ಕರಾವಳಿ ಕುವರಿ ಚೈತ್ರಾ ರೈ ಕನ್ನಡ ಕಿರುತೆರೆ ವೀಕ್ಷಕರಿಗೆ ಪರಿಚಿತ ಮುಖ. ಆಶು ಬೆದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ಬ್ಯೂಟಿಫುಲ್ ವಿಲನ್ ವಿಶಾಖಾ ಆಗಿ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ಕನ್ನಡತಿ ಚೈತ್ರಾ ರೈ ಸದ್ಯ ತೆಲುಗು ಕಿರುತೆರೆಯಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಕಳೆದ ಏಳು ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ನಟಿಸುತ್ತಿರುವ ಚೈತ್ರಾ ರೈ ಅವರನ್ನು ಕನ್ನಡ ಕಿರುತೆರೆ ಮರೆತಿಲ್ಲ. ಇಂದು ಚೈತ್ರಾ ಅವರನ್ನು ಕಂಡಾಗ ಜನ ವಿಶಾಖಾ ಎಂದೇ ಗುರುತಿಸುವುದೇ ಅದಕ್ಕೆ ಉದಾಹರಣೆ.
ಹೋಟೆಲ್ ಮ್ಯಾನೆಜ್ ಮೆಂಟ್ ಕೋರ್ಸ್ ಮಾಡುತ್ತಿದ್ದ ಚೆಂದುಳ್ಳಿ ಚೆಲುವೆ ಚೈತ್ರಾಗೆ ಅದ್ಯಾವಾಗ ನಟಿಸಲು ಆಫರ್ ಬಂತು ಆಗಲೇ ಓದಿಗೆ ಬಾಯ್ ಹೇಳಿ ನಟನೆಗೆ ಹಾಯ್ ಹೇಳಿದ್ದರು. ಮನೆಯಲ್ಲಿ ನಟನೆಯ ರೀತಿ ನೀತಿಗಳು ತಿಳಿದವರಾರೂ ಇರಲಿಲ್ಲ. ಮೊದಲ ಬಾರಿಗೆ ನಟನಾ ಕ್ಷೇತ್ರಕ್ಕೆ ಕಾಲಿಡುವಾಗ ತುಂಬಾನೇ ನರ್ವಸ್ ಆಗಿದ್ದ ಚೈತ್ರಾ ಬಣ್ಣದ ಲೋಕಕ್ಕೆ ಬಂದು ಹತ್ತು ವರ್ಷಗಳು ಕಳೆದಿವೆ.