ಕರ್ನಾಟಕ

karnataka

ETV Bharat / sitara

ಡ್ಯಾನ್ಸ್ ಕಿಂಗ್ ಪ್ರಭುದೇವ ಜತೆ ಪವರ್ ಸ್ಟಾರ್ ಬೊಂಬಾಟ್ ಡ್ಯಾನ್ಸ್ - Puneet Raj Kumar

ಡಾರ್ಲಿಂಗ್ ಕೃಷ್ಣ ಅಭಿನಯಿಸುತ್ತಿರುವ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಪ್ರಭುದೇವ ಹಾಗು ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳುವ ಮೂಲಕ ಬೊಂಬಾಟ್ ಡ್ಯಾನ್ಸ್​​ ಮಾಡಿದ್ದಾರೆ.

Puneet Raj Kumar Dance with Dance King Prabhu Deva
ಡ್ಯಾನ್ಸ್ ಕಿಂಗ್ ಪ್ರಭುದೇವ ಹೆಜ್ಜೆ ಹಾಕುತ್ತಿರುವ ಪುನೀತ್ ರಾಜ್ ಕುಮಾರ್

By

Published : Sep 16, 2021, 8:41 PM IST

ಭಾರತೀಯ ಚಿತ್ರರಂಗದಲ್ಲಿ ಮೈಕಲ್ ಜಾಕ್ಸನ್ ಎಂದೇ ಕರೆಯಿಸಿಕೊಂಡಿರುವ ನಟ ಹಾಗು ನಿರ್ದೇಶಕ ಪ್ರಭುದೇವ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಡೈರೆಕ್ಟರ್ ಜತೆಗೆ ಹೀರೊ ಕೂಡಾ ಆಗಿರುವ ಪ್ರಭುದೇವ ಅವರ ಡ್ಯಾನ್ಸ್​​ಗೆ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ಡ್ಯಾನ್ಸ್ ಕಿಂಗ್ ಜತೆ ನಟ ಪುನೀತ್‌ರಾಜ್ ಕುಮಾರ್ ಹೆಜ್ಜೆ ಹಾಕುವ ಮೂಲಕ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್, ಮೊದಲ ಬಾರಿಗೆ ಕನ್ನಡದಲ್ಲಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಅಭಿನಯಿಸುತ್ತಿರುವ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಪ್ರಭುದೇವ ಹಾಗು ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳುವ ಮೂಲಕ ಬೊಂಬಾಟ್ ಡ್ಯಾನ್ಸ್​​ ಮಾಡಿದ್ದಾರೆ.

ಡ್ಯಾನ್ಸ್ ಕಿಂಗ್ ಪ್ರಭುದೇವ ಜತೆ ಪುನೀತ್ ರಾಜ್ ಕುಮಾರ್

ತಮಿಳಿನ 'ಒ ಮೈ ಕಡುವಲೆ' ಸಿನಿಮಾದಿಂದ ಸ್ಫೂರ್ತಿ ಪಡೆದು ಕನ್ನಡದಲ್ಲಿ 'ಲಕ್ಕಿ ಮ್ಯಾನ್' ಚಿತ್ರವನ್ನು ಪ್ರಭುದೇವ ಸಹೋದರ, ನಟ ಮತ್ತು ನೃತ್ಯ ಸಂಯೋಜಕ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ತಮ್ಮನಿಗೆ ಅಣ್ಣ ಪ್ರಭುದೇವ ಸಾಥ್ ನೀಡಿದ್ದಾರೆ.

ಅಚ್ಚರಿ ಎಂದರೆ, ಇದೇ ಮೊದಲ ಬಾರಿಗೆ ಪ್ರಭುದೇವ ಜತೆ ಪುನೀತ್ ರಾಜ್ ಕುಮಾರ್ ಮಸ್ತ್ ಸ್ಟೆಪ್ ಹಾಕಿದ್ದಾರೆ. ಕಳೆದ ಎರಡು ದಿನಗಳಿಂದ ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಜತೆಗೆ ಸಂಗೀತ ಶೃಂಗೇರಿ, ರೋಷನಿ ಪ್ರಕಾಶ್ ನಾಯಕಿಯರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಭುದೇವ ಅವರ ಕಿರಿಯ ಸಹೋದರನಾಗಿರುವ ನಿರ್ದೇಶಕ ನಾಗೇಂದ್ರ ಪ್ರಸಾದ್ ಕನ್ನಡದಲ್ಲಿ ಚಿತ್ರ ಮತ್ತು ಮನಸೆಲ್ಲಾ ನೀನೆ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಪ್ರಭುದೇವ ಅವರ ನಿರ್ದೇಶನದ ಚಿತ್ರಗಳಲ್ಲಿ ತೆರೆಯ ಹಿಂದೆ ನಿಂತು ಸಾಕಷ್ಟು ಕೆಲಸ ಮಾಡಿದ್ದರು. ಅವುಗಳಲ್ಲಿ ತಮಿಳಿನಲ್ಲಿ ವೇದಿ ಮತ್ತು ಹಿಂದಿಯಲ್ಲಿ ರೌಡಿ ರಾಥೋಡ್ ಮುಖ್ಯವಾದವು.

ಸ್ವತಂತ್ರ ನಿರ್ದೇಶಕರಾಗಿ 'ಲಕ್ಕಿ ಮ್ಯಾನ್' ಮೊದಲ ಚಿತ್ರ. ಮೂಲತಃ ಮೈಸೂರಿನವರಾದ ಪ್ರಭುದೇವ ಕನ್ನಡದಲ್ಲಿ ಮೊದಲು ನಟಿಸಿದ್ದು ಉಪೇಂದ್ರ ಅವರ ಹೆಚ್2ಒ ಚಿತ್ರದಲ್ಲಿ. ತಮ್ಮನ ಮನಸೆಲ್ಲಾ ನೀನೆ ಚಿತ್ರದಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಮತ್ತು 2007ರಲ್ಲಿ ಪ್ರಾರಂಭ ಚಿತ್ರದಲ್ಲಿ ಕೂಡ ನಟಿಸಿದ್ದರು. ಇದೀಗ 13 ವರ್ಷಗಳ ಬಳಿಕ ಪ್ರಭುದೇವ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

ಇದನ್ನೂ ಓದಿ:'ನಿರ್ಮಾಪಕ ಜಯಣ್ಣನಿಗೆ 13 ಕೋಟಿ ಕೊಟ್ಟ ಯಶ್​'...ಈ ವದಂತಿ ಬಗ್ಗೆ ಜಯಣ್ಣ ಹೇಳಿದ್ದೇನು?

ABOUT THE AUTHOR

...view details