ಕರ್ನಾಟಕ

karnataka

ETV Bharat / sitara

ಖ್ಯಾತ ಧಾರಾವಾಹಿಯೊಂದರ ನಿರ್ಮಾಣದ ಹೊಣೆ ಹೊತ್ತ ರಕ್ಷ್​​​ - Gattimela fame Rakksh

ಇಷ್ಟು ದಿನಗಳ ಕಾಲ ನಟನಾಗಿ ಕಿರುತೆರೆಪ್ರಿಯರ ಮನ ಸೆಳೆದಿದ್ದ ನಟ ರಕ್ಷ್​​ ಈಗ ಧಾರಾವಾಹಿಯೊಂದರ ನಿರ್ಮಾಣದ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ನಿರ್ಮಾಪಕನಾಗಿ ಕೂಡಾ ಭಡ್ತಿ ಪಡೆದಿದ್ದಾರೆ.

Producer Rakksh
ನಿರ್ಮಾಪಕ ರಕ್ಷ್​​

By

Published : Feb 15, 2021, 2:01 PM IST

'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್ ವಸಿಷ್ಠ ಆಗಿ ನಟಿಸುವ ಮೂಲಕ ಮತ್ತಷ್ಟು ಕಿರುತೆರೆಪ್ರಿಯರಿಗೆ ಪರಿಚಯವಾಗಿರುವ ರಕ್ಷ್​, ಪುಟ್ಟಗೌರಿ ಮದುವೆಯ ಮಹೇಶನಾಗಿ ಕೂಡಾ ಗಮನ ಸೆಳೆದಿದ್ದರು. ಸಣ್ಣ ಪುಟ್ಟ ಪಾತ್ರಗಳಿಂದ ನಾಯಕನಾಗಿ ನಟಿಸಿ ಹೆಸರಾಗಿರುವ ರಕ್ಷ್​​ ಈಗ ನಿರ್ಮಾಪಕರಾಗಿ ಕೂಡಾ ಭಡ್ತಿ ಪಡೆದಿದ್ದಾರೆ.

ಇದನ್ನೂ ಓದಿ:ತನ್ನನ್ನು ಅವಮಾನಿಸಿದ ವ್ಯಕ್ತಿಯನ್ನು ಟ್ರೋಲ್​ ಮಾಡಿದ್ರು ದೀಪಿಕಾ!

ರಕ್ಷ್​​ ತಾವು ಸದ್ಯಕ್ಕೆ ನಟಿಸುತ್ತಿರುವ 'ಗಟ್ಟಿಮೇಳ' ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸಂತೋಷದ ವಿಚಾರವನ್ನು ರಕ್ಷ್​ ತಮ್ಮ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪ್ರೊಡಕ್ಷನ್ ಹೌಸ್​​ಗೆ ರಕ್ಷ್,​ ಶ್ರೀ ಸಾಯಿ ಆಂಜನೇಯ ಚಿತ್ರ ಎಂದು ಹೆಸರಿಟ್ಟಿದ್ದು ಈ ಬ್ಯಾನರ್ ಮೂಲಕ ಗಟ್ಟಿಮೇಳ ನಿರ್ಮಾಣದ ಹೊಸ ಜವಾಬ್ದಾರಿಯನ್ನು ಹೊತ್ತಿದ್ದಾರೆ. "ನೀವೆಲ್ಲರೂ ನನಗೆ ನೀಡಿದ ಪ್ರೀತಿಗೆ ಧನ್ಯವಾದಗಳು. ನಿಮ್ಮ ಪ್ರೀತಿ, ಆಶೀರ್ವಾದದಿಂದಲೇ ನಾನು ದೊಡ್ಡ ಜವಾಬ್ದಾರಿಯೊಂದನ್ನು ಹೊರಲು ಮುಂದಾಗಿದ್ದೇನೆ. ಇಷ್ಟು ದಿನ ನಟನಾಗಿದ್ದ ನಾನು ಇನ್ಮುಂದೆ ನಿರ್ಮಾಪಕನಾಗಿ ಕೂಡಾ ಕಾಣಿಸಿಕೊಳ್ಳುತ್ತಿದ್ದೇನೆ. ಅದೇ ಕಾರಣದಿಂದ ಗಟ್ಟಿಮೇಳ ನನಗೆ ಇನ್ನಷ್ಟು ಹತ್ತಿರವಾಗಿದೆ. ಈ ಪ್ರಾಜೆಕ್ಟ್ ನನ್ನ ಮಗು ಇದ್ದಂತೆ. ಇದುವರೆಗೂ ತೋರಿದ ಪ್ರೀತಿ ಮುಂದೆ ಕೂಡಾ ಹೀಗೇ ಇರಲಿ" ಎಂದು ರಕ್ಷ್ ಬರೆದುಕೊಂಡಿದ್ದಾರೆ.

ABOUT THE AUTHOR

...view details