯಲ್ಲಿಯೂ ನಟನಾ ಚಾಪನ್ನು ಪಸರಿಸಲಿದ್ದಾರೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಲಚ್ಚಿ ಆಲಿಯಾಸ್ ಚಿನ್ನು

ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ"ಮನಸ್ಸೆಲ್ಲಾ ನೀನೆ"ಯಲ್ಲಿ ನಾಯಕಿ ರಾಗ ಆಗಿ ಅಭಿನಯಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಮನಸ್ಸೆಲ್ಲಾ ನೀನೆ ಧಾರಾವಾಹಿಯು ಹಿಂದಿಯ ಯೇ ಚಾಹತೇ ಧಾರಾವಾಹಿಯ ರಿಮೇಕ್ ಆಗಿದೆ.

ಮುದ್ದು ಮುಖದ ಚೆಲುವೆ ರಶ್ಮಿ ಪ್ರಭಾಕರ್

ಶ್ರುತಿ ನಾಯ್ಡು ಅವರ ನಾಯ್ಡು ಚಿತ್ರ ಪ್ರೊಡಕ್ಷನ್ ನಡಿಯಲ್ಲಿ ಮನಸ್ಸೆಲ್ಲಾ ನೀನೆ ಧಾರಾವಾಹಿ ನಿರ್ಮಾಣವಾಗಲಿದ್ದು, ಧಾರಾವಾಹಿಯ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. "ಚಿನ್ನು ಪಾತ್ರಕ್ಕೂ ರಾಗ ಪಾತ್ರಕ್ಕೂ ಒಂದಿಷ್ಟು ಸಾಮ್ಯತೆಯಿಲ್ಲ‌‌. ಎರಡು ತುಂಬಾನೇ ಢಿಪರೆಂಟ್. ರಾಗಳದು ಬಬ್ಲಿಯಾಗಿರುವಂತಹ ವ್ಯಕ್ತಿತ್ವ. ಬುದ್ದಿವಂತೆಯಾಗಿರುವ ರಾಗ ಓದಿರುವ ಹುಡುಗಿ. ಮುಖ್ಯವಾದ ಸಂಗತಿಯೆಂದರೆ ಆಕೆ ಅಳುಮುಂಜಿಯಲ್ಲ. ಈ ವಿಭಿನ್ನ ಪಾತ್ರದ ಮೂಲಕ ನಿಮ್ಮ ಮುಂದೆ ಬರುತ್ತಿದ್ದೇನೆ" ಎನ್ನುತ್ತಾರೆ ರಶ್ಮಿ ಪ್ರಭಾಕರ್.

ರಶ್ಮಿ ಪ್ರಭಾಕರ್

ABOUT THE AUTHOR

...view details