ಕರ್ನಾಟಕ

karnataka

ETV Bharat / sitara

ಬಿಗ್​ ಬಾಸ್​ ಎಂಟನೇ ವಾರದ ಕ್ಯಾಪ್ಟನ್ ಆದ ರಘು... ಪ್ರಶಾಂತ್​ ನಡೆಗೆ ರಾಜೀವ್​ ಆಕ್ಷೇಪ - Kannada big boss news

ಎಂಟನೇ ವಾರದ ಕ್ಯಾಪ್ಟನ್ ಆಗಿ ರಘು ಆಯ್ಕೆ ಆಗಿದ್ದಾರೆ. ರಘು ತಮ್ಮ ಸಾಮರ್ಥ್ಯದಿಂದ ಕ್ಯಾಪ್ಟನ್ ಆಗಲಿಲ್ಲ. ಬದಲಿಗೆ ಪ್ರಶಾಂತ್ ಅವರ ಸಹಾಯದಿಂದ ಕ್ಯಾಪ್ಟನ್ ಆಗಿದ್ದು ವಿಶೇಷವಾಗಿದೆ‌.

Raghu become big boss captain
ಬಿಗ್​ ಬಾಸ್​ ಎಂಟನೇ ವಾರದ ಕ್ಯಾಪ್ಟನ್ ಆದ ರಘು

By

Published : Apr 25, 2021, 12:09 PM IST

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಎಂಟನೇ ವಾರದ ಮನೆಯ ಕ್ಯಾಪ್ಟನ್​ ಆಗಿ ರಘು ಆಯ್ಕೆ ಆಗಿದ್ದಾರೆ. ಈ ವಾರ ಬಿಗ್​ ಬಾಸ್​ ನೀಡಿದ್ದ ಟಾಸ್ಕ್​ ವಿಶೇಷವಾಗಿತ್ತು.

ರಾಜೀವ್

ಗಾರ್ಡನ್​ ಏರಿಯಾದಲ್ಲಿ ಹೂವಿನ ಮಳೆ ಆಗುತ್ತದೆ. ಸ್ಪರ್ಧಿಗಳು ಹೂವನ್ನು ಸಂಗ್ರಹಿಸಬೇಕು. ಹೆಚ್ಚು ಹೂವಿದ್ದವರು ಕ್ಯಾಪ್ಟನ್​ ಆಗುತ್ತಾರೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿದ್ದ ಮಂಜು, ರಾಜೀವ್​, ರಘು ಗೌಡ ಹಾಗೂ ಪ್ರಶಾಂತ್​ ಹೂವನ್ನು ಸಂಗ್ರಹಿಸಲು ಮುಂದಾದರು. ನಂತರ ಇದಕ್ಕೆ ಮನೆಯವರ ಸಹಾಯ ಕೂಡ ಪಡೆಯಬಹುದು ಎನ್ನುವ ಆದೇಶ ಬಂತು. ಆಗ ಅರವಿಂದ್​, ವೈಷ್ಣವಿ ಮೊದಲಾದವರು ರಘುಗೆ ಸಹಾಯ ಮಾಡಿದರು. ಕೊನೆಯಲ್ಲಿ ಅಚ್ಚರಿ ಎಂಬಂತೆ ಪ್ರಶಾಂತ್​ ತಾವು ಸಂಗ್ರಹಿಸಿದ್ದ ಹೂವನ್ನು ರಘು ಗೌಡಗೆ ನೀಡಿದರು. ಈ ಮೂಲಕ ರಘು ಕ್ಯಾಪ್ಟನ್​ ಆಗೋಕೆ ಸಹಾಯ ಮಾಡಿದರು.

ಮಂಜು
ನಂತರ ಮಾತನಾಡಿದ ಪ್ರಶಾಂತ್​, ಗುಂಪುಗಾರಿಕೆ ಮಾಡಿಕೊಂಡು ಆಡುವ ಮಂಜು ಹಾಗೂ ರಾಜೀವ್​ಗೆ ಒಂದು ಪಾಠ ಕಲಿಸಬೇಕಿತ್ತು. ಆ ಪಾಠವನ್ನು ನಾನು ಕಲಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು​.
ರಾಜೀವ್, ಪ್ರಶಾಂತ್, ರಘು, ಮಂಜು

ಆದರೆ ರಾಜೀವ್ ಈ ಬಗ್ಗೆ ಅಪಸ್ವರ ಎತ್ತಿದರು. ಅದಕ್ಕೆ ಪ್ರಶಾಂತ್, ಅರವಿಂದ್ ಬಳಿ ಬಂದು ಮನೆಯ ಯಾವುದೇ ಸದಸ್ಯರು ಸಹಾಯ ಮಾಡಬಹುದು ಎಂಬ ಆದೇಶ ಇರುವುದರಿಂದ ನಾನು ರಘುಗೆ ಸಹಾಯ ಮಾಡಿದ್ದೇನೆ. ಎಲ್ಲರೂ ಕ್ಯಾಪ್ಟನ್ ಆಗಿದ್ದಾರೆ. ರಘು ಒಮ್ಮೆ ಆಗಲಿ, ರಾಜೀವ್​ಗೆ ಗೋಲ್ಡನ್ ಪಾಸ್ ಇದೆ ಎಂದು ಹೇಳಿದರು. ಅದಕ್ಕೆ ಅರವಿಂದ್ ಸಮ್ಮತಿ ಸೂಚಿಸಿದರು. ನಂತರ, ರಘು ಕ್ಯಾಪ್ಟನ್ ಆದರು.

ಟಾಸ್ಕ್​ ಆಡುತ್ತಿರುವ ಬಿಗ್​ ಬಾಸ್​ ಸ್ಪರ್ಧಿಗಳು

ಕ್ಯಾಪ್ಟನ್ ಆದ ಬಳಿಕ ರಘು ಅವರ ಪತ್ನಿ ಕರೆ ಮಾಡಿ ಸಂತಸ ವ್ಯಕ್ತಪಡಿಸಿದರು. ‘ಚೆನ್ನಾಗಿ ಆಟ ಆಡುತ್ತೀದ್ದೀರಾ. ನಿಮ್ಮನ್ನು ಫಿನಾಲೆಯಲ್ಲಿ ನೋಡಲು ಬಯಸುತ್ತೇನೆ. ನಿಮ್ಮ ಎಲ್ಲ ಮಾತುಗಳನ್ನು ಸ್ಫೋರ್ಟಿವ್ ಆಗಿ ತೆಗೆದುಕೊಳ್ಳುತ್ತಿದ್ದೇನೆ. ಐ ಮಿಸ್ ಯು’ ಎಂದರು. ರಘು ತಮ್ಮ ಮಗನ ವಾಯ್ಸ್ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details