ಕರ್ನಾಟಕ

karnataka

ETV Bharat / sitara

ಚಕ್ರವರ್ತಿ ಚಂದ್ರಚೂಡಗೆ ಶಾಕ್ ಕೊಟ್ಟ ಪ್ರಿಯಾಂಕಾ ತಿಮ್ಮೇಶ್ - ನೇರವಾಗಿ ನಾಮಿನೇಟ್

ಕಳಪೆ ಬೋರ್ಡ್ ಹೊತ್ತು ಕಳೆದ ವಾರ ಜೈಲು ಸೇರಿದ್ದ ಚಕ್ರವರ್ತಿ ಅನೇಕ ಅಸಂವಿಧಾನಿಕ ಪದಗಳನ್ನು ಬಳಸಿದ್ದರು. ಈ ವಾರ ಮನೆಯಿಂದ ಹೊರ ಬರುವ ಸಂದರ್ಭದಲ್ಲಿ ಪ್ರಿಯಾಂಕಾ ತಿಮ್ಮೇಶ್, ಚಂದ್ರಚೂಡಗೆ ಶಾಕ್ ಕೊಟ್ಟಿದ್ದು, ನೇರವಾಗಿ ನಾಮಿನೇಟ್ ಮಾಡಿದ್ದಾರೆ.

Priyanka Thimmesh
ಪ್ರಿಯಾಂಕಾ ತಿಮ್ಮೇಶ್

By

Published : Jul 19, 2021, 7:01 AM IST

ಬಿಗ್​ಬಾಸ್ ಸೀಸನ್ 8 ರಲ್ಲಿ ಪ್ರಿಯಾಂಕಾ ತಿಮ್ಮೇಶ್ ಪ್ರಯಾಣ ಅಂತ್ಯವಾಗಿದೆ. ಹೊರಬರುವ ವೇಳೆ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಚಕ್ರವರ್ತಿಗೆ ಶಾಕ್ ನೀಡಿದ್ದು, ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಪ್ರಿಯಾಂಕಾ ಮನೆಯಿಂದ ಹೊರ ಬರುವ ಸಂದರ್ಭದಲ್ಲಿ ಚಕ್ರವರ್ತಿ ಎಲ್ಲರಿಂದ ದೂರ ಉಳಿದು ಲಿವಿಂಗ್‌ ಏರಿಯಾದಲ್ಲಿ ಕುಳಿತಿದ್ದರು. ನೀವು ನೇರ ನಾಮಿನೇಟ್​ಗೆ ಯಾವ ಒಬ್ಬ ಸದಸ್ಯರನ್ನು ಆಯ್ಕೆ ಮಾಡುತ್ತೀರಾ? ಎಂದು ಬಿಗ್ ಬಾಸ್ ಕೇಳಿದಾಗ, ಪ್ರಿಯಾಂಕಾ ತಿಮ್ಮೇಶ್ ಅವರು ಚಕ್ರವರ್ತಿ ಹೆಸರನ್ನು ಸೂಚಿಸಿದರು. ಆಗ ಚಕ್ರವರ್ತಿ ಅಸಭ್ಯವಾಗಿ ಬೆರಳು ತೋರಿಸುವ ಮೂಲಕ ನಾಮಿನೇಟ್ ಅನ್ನು ಖಂಡಿಸಿದರು. ಬೆರಳು ತೋರಿಸಿದ್ದನ್ನು ಬಿಗ್​ಬಾಸ್ ಬ್ಲರ್ ಮಾಡಿದರು.

ಪ್ರಿಯಾಂಕಾ ತಿಮ್ಮೇಶ್

ಈ ಮಧ್ಯೆ ದಿವ್ಯಾ ಸುರೇಶ್, ಪ್ರಿಯಾಂಕಾ ಅವರ ಎಲಿಮಿನೇಷನ್ ​ಅನ್ನು ಮನಸ್ಸಿಗೆ ಹಚ್ಚಿಕೊಂಡು ಕಣ್ಣೀರು ಹಾಕಿದರು. ಆಗ ಮಂಜು ಪಾವಗಡ ನಾನಿದ್ದೇನೆ ಎಂದು ಸಮಾಧಾನಗೊಳಿಸಿದರು.
ಶಮಂತ್ ಸಹ ಪ್ರಿಯಾಂಕಾ ಅವರಿಗಾಗಿ ಹಾಡನ್ನು ಬರೆದು ಹಾಡಿದರು. ನಂತರ ಸುದೀಪ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಪ್ರಿಯಾಂಕಾ, ಆ ಮನೆಯಲ್ಲಿ ಎಲ್ಲರೂ ಒಂದೇ ರೀತಿ ಇದ್ದರು.

ಆದರೆ ಚಕ್ರವರ್ತಿ ಮಾತ್ರ ವಿಭಿನ್ನವಾಗಿ ನನ್ನೊಂದಿಗೆ ಇದ್ದರು. ನನ್ನ ಬಗ್ಗೆ ಯಾಕೆ ಆ ರೀತಿ ಮಾಡುತ್ತಿದ್ದರು ಎಂಬುದು ನನಗೆ ಈಗಲೂ ಅರ್ಥವಾಗುತ್ತಿಲ್ಲ. ಪ್ರಶಾಂತ್ ಸಂಬರ್ಗಿ ತುಂಬಾ ಮುಗ್ದರು ಎಂಬುದು ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಗೊತ್ತಾಯ್ತು ಎಂದರು.

ಇನ್ನು ಫೈನಲ್​ನಲ್ಲಿ ಯಾವ ಐವರು ಸ್ಪರ್ಧಿಗಳನ್ನು ಕಾಣಲು ಬಯಸುತ್ತೀರಾ? ಎಂದು ಸುದೀಪ್​ ಕೇಳಿದಾಗ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಶಮಂತ್, ಅರವಿಂದ್ ಹಾಗೂ ಮಂಜು ಎಂದರು. ಇವರಲ್ಲಿ ಯಾರು ಗೆಲ್ಲಬೇಕು? ಎಂದಾಗ ಮಂಜು ಪಾವಗಡ ಅವರ ಹೆಸರನ್ನು ಸೂಚಿಸಿದರು.

ಒಟ್ಟಿನಲ್ಲಿ ಕಳಪೆ ಬೋರ್ಡ್ ಹೊತ್ತು ಕಳೆದ ವಾರ ಜೈಲು ಸೇರಿದ್ದ ಚಕ್ರವರ್ತಿ ಅನೇಕ ಅಸಂವಿಧಾನಿಕ ಪದಗಳನ್ನು ಬಳಸಿದ್ದರು. ಈಗ ನಾಮಿನೇಟ್ ಆದ ವೇಳೆ, ಇಂಥದ್ದೊಂದು ಸೈನ್ ತೋರಿಸಿದ್ದು ಆಕ್ರೋಶಕ್ಕೆ ಕಾರಣವಾಗುತ್ತಿದೆ.

ABOUT THE AUTHOR

...view details