ಕರ್ನಾಟಕ

karnataka

ETV Bharat / sitara

ತಮಿಳಿಗೆ ರಿಮೇಕ್ ಆಗಲಿದೆ ರಮೇಶ್ ಅರವಿಂದ್ ನಿರ್ಮಾಣದ 'ಸುಂದರಿ' ಧಾರಾವಾಹಿ - ರಮೇಶ್ ಅರವಿಂದ್ ನಿರ್ಮಾಣದ 'ಸುಂದರಿ' ಧಾರಾವಾಹಿ

ಇತ್ತೀಚೆಗಷ್ಟೇ ಉದಯ ವಾಹಿನಿಯಲ್ಲಿ ಪ್ರಾರಂಭವಾಗಿರುವ ಸುಂದರಿ ಧಾರಾವಾಹಿಯು ಸದ್ಯದಲ್ಲಿಯೇ ತಮಿಳಿಗೆ ರಿಮೇಕ್ ಆಗಲಿದೆ.

'Sundari' serial remake in Tamil
ತಮಿಳಿಗೆ ರಿಮೇಕ್ ಆಗಲಿದೆ ರಮೇಶ್ ಅರವಿಂದ್ ನಿರ್ಮಾಣದ 'ಸುಂದರಿ' ಧಾರಾವಾಹಿ

By

Published : Feb 3, 2021, 1:39 PM IST

ಇಂದು ಹಲವು ಧಾರಾವಾಹಿಗಳು ಪರಭಾಷೆಗಳಿಗೆ ರಿಮೇಕ್ ಆಗುತ್ತಿವೆ. ಜೊತೆಗೆ ಧಾರಾವಾಹಿಗಳು ರಿಮೇಕ್ ಆಗುವುದು ಇದೀಗ ಟಿವಿ ಲೋಕದಲ್ಲಿ ಟ್ರೆಂಡ್ ಆಗಿ ಬಿಟ್ಟಿದೆ. ಈಗಾಗಲೇ ಜೊತೆ ಜೊತೆಯಲಿ, ಮನಸಾರೆ, ಕಸ್ತೂರಿ ನಿವಾಸ ಧಾರಾವಾಹಿಗಳು ಪರಭಾಷೆಗೆ ರಿಮೇಕ್ ಆಗಿವೆ. ಇದೀಗ ಸುಂದರಿ ಧಾರಾವಾಹಿಯ ಸರದಿ. ಇತ್ತೀಚೆಗಷ್ಟೇ ಉದಯ ವಾಹಿನಿಯಲ್ಲಿ ಪ್ರಾರಂಭವಾಗಿರುವ ಸುಂದರಿ ಧಾರಾವಾಹಿಯು ಸದ್ಯದಲ್ಲಿಯೇ ತಮಿಳಿಗೆ ರಿಮೇಕ್ ಆಗಲಿದೆ.

ಸುಂದರಿ ಪಾತ್ರದಲ್ಲಿ ಕಾಣಿಸಿಕೊಂಡ ಐಶ್ವರ್ಯ ಪಿಸ್ಸೆ

ತಮಿಳಿನಲ್ಲಿ ಇದರ ಶೀರ್ಷಿಕೆ ಹಾಗೂ ತಾರಾಗಣ ಇನ್ನೂ ಬಹಿರಂಗವಾಗಿಲ್ಲ. ಕನ್ನಡ ಧಾರಾವಾಹಿಯೊಂದು ತಮಿಳಿಗೆ ರಿಮೇಕ್ ಆಗುತ್ತಿದೆ ಎಂಬ ವಿಷಯ ಕನ್ನಡ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸುಂದರಿ ಧಾರಾವಾಹಿ ಕಪ್ಪು ವರ್ಣದ ಕುರಿತು ಇರುವ ತಾರತಮ್ಯದ ಕುರಿತಾಗಿದೆ. ಇದರ ಬಗ್ಗೆ ಹೋರಾಡುವ ನಾಯಕಿ ಸುಂದರಿಯು ಉತ್ತಮ ಹೃದಯದವಳಾಗಿರುತ್ತಾಳೆ. ಒಳ್ಳೆ ಹುಡುಗನನ್ನು ಮದುವೆಯಾಗಲು ಕಷ್ಟಪಡುತ್ತಾಳೆ. ತಾನು ಐಎಎಸ್ ಆಫೀಸರ್ ಆಗಬೇಕೆಂದು ಬಯಸಿ ಹಗಲಿರುಳು ಕಷ್ಟಪಡುತ್ತಾಳೆ. ತನ್ನ ಗುರಿಯನ್ನು ಸಾಧಿಸುವ ಹಾದಿಯಲ್ಲಿ ಏರಿಳಿತಗಳನ್ನು ಅನುಭವಿಸುವ ಸುಂದರಿ ದೈಹಿಕ ಅಂದಕ್ಕಿಂತ ಅಂತರಂಗ ಸೌಂದರ್ಯ ಮುಖ್ಯವೆಂದು ನಂಬುತ್ತಾಳೆ.

ಸುಂದರಿ ಪಾತ್ರದಲ್ಲಿ ಕಾಣಿಸಿಕೊಂಡ ಐಶ್ವರ್ಯ ಪಿಸ್ಸೆ

ನಂದಿನಿ ಧಾರಾವಾಹಿ ನಂತರ ರಮೇಶ್ ಅರವಿಂದ್ ಈ ಧಾರಾವಾಹಿ ಮೂಲಕ ಮತ್ತೊಮ್ಮೆ ನಿರ್ಮಾಪಕರಾಗಿದ್ದಾರೆ. ಐಶ್ವರ್ಯ ಪಿಸ್ಸೆ ಸುಂದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕ ಕರಣ್ ಆಗಿ ಸಮೀಪ್ ಆಚಾರ್ಯ ಅಭಿನಯಿಸಿದ್ದಾರೆ.

ABOUT THE AUTHOR

...view details