ಕರ್ನಾಟಕ

karnataka

ಮೊದಲ ಬಾರಿಗೆ ವಿಭಿನ್ನ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಬಂದ ಪ್ರಥಮಾ ಪ್ರಸಾದ್

By

Published : Mar 4, 2021, 1:52 PM IST

ಇದೇ ಮೊದಲ ಬಾರಿಗೆ ನಟಿ ಪ್ರಥಮಾ ಪ್ರಸಾದ್ ಧಾರಾವಾಹಿಯೊಂದರಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಥಮಾ, ತಮಗೆ ಈ ಅವಕಾಶ ನೀಡಿದ ಶ್ರುತಿ ನಾಯ್ಡು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Prathama Prasad
ಪ್ರಥಮಾ ಪ್ರಸಾದ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕನ ಅತ್ತೆ ಪುಟ್ಟತ್ತೆಯಾಗಿ ಕಾಣಿಸಿಕೊಂಡಿದ್ದ ಪ್ರಥಮಾ ಪ್ರಸಾದ್ ಬ್ರಹ್ಮಗಂಟು ಧಾರಾವಾಹಿಯಿಂದ ಹೊರಬಂದ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಆ ಗ್ಯಾಪ್​​​ನಲ್ಲಿ ಅವರು ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದರು. ಇದೀಗ ಮತ್ತೆ ಪ್ರಥಮಾ ಕಿರುತೆರೆಗೆ ಮರಳಿದ್ದಾರೆ.

ಕಿರುತೆರೆ ನಟಿ ಪ್ರಥಮಾ ಪ್ರಸಾದ್

ಇದನ್ನೂ ಓದಿ:ವನ್ಯಜೀವಿಗಳ ರಕ್ಷಣೆಗೆ ಎಲ್ಲರೂ ಕೈ ಜೋಡಿಸಿ ಎಂದ ಚಾಲೆಂಜಿಂಗ್ ಸ್ಟಾರ್

ಈ ಬಾರಿ ಪ್ರಥಮಾ ಪ್ರಸಾದ್, ವಿಭಿನ್ನ ಪಾತ್ರದ ಮೂಲಕ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಪ್ರಥಮಾ ಪ್ರಸಾದ್ ಈ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ದೇವಿ ಪಾತ್ರಗಳಲ್ಲಿ ಹಾಗೂ ಇತರರಿಗೆ ಸಹಾಯ ಮಾಡುವ ಒಳ್ಳೆ ಮನಸ್ಸುಳ್ಳ ಹೆಣ್ಣಾಗಿ ನಟಿಸುತ್ತಿದ್ದ ಪ್ರಥಮಾ ಇದೇ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ಪ್ರಥಮಾ

ಈ ಸಂತಸದ ವಿಚಾರವನ್ನು ಪ್ರಥಮಾ ತಮ್ಮ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. "ಇದು 2021 ರಲ್ಲಿನಿಮಗೆ ತಿಳಿಸುತ್ತಿರುವ ಎರಡನೇ ಮುಖ್ಯವಾದ ವಿಚಾರ. 'ಮನಸೆಲ್ಲಾ ನೀನೇ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಮತ್ತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಆದರೆ ಈ ಧಾರಾವಾಹಿ ಮೂಲಕ ಇದೇ ಮೊದಲ ಬಾರಿಗೆ ನಾನು ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇಂತಹ ಉತ್ತಮ ಅವಕಾಶ, ಪಾತ್ರ ನೀಡಿದಕ್ಕಾಗಿ ಶ್ರುತಿ ನಾಯ್ಡು ಅವರಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನನ್ನ ಮೇಲಿರಲಿ" ಎಂದು ಬರೆದುಕೊಂಡಿದ್ದಾರೆ.

ಪ್ರಥಮಾ, ಹಿರಿಯ ನಟಿ ವಿನಯಾ ಪ್ರಸಾದ್ ಮಗಳು

ABOUT THE AUTHOR

...view details