ಕನ್ನಡದಲ್ಲಿ ಇತ್ತೀಚೆಗೆ ವೆಬ್ ಸೀರೀಸ್ ಟ್ರೆಂಡ್ ಹೆಚ್ಚಾಗುತ್ತಿದೆ. ರವಿ ಶಾಮನೂರು ಫಿಲ್ಮ್ಸ್ ಬ್ಯಾನರ್ ಅಡಿ ಡಾ. ರವಿ ಶಾಮನೂರು ಮೊದಲ ಬಾರಿಗೆ ನಿರ್ಮಿಸಿರುವ ರಾಮ್ತೇಜ ನಿರ್ದೇಶನದ 'ಸೈಕೋ' ವೆಬ್ ಸೀರೀಸ್ ಇಂದಿನಿಂದ ವಿ 4 ಸ್ಟ್ರೀಮ್ ಒಟಿಟಿಯಲ್ಲಿ ಪ್ರಸಾರವಾಗಲಿದೆ.
ಈ ವೆಬ್ ಸೀರೀಸ್ ಬಹುತೇಕ ಮಂಗಳೂರು ಭಾಗದಲ್ಲಿ ಚಿತ್ರೀಕರಿಸಲಾಗಿದೆ. 'ಪಂಚತಂತ್ರ' ಖ್ಯಾತಿಯ ನಟ ಸೋನಾಲ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಚರಣ್ ಸುವರ್ಣ ನಿರ್ಮಾಣ ವಿನ್ಯಾಸ ಕೆಲಸ ನಿರ್ವಹಿಸಿದ್ದಾರೆ. 'ಟಕ್ಕರ್' ಸಿನಿಮಾ ನಾಯಕ, ದರ್ಶನ್ ಸಂಬಂಧಿ ಮನೋಜ್ ತೂಗುದೀಪ್, 'ಡಿಯರ್ ಸತ್ಯ' ನಾಯಕ ಆರ್ಯನ್ ಸಂತೋಷ್ ಹಾಗೂ ಇನ್ನಿತರರು ಈ ವೆಬ್ ಸೀರೀಸ್ಗೆ ಶುಭ ಹಾರೈಸಿದ್ದಾರೆ.