ಬಿಗ್ಬಾಸ್ ಸೀಸನ್ 8ರ ಸ್ಪರ್ಧೆಯಲ್ಲಿ ರನ್ನರ್‌ಅಪ್ ಅರವಿಂದ್ ಹಾಗೂ ಮೂರನೇ ಸ್ಥಾನದ ಪಡೆದ ದಿವ್ಯಾ ಉರುಡುಗ ಜೋಡಿಗೆ ಅಭಿಮಾನಿ ಬಳಗವೇ ಇದೆ. ಈ ಜೋಡಿ ಈಗಾಗಲೇ 'ಅರ್ವಿಯಾ' ಎಂದೇ ಜನಪ್ರಿಯತೆ ಗಳಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯೇಕ ಫ್ಯಾನ್ಸ್ ಗ್ರೂಪ್ ಹೊಂದಿದೆ. ಇದೀಗ ಇಬ್ಬರನ್ನು ಮತ್ತೆ ಕಿರುತೆರೆಗೆ ತರುವ ಚಿಂತನೆಯಲ್ಲಿದೆ ಕಲರ್ಸ್ ಕನ್ನಡ ವಾಹಿನಿ.
ಇತ್ತೀಚೆಗಷ್ಟೇ ಪ್ರಾರಂಭವಾಗಿರುವ ಈ ರಿಯಾಲಿಟಿ ಶೋನಲ್ಲಿ ವಾಹಿನಿಯು ವೈಲ್ಡ್ ಕಾರ್ಡ್ ಮೂಲಕ ಅರ್ವಿಯಾ ಜೋಡಿಯನ್ನು ಕರೆತರುವ ಯೋಚನೆಯಲ್ಲಿದೆ. ಇದರಿಂದಾಗಿ ಟಿಆರ್ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಕೂಡ ಹೆಚ್ಚಾಗಬಹುದು ಅನ್ನೋದು ವಾಹಿನಿಯ ಯೋಜನೆಯೂ ಆಗಿದೆ.