ಕರ್ನಾಟಕ

karnataka

ETV Bharat / sitara

ವೀಕ್ಷಕರ ಕೊರತೆಯಿಂದ ಪ್ರಸಾರ ನಿಲ್ಲಿಸುತ್ತಿರುವ 'ಪ್ರೇಮಲೋಕ' - No viewers for Premaloka serial

ಕಳೆದ ವರ್ಷ ಜೂನ್​​ನಲ್ಲಿ ಪ್ರಸಾರ ಆರಂಭಿಸಿದ್ದ ವಿಜಯ್ ಸೂರ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ 'ಪ್ರೇಮಲೋಕ' ವೀಕ್ಷಕರ ಕೊರತೆಯಿಂದ ಪ್ರಸಾರ ನಿಲ್ಲಿಸುತ್ತಿದೆ. ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿರುವುದರಿಂದ ಧಾರಾವಾಹಿ ತಂಡ ಕೂಡಾ ಬೇಸರ ವ್ಯಕ್ತಪಡಿಸಿದೆ.

Premaloka serial stop telecasting
'ಪ್ರೇಮಲೋಕ'

By

Published : Oct 5, 2020, 7:46 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಪ್ರೇಮಲೋಕ' ತನ್ನ ಪಯಣ ನಿಲ್ಲಿಸುತ್ತಿದೆ. ಪ್ರೇಮಲೋಕವು ಹಿಂದಿಯ 'ಕಸೌಟಿ ಜಿಂದಗಿ ಕೆ' ಧಾರಾವಾಹಿಯ ರೀಮೇಕ್ ಆಗಿದ್ದು ಕಳೆದ ವರ್ಷ ಜೂನ್​​​​​​​​​​ನಲ್ಲಿ ಪ್ರಸಾರ ಆರಂಭಿಸಿತ್ತು. ಆರಂಭದಲ್ಲಿ ಈ ಧಾರಾವಾಹಿ ವೀಕ್ಷಕರನ್ನು ಸೆಳೆದರೂ ಕೊನೆಯವರೆಗೂ ಅವರನ್ನು ಹಿಡಿದಿಟ್ಟುಕೊಳ್ಳಲಾಗಲಿಲ್ಲ.

'ಪ್ರೇಮಲೋಕ'

ಲಾಕ್​​​ಡೌನ್ ಸಮಯದಲ್ಲಿ ಕನ್ನಡ ಕಿರುತೆರೆಯ ಸುಮಾರು 30ಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರ ನಿಲ್ಲಿಸಿದ್ದವು. ಇದೀಗ ಆ ಸಾಲಿಗೆ ಪ್ರೇಮಲೋಕ ಕೂಡಾ ಸೇರಿದೆ. ಪ್ರೇಮಲೋಕದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ವಿಜಯ್ ಸೂರ್ಯ ಇನ್ಸ್ಟಾಗ್ರಾಮ್​​​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಎಲ್ಲವೂ ಕೊನೆಯಾಗುತ್ತಿದೆ. ಇಷ್ಟು ದಿನ ಧಾರಾವಾಹಿ ನೋಡಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಈ ಜರ್ನಿ ಇಷ್ಟೊಂದು ಸುಂದರವಾಗಿದೆ ಎಂದರೆ ಅದಕ್ಕೆ ನೀವೇ ಕಾರಣ. ನಿಮ್ಮ ಪ್ರೋತ್ಸಾಹ, ಬೆಂಬಲವಿಲ್ಲದಿದ್ದರೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ ಲವ್ ಯೂ " ಎಂದು ಅವರು ಬರೆದುಕೊಂಡಿದ್ದಾರೆ.

ವೀಕ್ಷಕರ ಕೊರತೆಯಿಂದ ಪ್ರೇಮಲೋಕ ಮುಕ್ತಾಯಗೊಳ್ಳುತ್ತಿದೆ. ಇದೇ ಅಕ್ಟೋಬರ್​​ 3 ರಂದು ಧಾರಾವಾಹಿಯ ಕೊನೆಯ ಶೂಟಿಂಗ್ ನಡೆದಿತ್ತು. ಧಾರಾವಾಹಿಯಲ್ಲಿ ವಿಜಯ್ ಸೂರ್ಯ ನಾಯಕ ಸೂರ್ಯಕಾಂತ್ ಆಗಿ ನಟಿಸಿದ್ದರೆ ನಾಯಕಿ ಪ್ರೇರಣ ಆಗಿ ಅಂಕಿತ ನವ್ಯಾ ಗೌಡ ನಟಿಸಿದ್ದರು. ಉಳಿದಂತೆ ಬಾಲರಾಜ್, ವಾಣಿಶ್ರೀ, ಅನಿಕಾ ಸಿಂಧ್ಯ, ಮಾಲತಿ ಸರ್​​ದೇಶ್​​ಪಾಂಡೆ, ರವಿ ಭಟ್ ಹಾಗೂ ಇನ್ನಿತರರು ನಟಿಸಿದ್ದರು. ಧಾರಾವಾಹಿ ಮುಕ್ತಾಯಗೊಳ್ಳುತ್ತಿರುವುದಕ್ಕೆ ಇತರ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಅಂಕಿತ ನವ್ಯಾ ಗೌಡ

ABOUT THE AUTHOR

...view details