ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಯಲ್ಲಿ ಕನ್ನಡ ಪ್ರಾಧ್ಯಾಪಕಿ ಭುವನೇಶ್ವರಿ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನಕ್ಕೆ ಮತ್ತಷ್ಟು ಹತ್ತಿರವಾಗಿರುವ ನಟಿ ರಂಜನಿ ರಾಘವನ್.
ಈಗಾಗಲೇ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಗೌರಿ ಆಗಿ ಕೆಲವು ವರ್ಷ ವೀಕ್ಷಕರಿಗೆ ಮನರಂಜನೆ ನೀಡಿದ ರಂಜನಿಯ ಹೊಸ ಅವತಾರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಅರಳು ಹುರಿದಂತೆ ಪಟಪಟನೆ ಕನ್ನಡ ಮಾತನಾಡುವ ಭುವಿಯ ಪಾತ್ರಕ್ಕೆ ಜನ ಸೋತಿದ್ದಾರೆ. ಭುವಿ ಆಲಿಯಾಸ್ ರಂಜನಿ ಇದೀಗ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಬದಲಾಗಲಿದ್ದಾರೆ. 'ಕನ್ನಡತಿ'ಯ ಜೊತೆಗೆ ರಂಜನಿ ಹೊಸ ಧಾರಾವಾಹಿಯಲ್ಲಿ ಆ್ಯಕ್ಟ್ ಮಾಡ್ತಿದ್ದಾರಾ ಎಂದು ಯೋಚಿಸಬೇಡಿ. ಏಕೆಂದರೆ ಭುವಿ ಪೊಲೀಸ್ ವಾರ್ಡನ್ ಆಗಿರುವುದು ರೀಲ್ ಅಲ್ಲ, ರಿಯಲ್ ಲೈಫ್ನಲ್ಲಿ. ಆಶ್ಚರ್ಯ ಎಂದೆನಿಸಿದರೂ ಸತ್ಯ. ಅದರ ಬಗ್ಗೆ ಸ್ವತಃ ರಂಜನಿ ರಾಘವನ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.