ಕರ್ನಾಟಕ

karnataka

ETV Bharat / sitara

ಜೀ ಕನ್ನಡ ಬಿಟ್ಟು ಕಲರ್ಸ್ ಕಡೆ ಮುಖ ಮಾಡಿದ ರಾಜೇಶ್ ಕೃಷ್ಣನ್ - Rajesh Krishnan as the judge of Ede Thumbi Haaduvenu

SPB ಅವರ ಜನಪ್ರಿಯ ಕಾರ್ಯಕ್ರಮವಾದ 'ಎದೆ ತುಂಬಿ ಹಾಡುವೆನು' ಹೊಸ ಸೀಸನ್ ಸದ್ಯದಲ್ಲೇ ಶುರುವಾಗಲಿದೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ರಾಜೇಶ್ ಕೃಷ್ಣನ್ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ.

ರಾಜೇಶ್ ಕೃಷ್ಣನ್
ರಾಜೇಶ್ ಕೃಷ್ಣನ್

By

Published : Jul 28, 2021, 9:19 AM IST

ಕನ್ನಡದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೂ ಜೀ ಕನ್ನಡ ವಾಹಿನಿಗೂ ಹಲವು ವರ್ಷಗಳ ನಂಟಿದೆ. ಅದೆಷ್ಟೋ ವರ್ಷಗಳಿಂದ ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದರು. ಆದರೆ, ಇದೀಗ ಜೀ ಕನ್ನಡವನ್ನು ಬಿಟ್ಟು ಕಲರ್ಸ್ ಕನ್ನಡದತ್ತ ಹೊರಟಿದ್ದಾರೆ ಎನ್ನಲಾಗಿದೆ.

ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮ ಮೊದಲು ಈಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ನಂತರ ಕಲರ್ಸ್ ನವರ ತೆಕ್ಕೆಗೆ ಈಟಿವಿ ಬಂದ ಮೇಲೆ ಅಲ್ಲೂ ಸಹ ಎದೆ ತುಂಬಿ ಹಾಡುವೆನು ಮುಂದುವರೆಸಿದರು.

ಇದೀಗ SPB ಅವರ ಈ ಜನಪ್ರಿಯ ಕಾರ್ಯಕ್ರಮದ ಹೊಸ ಸೀಸನ್ ಸದ್ಯದಲ್ಲೇ ಶುರುವಾಗಲಿದೆ. ಈಗಾಗಲೇ ಟಿವಿಯಲ್ಲಿ ಪ್ರೋಮೋಗಳು ಬರುತ್ತಿದ್ದು, ಆಸಕ್ತ ಗಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆಯಲಾಗಿದೆ. ವಿಶೇಷ ಎಂದರೆ, ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಾಜೇಶ್ ಕೃಷ್ಣನ್ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ.

'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಈ ಹಿಂದೆ ಎಸ್​ಪಿಬಿ ಜತೆಗೆ ಇನ್ನೊಬ್ಬರು ತೀರ್ಪುಗಾರರಿರುತ್ತಿದ್ದರು. ಈಗ ಎಸ್​ಪಿಬಿ ಅವರ ನೆಚ್ಚಿನ ಶಿಷ್ಯ ರಾಜೇಶ್ ಕೃಷ್ಣನ್ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ರಾಜೇಶ್ ಜೊತೆಗೆ ವಿ. ಹರಿಕೃಷ್ಣ ಮತ್ತು ರಘು ದೀಕ್ಷಿತ್ ಸಹ ತೀರ್ಪುಗಾರರಾಗಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಈ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದ್ದು, ಆಗಸ್ಟ್​ನಲ್ಲಿ ಶೋ ಪ್ರಾರಂಭವಾಗಲಿದೆ ಎನ್ನಲಾಗಿದೆ. ಬಿಗ್ ಬಾಸ್ ಕಾರ್ಯಕ್ರಮ ಆಗಸ್ಟ್ 08ಕ್ಕೆ ಮುಗಿಯಲಿದ್ದು ಅದರ ಮುಂದುವರೆದ ಭಾಗವಾಗಿ 'ಎದೆ ತುಂಬಿ ಹಾಡುವೆನು' ಪ್ರಸಾರವಾಗಲಿದೆಯಂತೆ.

ABOUT THE AUTHOR

...view details