ಕರ್ನಾಟಕ

karnataka

By

Published : Feb 25, 2020, 11:48 AM IST

ETV Bharat / sitara

ಸೆನ್ಸಾರ್ ಅಂಗಳದಲ್ಲಿ ‘ಪ್ರೆಸೆಂಟ್ ಪ್ರಪಂಚ 0% ಲವ್’

ಕಾಮಿಡಿ, ಲವ್, ಸೆಂಟಿಮೆಂಟ್ ಹಾಗೂ ಕೌಟುಂಬಿಕ ಕಥಾ ವಸ್ತು ಹೊಂದಿರುವ ‘ಪ್ರೆಸೆಂಟ್ ಪ್ರಪಂಚ 0% ಲವ್’ ಶೂಟಿಂಗ್ ಮುಗಿಸಿದ್ದು ಸದ್ಯಕ್ಕೆ ಸೆನ್ಸಾರ್ ಅಂಗಳದಲ್ಲಿದೆ. ಈ ವರ್ಷದ ವಾರ್ಷಿಕ ಪರೀಕ್ಷೆಗಳು ಮುಗಿದ ನಂತರ ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

Present Prapancha 0% Love
‘ಪ್ರೆಸೆಂಟ್ ಪ್ರಪಂಚ 0% ಲವ್’

ಪ್ರೇಮಿಗಳ ದಿನದಂದು ಬಿಡುಗಡೆ ಆದ ಪೋಸ್ಟರ್​​​​​​​ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆದ ‘ಪ್ರೆಸೆಂಟ್ ಪ್ರಪಂಚ 0% ಲವ್’ ಶೂಟಿಂಗ್, ಪೋಸ್ಟ್​ ಪ್ರೊಡಕ್ಷನ್ ಎಲ್ಲವನ್ನೂ ಮುಗಿಸಿಕೊಂಡು ಈಗ ಸೆನ್ಸಾರ್ ಬಳಿ ಹೋಗಲು ಪ್ರಥಮ ಪ್ರತಿಯನ್ನು ಸಿದ್ಧಮಾಡಿಕೊಂಡಿದೆ. ಸೆನ್ಸಾರ್​​​​ ಸರ್ಟಿಫಿಕೇಟ್ ದೊರೆತ ಕೂಡಲೇ ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ.

‘ಪ್ರೆಸೆಂಟ್ ಪ್ರಪಂಚ 0% ಲವ್’

ಈ ವರ್ಷದ ವಾರ್ಷಿಕ ಪರೀಕ್ಷೆಗಳು ಮುಗಿದ ನಂತರ ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಫ್ರೆಂಡ್ಸ್ ಮೀಡಿಯಾ ಪ್ರೊಡಕ್ಷನ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಕೃಷ್ಣಮೂರ್ತಿ ಹಾಗೂ ರವಿಕುಮಾರ್. ಹೆಚ್​​ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ಸಂಯುಕ್ತ 2’ ಚಿತ್ರವನ್ನು ನಿರ್ದೇಶಿಸಿರುವ ಅಭಿರಾಮ್ ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಕಾಮಿಡಿ, ಲವ್, ಸೆಂಟಿಮೆಂಟ್ ಹಾಗೂ ಕೌಟುಂಬಿಕ ಕಥಾ ವಸ್ತು ಪ್ರತಿಯೊಂದೂ ಈ ಚಿತ್ರದಲ್ಲಿದೆ. ಅಭಿರಾಮ್​​​​​​​ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಿದ್ಧಪಡಿಸಿದ್ದಾರೆ. ಕೆ.ವಿ. ರವಿ ಚಿತ್ರದ ಮೂರು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಸಂಕಲನ, ಕುಂಗ್ ಫೂ ಚಂದ್ರು, ಅಲ್ಟಿಮೇಟ್​​ ಶಿವು ಸಾಹಸ, ಹರಿಕೃಷ್ಣ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವಿ. ನಾಗೇಂದ್ರ ಪ್ರಸಾದ್ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

‘ಪ್ರೆಸೆಂಟ್ ಪ್ರಪಂಚ 0% ಲವ್’ ಚಿತ್ರದ ನಾಯಕಿ, ನಾಯಕ

'ಸಂಯುಕ್ತ-2' ಹಾಗೂ 'ಕೆಮಿಸ್ಟ್ರಿ ಆಫ್ ಕರಿಯಪ್ಪ ' ಸಿನಿಮಾ ನಿರ್ಮಾಪಕ ಅರ್ಜುನ್ ಮಂಜುನಾಥ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರೊಂದಿಗೆ ಯಶಸ್ ಅಭಿ, ಸಂಭ್ರಮ ಶ್ರೀ, ಅಕ್ಷತ, ತಬಲಾ ನಾಣಿ, ಎಸ್​​. ನಾರಾಯಣ್, ಓಂ ಪ್ರಕಾಶ್ ರಾವ್, ಚಂದನ್ ಆಚಾರ್, ಸಂಜನ, ಗೋವಿಂದೇ ಗೌಡ ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ.

For All Latest Updates

TAGGED:

ABOUT THE AUTHOR

...view details