ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ರೇಮಲೋಕ' ಧಾರಾವಾಹಿ ಯಶಸ್ವಿ 200 ಸಂಚಿಕೆಗಳನ್ನು ಪೂರೈಸಿದೆ. ಹಿಂದಿಯ ಜನಪ್ರಿಯ 'ಕಸೂತಿ ಜಿಂದಗಿ ಕೇ' ಧಾರಾವಾಹಿಯ ರೀಮೇಕ್ ಈ 'ಪ್ರೇಮಲೋಕ'.
ಡಬಲ್ ಸೆಂಚುರಿ ಬಾರಿಸಿದ ವಿಜಯ ಸೂರ್ಯ ಅಭಿನಯದ 'ಪ್ರೇಮಲೋಕ' - Vijayasurya starring Premaloka
ವಿಜಯ್ ಸೂರ್ಯ ಹಾಗೂ ಅಂಕಿತಾ ನವ್ಯಾಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಪ್ರೇಮಲೋಕ' ಧಾರಾವಾಹಿ ಯಶಸ್ವಿ 200 ಎಪಿಸೋಡ್ಗಳನ್ನು ಪೂರೈಸಿದೆ. ಧಾರಾವಾಹಿ ವೀಕ್ಷಕರನ್ನು ಎಷ್ಟು ಸೆಳೆದಿದೆ ಎನ್ನವುದಕ್ಕೆ ಇದು 200 ಸಂಚಿಕೆಗಳನ್ನು ಪೂರೈಸಿರುವುದೇ ಸಾಕ್ಷಿಯಾಗಿದೆ.
ಈ ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ವಿಜಯ್ ಸೂರ್ಯ ಕಾಣಿಸಿಕೊಂಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ಆಗಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ವಿಜಯ್ ಸೂರ್ಯ 'ಪ್ರೇಮಲೋಕ'ದ ಸೂರ್ಯನಾಗಿ ಮತ್ತೆ ಕಿರುತೆರೆಗೆ ಮರಳಿ ಬಂದಿರುವುದು ವೀಕ್ಷಕರಿಗೆ ಸಂತಸ ನೀಡಿತ್ತು. ಜೊತೆಗೆ ಮೊದಲ ಧಾರಾವಾಹಿಯಲ್ಲೇ ನಾಯಕಿ ಪಾತ್ರದ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿರುವುದಕ್ಕೆ ಅಂಕಿತಾ ನವ್ಯಾಗೌಡ ಕೂಡಾ ಬಹಳ ಖುಷಿಯಾಗಿದ್ದಾರೆ. ನಾಯಕಿ ಪ್ರೇರಣಾ ಆಗಿ ಅಭಿನಯಿಸುತ್ತಿರುವ ಅಂಕಿತಾ, ಮನೋಜ್ಞ ಅಭಿನಯದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕುಲವಧು, ಸೇವಂತಿ ಧಾರಾವಾಹಿ ಖ್ಯಾತಿಯ ಶಿಶಿರ್ ಶಾಸ್ತ್ರಿ ಕೂಡಾ ಈ ಧಾರಾವಾಹಿಯಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರೋಚಕ ಕಥೆ ಹೊಂದಿರುವ 'ಪ್ರೇಮಲೋಕ' ಧಾರಾವಾಹಿ ಕಿರುತೆರೆಪ್ರಿಯರ ಮನ ಸೆಳೆದಿದೆ ಎಂಬುದಕ್ಕೆ ಧಾರಾವಾಹಿ ಯಶಸ್ವಿ 200 ಸಂಚಿಕೆ ಪೂರೈಸಿರುವುದೇ ಸಾಕ್ಷಿ. ಉಳಿದಂತೆ ನಾಯಕ ಸೂರ್ಯ ಅಲಿಯಾಸ್ ವಿಜಯ ಸೂರ್ಯ ತಂದೆಯಾಗಿ ಬಾಲರಾಜ್ ಮತ್ತು ತಾಯಿಯಾಗಿ ವಾಣಿಶ್ರೀ ಅಭಿನಯಿಸಿದ್ದಾರೆ. ನಾಯಕಿ ಅಂಕಿತಾ ನವ್ಯಾಗೌಡ ತಂದೆಯಾಗಿ ರವಿ ಭಟ್ ಮತ್ತು ತಾಯಿಯಾಗಿ ಮಾಲತಿ ಸರದೇಶ್ಪಾಂಡೆ ನಟಿಸಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಬ್ಯೂಟಿಫುಲ್ ವಿಲನ್ ಕುಮುದಾ ಆಗಿ ನಟಿಸಿರುವ ಅನಿಕಾ ಸಿಂಧ್ಯಾ ನಾಯಕನ ಅಕ್ಕನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.