ಬಿಗ್ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಎರಡನೇ ಎಲಿಮಿನೇಟ್ ಆಗಿರುವ ರಘು, ಈ ಸೀಸನ್ ವಿನ್ನರ್ ವೈಷ್ಣವಿ ಆಗಬೇಕು ಎಂದಿದ್ದಾರೆ. ಇವರಿಬ್ಬರು ಬಿಗ್ಬಾಸ್ ಮನೆಯಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು. ಎಲಿಮಿನೇಟ್ ಆದ ನಂತರ ಸುದೀಪ್ ಅವರ ವೇದಿಕೆಗೆ ಬಂದ ರಘು, ವೈಷ್ಣವಿ ಅವರು ಒಳ್ಳೆಯ ಫ್ರೆಂಡ್. ಎಲ್ಲವನ್ನೂ ನೇರವಾಗಿಯೇ ಹೇಳುತ್ತಾರೆ. ಅವರಿಗೆ ತುಂಬಾ ಜನ ಫ್ರೆಂಡ್ಸ್ ಇಲ್ಲ. ಅವರ ಗ್ರೂಪ್‌ಗೆ ನನ್ನ ಸೇರಿಸಿಕೊಂಡಿದ್ದಾರೆ. ಅವರು ವಿನ್ ಆಗ್ತಾರೆ ಎಂದು ನನಗೆ ಅನಿಸುತ್ತದೆ ಎಂದರು.
Bigg Boss 8: ರಘು ಭವಿಷ್ಯದ ಪ್ರಕಾರ ಗೆಲ್ಲೋದು ಇವರೇ! - ಶಮಂತ್ ಬ್ರೋ ಗೌಡ
ಬಿಗ್ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಎರಡನೇ ಎಲಿಮಿನೇಟ್ ಆದ ರಘು, ವೈಷ್ಣವಿ ವಿನ್ ಆಗ್ತಾರೆ ಎಂದು ತನಗೆ ಅನಿಸುತ್ತದೆ ಸ್ಪರ್ಧಿ ರಘು ಭವಿಷ್ಯ ನುಡಿದಿದ್ದಾರೆ.
ನಾಮಿನೇಷನ್‌ನಿಂದ ಸೇಫ್ ಆದ ಶಮಂತ್:ಮನೆಯಿಂದ ಆಚೆ ಬರುವಾಗ ರಘು ಅವರಿಗೆ ಬಿಗ್ಬಾಸ್ ನೀಡಿದ ಅಧಿಕಾರ ಬಳಸಿಕೊಂಡು, ಶಮಂತ್ ಅವರನ್ನು ರಘು ಮುಂದಿನ ವಾರದ ನಾಮಿನೇಷನ್‌ನಿಂದ ಸೇಫ್ ಮಾಡಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಇದ್ದಷ್ಟು ಕಾನ್ಫಿಡೆನ್ಸ್, ಮೊದಲ ಇನ್ನಿಂಗ್ಸ್‌ನಲ್ಲಿ ಇದ್ದಿದ್ದರೆ ನಾನು ಟಾಪ್ 3ರಲ್ಲಿ ಇರುತ್ತಿದ್ದೆ. ಆದರೆ, ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಎಷ್ಟೇ ಚೆನ್ನಾಗಿ ಆಡಿದರೂ ಸಹ ಮೊದಲ ಇನಿಂಗ್ಸ್ ಇಂಪ್ಯಾಕ್ಟ್ ಇದ್ದೇ ಇರುತ್ತದೆ. ನಾನು ಅವಕಾಶಗಳಿಗಾಗಿ ತುಂಬ ಕಾಯ್ತಾ ಇದ್ದೆ. ಫಾರ್ಮ್ ಇರುವಾಗಲೇ ಗಂಗೂಲಿ ನಿವೃತ್ತಿ ಆದ ಹಾಗೇ ಆಗುತ್ತಿದೆ ಎಂದು ರಘು ಬೇಸರ ಹೊರಹಾಕಿದ್ರು.