ತಮ್ಮ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಈ ಮುದ್ದು ಹುಡುಗಿ ಇಂದಿಗೂ ಪುಟ್ಟಗೌರಿ ಎಂದೇ ಚಿರಪರಿಚಿತ. 'ಆಕಾಶ ದೀಪ' ಧಾರಾವಾಹಿಯ ಮೂಲಕ ಬಣ್ಣದ ಪಯಣ ಆರಂಭಿಸಿದ ಪುಟ್ಟ ಗೌರಿ ನಿಜವಾದ ಹೆಸರು ರಂಜನಿ ರಾಘವನ್.
ಕಿರುತೆರೆ ಆಯ್ತು..ಇದೀಗ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ಪುಟ್ಟಗೌರಿ ರಂಜನಿ - ಜನ ಮೆಚ್ಚಿದ ನಾಯಕಿ
'ಪುಟ್ಟಗೌರಿ' ಧಾರಾವಾಹಿ ಮೂಲಕ ವೀಕ್ಷಕರಿಗೆ ಪರಿಚಿತರಾದ ರಂಜನಿ ರಾಘವನ್ ಇಂದಿಗೂ ಗೌರಿ ಎಂದೇ ಫೇಮಸ್. ಕಿರುತೆರೆ ಧಾರಾವಾಹಿ ಮೂಲಕ ವೀಕ್ಷಕರ ಮನ ಗೆದ್ದಿರುವ ರಂಜನಿ ರಾಘವನ್ ಇದೀಗ ಸಿನಿಮಾಗಳಲ್ಲಿ ಕೂಡಾ ಮಿಂಚಲು ರೆಡಿಯಾಗಿದ್ದಾರೆ.
![ಕಿರುತೆರೆ ಆಯ್ತು..ಇದೀಗ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ಪುಟ್ಟಗೌರಿ ರಂಜನಿ](https://etvbharatimages.akamaized.net/etvbharat/prod-images/768-512-4468066-thumbnail-3x2-ranjani.jpg)
ಎಂಬಿಎ ಮುಗಿಸಿರುವ ರಂಜನಿಗೆ ನಟಿಯಾಗಬೇಕು ಎಂಬ ಆಸೆಯೇನೂ ಇರಲಿಲ್ಲ. ಆದರೆ ತಾನೊಬ್ಬಳು ಗಾಯಕಿಯಾಗಬೇಕು ಎಂಬ ಮಹದಾಸೆ ಇತ್ತು. ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಬಂದ ರಂಜನಿ ಇಂದು ಬಣ್ಣದ ಲೋಕದ ಮುದ್ದು ಗೌರಿ. ರಂಗಭೂಮಿಯ ಮೂಲಕ ನಟನಾ ಪಯಣ ಆರಂಭಿಸಿದ ಈಕೆ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಬಹಳಷ್ಟು ನಾಟಕದಲ್ಲಿ ಅಭಿನಯಿಸಿದ್ದರು. ಇದು ನಾಟಕದಿಂದ ರಂಗಭೂಮಿ ನಂಟು ಬೆಸೆಯಲು ಕಾರಣವಾಯಿತು. ನಟನೆ ಹೊರತಾಗಿ ರಂಜನಿ ರಾಘವನ್ ಅದ್ಭುತ ಗಾಯಕಿಯೂ ಹೌದು. ಮೊದಲ ಬಾರಿ ಹಾಡು ಹೇಳಿದಾಗ ಅವರಿಗೆ ಕೇವಲ 4 ವರ್ಷ. ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿರುವ ಈಕೆಗೆ ಈಗಲೂ ಗಾಯಕಿಯಾಗುವ ಹಂಬಲ. 'ರಾಜಹಂಸ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಈ ಚೆಲುವೆ ಸದ್ಯ ಇಲ್ಲೂ ಬ್ಯುಸಿ. ಸುಬ್ಬ-ಸುಬ್ಬಿಯಲ್ಲಿ ನಟಿಸಿರುವ ಈಕೆ ಇದೀಗ ವೀಕ್ಷಕರಿಗೆ 'ಟಕ್ಕರ್' ಕೊಡಲು ಸಿದ್ಧರಾಗಿದ್ದಾರೆ. ಜನ ಮೆಚ್ಚಿದ ನಾಯಕಿ ಮತ್ತು ಮನ ಮೆಚ್ಚಿದ ಸೊಸೆ ಅವಾರ್ಡ್ಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಈ ಪುಟ್ಟ ಗೌರಿ ಸದಾ ಕಾಲ ವೀಕ್ಷಕರ ಮನದಲ್ಲಿ ಇರುವುದಂತೂ ನಿಜ.