ಕರ್ನಾಟಕ

karnataka

ETV Bharat / sitara

ಬಿಗ್​​ಬಾಸ್​ ಮನೆಯಲ್ಲಿ ಒಂದಾದ ಮಾವ-ಅಳಿಯ... ಮಂಜುಗೆ ಕೈತುತ್ತು ತಿನ್ನಿಸಿದ ಪ್ರಶಾಂತ್​! - ಪ್ರಶಾಂತ್ ಸಂಬರಗಿ

ಬಿಗ್​ಬಾಸ್​ ಮನೆಯಲ್ಲಿ ಹಾವು-ಮುಂಗುಸಿಯಂತಿದ್ದ ಪ್ರಶಾಂತ್​-ಮಂಜು ಇದೀಗ ಒಂದಾಗಿದ್ದು,ಪ್ರಶಾಂತ್ ಸಂಬರಗಿ ಪ್ರೀತಿಯಿಂದ ಮಂಜು ಪಾವಗಡಗೆ ಊಟ ಮಾಡಿಸುವಷ್ಟರ ಮಟ್ಟಿಗೆ ಸ್ನೇಹಿತರಾಗಿದ್ದಾರೆ.

Prashanth sambargi
Prashanth sambargi

By

Published : Jul 16, 2021, 12:14 AM IST

ಬಿಗ್​ಬಾಸ್​ ಸೀಸನ್​​ 8 ಆರಂಭಗೊಂಡಾಗ ಪ್ರಶಾಂತ್​ ಸಂಬರಗಿ ಹಾಗೂ ಮಂಜು ಪಾವಗಡ ಚೆನ್ನಾಗಿಯೇ ಇದ್ದರು.ಪ್ರಶಾಂತ್​ ಅವರನ್ನು ಮಂಜು ಪ್ರೀತಿಯಿಂದ ಮಾವ ಎಂದು ಕರೆಯುತ್ತಿದ್ದರು.ಆದರೆ ಚಕ್ರವರ್ತಿ ಮನೆಯೊಳಗೆ ಎಂಟ್ರಿ ನೀಡ್ತಿದ್ದಂತೆ ಎಲ್ಲವೂ ಬದಲಾಗಿತ್ತು. ಸದ್ಯ ಮತ್ತಿಬ್ಬರು ಒಂದಾಗಿರುವ ಹಾಗೇ ಕಂಡು ಬರುತ್ತಿದೆ.

ಬಿಗ್​ಬಾಸ್​​ 2ನೇ ಇನ್ನಿಂಗ್ಸ್​​ನಲ್ಲಿ ಮಂಜು ಪಾವಗಡ- ಪ್ರಶಾಂತ್​ ಸಂಬರಗಿ ನಡುವೆ ದ್ವೇಷ ಮುಂದುವರಿದಿತ್ತು. ಅನೇಕ ಸಲ ಇಬ್ಬರು ಜಗಳ ಸಹ ಮಾಡಿಕೊಂಡಿದ್ದರು. ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡಗೆ ಊಟ ಮಾಡಿಸುವಷ್ಟರ ಮಟ್ಟಿಗೆ ಸ್ನೇಹಿತರಾಗಿದ್ದಾರೆ. ಬಿಗ್​ ಬಾಸ್​ ನೀಡಿದ್ದ ಏಳು ಬೀಳು ಟಾಸ್ಕ್​​ನಲ್ಲಿ 'ವಿಜಯ ಯಾತ್ರೆ' ತಂಡ ಸೋತಿರುವ ಕಾರಣ ತಂಡದ ಇಬ್ಬರು ಸದಸ್ಯರು 'ನಿಂಗ್ ಐತಿ ಇರು' ತಂಡದ ಎಲ್ಲಾ ಸದಸ್ಯರಿಗೆ ಊಟ ಮಾಡಿಸುವ ಶಿಕ್ಷೆಯನ್ನು ಬಿಗ್ ಬಾಸ್ ನೀಡಿತ್ತು.

