"ನೀವು ನೋಡ್ತಾ ಇದ್ದೀರಾ ಪ್ರೈಮ್ ಟೈಮ್ ನ್ಯೂಸ್. ನಾನು ರಚಿತಾ ರಾಮ್. ಬಣ್ಣ ಹೊಸದಾಗಿದೆ ಬಂಧ ಬಿಗಿಯಾಗಿದೆ" ಅಂತಿದ್ದಾರೆ ರಚಿತಾರಾಮ್. ನಟಿ ರಚಿತಾ ಲಾಕ್ಡೌನ್ ಸಮಯದಲ್ಲಿ ಕಾರ್ಯಕ್ರಮಗಳಿಲ್ಲದೇ ಆ್ಯಂಕರ್ ಆಗಿದ್ದಾರೆ ಅಂದುಕೊಂಡ್ರಾ. ಇಲ್ಲ ಇದು ಕೇವಲ ಪ್ರೋಮೋ.
ಕಲರ್ಸ್ ವಾಹಿನಿ ಜೂನ್ 1ರಿಂದ ಹೊಸ ಬಣ್ಣದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಈ ಹಿನ್ನೆಲೆಯಲ್ಲಿ ರಚಿತಾ ರಾಮ್ ಪ್ರೋಮೋ ವನ್ನು ವಿಭಿನ್ನವಾಗಿ ನಿರೂಪಿಸಿದ್ದಾರೆ. ಎರಡು ತಿಂಗಳ ಲಾಕ್ಡೌನ್ ಬಳಿಕ ಖಾಸಗಿ ವಾಹಿನಿಗಳು ಮನರಂಜನೆ ಕಾರ್ಯಕ್ರಮ, ಮುಖ್ಯವಾಗಿ ಧಾರಾವಾಹಿಗಳನ್ನು ಹೊಸ ಬಣ್ಣದಲ್ಲಿ ಪ್ರದರ್ಶಿಸಲು ಮುಂದಾಗಿವೆ. ಕಲರ್ಸ್ ಕನ್ನಡ ವಾಹಿನಿ ಹೊಸ ಕಾರ್ಯಕ್ರಮಗಳನ್ನು ಹಾಗೂ ಧಾರಾವಾಹಿಗಳನ್ನು ಯಾವ್ಯಾವ ಸಮಯದಲ್ಲಿ ಪ್ರಸಾರ ಮಾಡಲಿದೆ ಎಂಬುದನ್ನು ರಚಿತಾರಾಮ್ ನಿರೂಪಿಸಿದ್ದಾರೆ.