ಕರ್ನಾಟಕ

karnataka

ETV Bharat / sitara

Bigg Boss ಮನೆಯಲ್ಲಿ ಮತ್ತೆ ಜೈಲು ಸೇರಿದ ಪ್ರಶಾಂತ್ ಸಂಬರಗಿ - Prashant Sanbaragi

ಬಿಗ್​​ಬಾಸ್ ಮನೆಯಲ್ಲಿ ಕಳಪೆ ಗಲಾಟೆ ಜೋರಾಗಿತ್ತು. ಪ್ರಶಾಂತ್ ಸಂಬರಗಿ ಹಾಗೂ ಶುಭಾಪೂಂಜಾಗೆ ಕಳಪೆ ಅಂಕ ಸಿಕ್ಕಿದ್ದರಿಂದ ಮನೆಯಲ್ಲಿ ಗಲಾಟೆ ಗದ್ದಲ ಏರ್ಪಟ್ಟಿತು. ಆದರೆ 2ನೇ ಬಾರಿ ಕ್ಯಾಪ್ಟನ್ ಪಟ್ಟ ಅಲಂಕರಿಸಿದ ದಿವ್ಯಾ ಉರುಡುಗ ಸಂಬರಗಿಯನ್ನು ಕಳಪೆ ಎಂದು ತೀರ್ಮಾನಿಸಿ ಜೈಲಿಗೆ ಕಳುಹಿಸಿದರು.

Prashant ambargi
ಪ್ರಶಾಂತ್ ಸಂಬರಗಿ

By

Published : Jul 24, 2021, 8:19 AM IST

ಮೂರನೇ ಬಾರಿಗೆ ಪ್ರಶಾಂತ್ ಸಂಬರಗಿ ಕಳಪೆ ಪಡೆದು ಈ ವಾರ ಜೈಲಿಗೆ ಹೋಗಿದ್ದಾರೆ. ಹಾಗೆಯೇ, ಬಿಗ್​​​ಬಾಸ್ ಸೀಸನ್ 8ರಲ್ಲಿ 2ನೇ ಬಾರಿಗೆ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿದ್ದಾರೆ. ಇಡೀ ವಾರದಲ್ಲಿ ನಡೆದ ‘ನಾನಾ ನೀನಾ’ ಟಾಸ್ಕ್​​​ನಲ್ಲಿ ವೈಷ್ಣವಿ, ಮಂಜು, ಅರವಿಂದ್, ಶಮಂತ್ ಹಾಗೂ ದಿವ್ಯಾ ಉರುಡುಗ ಹೆಚ್ಚು ಅಂಕಗಳನ್ನು ಪಡೆದಿದ್ದರು. ಹೀಗಾಗಿ ಕ್ಯಾಪ್ಟನ್ಸಿ ಟಾಸ್ಕ್​​​ಗೆ ಆಯ್ಕೆಯಾದರು.

ಮನೆಯ ಸದಸ್ಯರ ಪ್ರಕಾರ‌ ಶುಭಾ‌ ಪೂಂಜಾ ಹಾಗೂ ಪ್ರಶಾಂತ್ ಸಂಬರಗಿ ಕಳಪೆಗೆ ಸಮ‌ ಅಂಕಗಳನ್ನು ಪಡೆದಿದ್ದರು. ಆದರೆ ಕ್ಯಾಪ್ಟನ್ ದಿವ್ಯಾ ಉರುಡುಗ ಪ್ರಶಾಂತ್ ಅವರನ್ನು ಕಳಪೆಗೆ ಹೆಸರು ಸೂಚಿಸಿದರು.

ಪ್ರಶಾಂತ್ ಸಂಬರಗಿ

ಆದರೆ ಪ್ರಶಾಂತ್, ಇಡೀ ವಾರ ಮನೆಯ ಎಲ್ಲಾ ಸದಸ್ಯರು ಚೆನ್ನಾಗಿ ಆಡಿದ್ದಾರೆ. ಕಳಪೆ- ಅತ್ಯುತ್ತಮ ಅವಶ್ಯಕತೆ ಇಲ್ಲ ಎಂದು ವಾದಿಸಿದರು. ಕ್ಯಾಪ್ಟನ್​ ಈ ಮನೆಯಲ್ಲಿ ಸರ್ವಾಧಿಕಾರಿಯಲ್ಲ. ಇಬ್ಬರಿಗೆ ಮೂರು ಮೂರು ಮತಗಳು ಬಿದ್ದಾಗ, ಹೇಗೆ ಕ್ಯಾಪ್ಟನ್ ಒಬ್ಬರನ್ನು ಕಳಪೆ ಎಂದು ನಿರ್ಧರಿಸುತ್ತಾರೆ ಎಂದು ಪ್ರಶ್ನಿಸಿದರು.

ದಿವ್ಯಾ ಉರುಡುಗ

ಶುಭಾ ಪೂಂಜಾ ಹಾಗೂ ಸಂಬರಗಿ ಇಬ್ಬರೂ ಸಮ ಅಂಕ ಪಡೆದಿದ್ದರಿಂದ ಕಳಪೆ ಬೋರ್ಡ್​ ಕೊಡುವುದು ಕ್ಯಾಪ್ಟನ್​ಗೆ ಸವಾಲಾಗಿತ್ತು. ಸಂಬರಗಿಗೆ ಕಳಪೆ ನೀಡಿದ್ದಕ್ಕೆ ಸಿಟ್ಟಿಗೆದ್ದ ಅವರು, ಕಳಪೆ ಬೋರ್ಡ್​ ಸ್ವೀಕರಿಸಲು ನಿರಾಕರಿಸಿದರು. ಬಳಿಕ ಕ್ಯಾಪ್ಟನ್ ಉರುಡುಗ, ಚಕ್ರವರ್ತಿ ಮನವೊಲಿಸಿ ಜೈಲಿಗೆ ಕಳುಹಿಸಿದರು.

ಓದಿ:ತಮಿಳಿನ ಪ್ರಖ್ಯಾತ ನಿರ್ದೇಶಕ ಅಟ್ಲೀ ದಂಪತಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ABOUT THE AUTHOR

...view details