'ಅಣ್ಣ ತಂಗಿಯರ ಈ ಬಂಧ' ಹಾಡನ್ನು ಹೇಳಿಕೊಂಡು ನಿಧಾನವಾಗಿ ತಿನ್ನಿ ಮಂಜಣ್ಣ ಎಂದು ವೈಷ್ಣವಿ ಮಂಜು ಪಾವಗಡಗೆ ತುತ್ತು ತಿನ್ನಿಸಿದರು. ಅದಕ್ಕೆ ಮಂಜು, ಎಂದಿಗೂ ಅಂದುಕೊಂಡಿರಲಿಲ್ಲ ಟಾಪ್ ಹೀರೋಯಿನ್ ಹತ್ತಿರ ಊಟ ಮಾಡಿಸಿಕೊಳ್ಳುತ್ತೇನೆ ಎಂದು ಮಂಜು ನಿಧಾನವಾಗಿ ಊಟ ಮಾಡಿದರು.ಇನ್ನೂ, ಪ್ರಶಾಂತ್ ಸಂಬರಗಿ, ಚಕ್ರವರ್ತಿಗೆ ಊಟ ಮಾಡಿಸುವಾಗ ಎರಡು ಕಣ್ಣು ಸಾಲದು ಎಂದು ಮಂಜು ಕಾಮಿಡಿ ಮಾಡಿದರು.

ಇದನ್ನೂ ಓದಿರಿ: ಈ ವಾರ ಬಿಗ್​ಬಾಸ್​​ ಮನೆಯಲ್ಲಿ ನಾಲ್ಕು ಸದಸ್ಯರು ನಾಮಿನೇಟ್: ಯಾರ್ಯಾರು ಗೊತ್ತಾ?

ನಂತರ ಪ್ರಶಾಂತ್, ಮಂಜುಗೆ ಊಟ ಮಾಡಿಸುವಾಗ ಕಣ್ಣಲ್ಲಿ ನೀರು ಬರುತ್ತದೆ‌ ಎಂದು ಮನೆಯ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿದರು. ಚಿಕ್ಕ ಮಗುವಿನ ಹಾಗೇ ಆಡುತ್ತಿದ್ದ ಮಂಜುಗೆ ಪ್ರಶಾಂತ್ ಕಥೆ ಹೇಳಿ ತುತ್ತು ತಿನ್ನಿಸಿದರು. ತುತ್ತು ತಿನ್ನಿಸುವಾಗ ಅಲ್ಲಿ ಇಲ್ಲಿ ಓಡಾಡುತ್ತಿದ್ದ ಮಂಜುವನ್ನು ಪ್ರಶಾಂತ್ ಕರೆಯುತ್ತಿದ್ದರು. ಆಗ ಮಂಜು ನನ್ನ ಅಮ್ಮ ನೆನಪಾಗುತ್ತಿದ್ದಾರೆ ಎಂದು ಮತ್ತಷ್ಟು ತಮಾಷೆ ಮಾಡಿದರು. ಒಟ್ಟಾರೆ, ಕಿತ್ತಾಡಿ ಉತ್ತರ ದಿಕ್ಕು, ದಕ್ಷಿಣ ದಿಕ್ಕು ಆಗಿರುವ ಪ್ರಶಾಂತ್ ಹಾಗೂ ಮಂಜು ಮೊದಲಿನಂತೆ ಆಗಿರುವುದು ಮಾತ್ರ ವಿಶೇಷ. ಇನ್ನು ಕಳೆದ ಕೆಲ ದಿನಗಳಿಂದ ಚಕ್ರವರ್ತಿ ಅವರಿಂದ ಪ್ರಶಾಂತ್​ ಅಂತರ ಕಾಯ್ದುಕೊಳ್ಳುತ್ತಿರುವುದು ಕಂಡು ಬಂದಿದೆ.

ABOUT THE AUTHOR

...view details