ಬಿಗ್ಬಾಸ್ ಮನೆಯ ಕಿಚನ್ನಲ್ಲಿ ಇದೀಗ ಹುಡುಗರದೇ ಹವಾ. ಹೀಗಾಗಿ, ಚಪಾತಿ ಮಾಡುವ ವಿಷಯದಲ್ಲಿ ಅರವಿಂದ್ ಹಾಗೂ ಪ್ರಶಾಂತ್ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರಶಾಂತ್ ಸಂಬರಗಿ ಕಲಿಸಿದ ಚಪಾತಿ ಹಿಟ್ಟು ಗಟ್ಟಿಯಾಗಿತ್ತು. ಹೀಗಾಗಿ ಅರವಿಂದ್ ನಾನು ಮೊದಲೇ ಕಲಿಸಬೇಡಿ ಎಂದು ಹೇಳಿದ್ದೆ. ಆದರೆ, ನೀವು ಕಲಿಸದ್ದು ಗಟ್ಟಿಯಾಗಿದೆ. ಹೀಗಾಗಿ ಲಟ್ಟಿಸುವುದು ಕಷ್ಟವಾಗುತ್ತದೆ ಎಂದರು.
ನೀವು ನನ್ನ ಮಾತಾಗಲಿ ಅಥವಾ ಯಾರ ಮಾತನ್ನೂ ಸಹ ಕೇಳುವುದಿಲ್ಲ ಎಂದಾಗ, ಪ್ರಶಾಂತ್ ನಮ್ಮ ಮನೆಯಲ್ಲಿ ಓವರ್ ನೈಟ್ ಕಲಿಸಿ ಇಡುತ್ತೇವೆ ಏನು ಆಗುವುದಿಲ್ಲ. ನೋಡಿ ಕರೆಕ್ಟ್ ಆಗಿಯೇ ಇದೆಯಲ್ಲಾ ಎಂದು ಚಪಾತಿ ಹಿಟ್ಟನ್ನು ಮೇಲಕ್ಕೆತ್ತಿ ತೋರಿಸುತ್ತಾರೆ. ಇದಕ್ಕೆ ಅರವಿಂದ್ ಕರೆಕ್ಟ್ ಆಗಿದೆ. ಹಾಗಾದರೆ ನೀವೇ ಒತ್ತುತ್ತೀರಾ? ಒತ್ತುವಾಗ ಗೊತ್ತಾಗುತ್ತದೆ ಕಲ್ಲಿನ ರೀತಿ ಇದೆ ಅಂತ. ನೀವು ಸುಲಭವಾಗಿ ಹೇಳಿ ಬಿಡುತ್ತೀರಾ ಒತ್ತಿ ಎಂದು. ಆದರೆ, ಒತ್ತುವುದು ನಾವು. ಅದಕ್ಕೆ ನಾನು ನಿಮಗೆ ಹೇಳಿದ್ದು, ಆದರೆ ನೀವು ಒಂದು ಮಾತನ್ನು ಕೇಳುವುದಿಲ್ಲ ಎನ್ನುತ್ತಾರೆ.