ಕರ್ನಾಟಕ

karnataka

ETV Bharat / sitara

BIG BOSS ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ನಡೆದಿದೆ ಭರದ ಸಿದ್ಧತೆ - ಕನ್ನಡ ಬಿಗ್ ಬಾಸ್ ಸೀಸನ್ 8 ರ ಫಿನಾಲೆಗೆ ನಡೆದಿದೆ ಬದರ ಸಿದ್ಧತೆ

ಈಗಾಗಲೇ ಫಿನಾಲೆಯ ಮನರಂಜನೆ ಕಾರ್ಯಕ್ರಮಗಳ ಪೈಕಿ ಡ್ಯಾನ್ಸ್ ಹಾಗೂ ಹಾಡಿನ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಗ್ರಾಂಡ್ ಫಿನಾಲೆ ದಿನವಾದ ಇಂದು ಮನೆಯನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಸ್ಪರ್ಧಿಗಳಲ್ಲಿ ಒಂದೆಡೆ ಸಂತೋಷ ಇನ್ನೊಂದೆಡೆ ಆತಂಕ ಮನೆಮಾಡಿದೆ.

ಬಿಗ್ ಬಾಸ್ ಸೀಸನ್ 8
ಬಿಗ್ ಬಾಸ್ ಸೀಸನ್ 8

By

Published : Aug 7, 2021, 12:36 PM IST

ಇಂದು ಸಂಜೆ ಆರು ಗಂಟೆಯಿಂದ ಬಿಗ್ ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಕಳೆದ ಫೆಬ್ರವರಿ 28 ರಂದು ಆರಂಭವಾಗಿದ್ದ ಬಿಗ್ ಬಾಸ್, 72 ದಿನಗಳ ಬಳಿಕ ಲಾಕ್ ಡೌನ್ ನಿಂದಾಗಿ ರದ್ದಾಗಿತ್ತು. ಮತ್ತೆ ಜುಲೈ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಮೂಲಕ ಆರಂಭವಾಯಿತು.

ಈ ಸೀಸನ್​​​ನಲ್ಲಿ 20 ಮಂದಿ ಸ್ಪರ್ಧಿಗಳು ಮನೆ ಪ್ರವೇಶಿಸಿದ್ದರು. ಅದರಲ್ಲಿ ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡವರು. ಪ್ರತಿ ವಾರ ಒಬ್ಬೊಬ್ಬರಾಗಿ ಎಲಿಮಿನೇಟ್ ಆದರು. ಮೊದಲ ಇನ್ನಿಂಗ್ಸ್ ನಲ್ಲಿ ಎಂಟು ಮಂದಿ ಮನೆಯಿಂದ ಹೊರ ಹೋಗಿದ್ದರು.‌ ವೈಲ್ಡ್ ಕಾರ್ಡ್ ಎಂಟ್ರಿ ಸೇರಿ ಮನೆಯಲ್ಲಿ 12 ಮಂದಿ ಸೆಕೆಂಡ್ ಇನ್ನಿಂಗ್ಸ್​​ಗೆ ಪ್ರವೇಶಿಸಿದ್ದರು.

ಬಿಗ್ ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆ

ಇದೀಗ ಐವರು ಉಳಿದುಕೊಂಡಿದ್ದು, ಇಂದು ಸಂಜೆ ಮನೆಯಿಂದ‌ ಇಬ್ಬರು ಅಥವಾ ಮೂವರು ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಳೆ ಬಿಗ್ ಬಾಸ್ ವೇದಿಕೆ ಮೇಲೆ ವಿನ್ನರ್ ಯಾರು ಎಂಬುದನ್ನು ಘೋಷಿಸಲಾಗುವುದು.

ಈಗಾಗಲೇ ಫಿನಾಲೆಯ ಮನರಂಜನೆ ಕಾರ್ಯಕ್ರಮಗಳ ಪೈಕಿ ಡ್ಯಾನ್ಸ್ ಹಾಗೂ ಹಾಡಿನ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಗ್ರಾಂಡ್ ಫಿನಾಲೆ ದಿನವಾದ ಇಂದು ಮನೆಯನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಸ್ಪರ್ಧಿಗಳಲ್ಲಿ ಒಂದೆಡೆ ಸಂತೋಷ ಇನ್ನೊಂದೆಡೆ ಆತಂಕ ಮನೆಮಾಡಿದೆ.

ಇದೀಗ ಮನೆಯಲ್ಲಿ ಕೆ.ಪಿ ಅರವಿಂದ್, ಮಂಜು ಪಾವಗಡ, ವೈಷ್ಣವಿ ಗೌಡ, ದಿವ್ಯ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ಇದ್ದಾರೆ. ಇಂದು ಮತ್ತು ನಾಳೆ ಸಂಜೆ 6 ಗಂಟೆಗೆ ಗ್ರ್ಯಾಂಡ್​​ ಫಿನಾಲೆ ನಡೆಯಲಿದೆ.

ABOUT THE AUTHOR

...view details