ನವದೆಹಲಿ:ಸುಪ್ರಸಿದ್ಧ ರಾಮಾಯಣದ ಧಾರಾವಾಹಿಯಲ್ಲಿ ಸೀತೆ ಪಾತ್ರದಿಂದ ಹೆಸರುವಾಸಿಯಾಗಿದ್ದ ನಟಿ ದೀಪಿಕಾ ಚಿಖಾಲಿಯಾಗೆ ಮಾತೃ ವಿಯೋಗವಾಗಿದೆ.
ದೀಪಿಕಾ ಅವರ ತಾಯಿ ಶನಿವಾರ ವಿಧಿವಶರಾಗಿದ್ದು, ಹೆತ್ತವರ ಅಗಲಿಕೆಯ ದುಃಖ ಸುಲಭವಾಗಿ ಹೋಗುವುದಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನೋವು ತೋಡಿಕೊಂಡಿದ್ದಾರೆ.

ದೀಪಿಕಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಸಾಕಷ್ಟು ಜನಪ್ರಿಯರಾಗಿದ್ದರು. ಕೆಲವು ತಿಂಗಳುಗಳ ಹಿಂದೆ, ತಮ್ಮ ಬಾಲ್ಯದ ದಿನಗಳಲ್ಲಿದ್ದ ಕುಟುಂಬದ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು.
ಈಗಲೂ ದೀಪಿಕಾ ಅವರು ರಾಮಾಯಣ ಧಾರಾವಾಹಿಯ ಸೀತೆಯ ಪಾತ್ರದಿಂದ ಸುಪ್ರಸಿದ್ಧರಾಗಿದ್ದರು. ರಾಮನ ಪಾತ್ರದಲ್ಲಿ ಅರುಣ್ ಗೋವಿಲ್ ಹಾಗೂ ಲಕ್ಷ್ಮಣನ ಪಾತ್ರದಲ್ಲಿ ಸುನಿಲ್ ಲಾಹ್ರಿ ಅಭಿನಯಿಸಿದ್ದರು.
ಸುಮಾರು 30 ವರ್ಷಗಳ ನಂತರ ತೆರೆಕಂಡಿದ್ದ ರಾಮಾಯಾಣ,ಇತ್ತೀಚೆಗಷ್ಟೇ ಮರುಪ್ರಸಾರವಾಗಿ ಎಲ್ಲಾ ದಾಖಲೆಗಳನ್ನು ಮುರಿದಿತ್ತು.