ಕರ್ನಾಟಕ

karnataka

ETV Bharat / sitara

ಜೈಲಿನಲ್ಲಿ ಸತ್ಯಾಗ್ರಹ ಆರಂಭಿಸಿದ ಪ್ರಶಾಂತ್ ಸಂಬರಗಿ - Prashant Sambargi who started Satyagraha in jail

ಈ ವಾರ ಜೈಲಿಗೆ ಹೋದ ಪ್ರಶಾಂತ್ ಸತ್ಯಾಗ್ರಹ ಆರಂಭಿಸಿದ್ದಾರೆ. ಜೈಲಿಂದ ಹೊರ ಬರುವವರೆಗೂ ಊಟ ಮಾಡುವುದಿಲ್ಲ ಹಾಗೂ ಮಾತನಾಡುವುದಿಲ್ಲವೆಂದು ಮುನಿಸಿಕೊಂಡಿದ್ದಾರೆ.

ಪ್ರಶಾಂತ್ ಸಂಬರ್ಗಿ
ಪ್ರಶಾಂತ್ ಸಂಬರ್ಗಿ

By

Published : Mar 27, 2021, 9:22 AM IST

ಬಿಗ್ ಬಾಸ್ ಮನೆಯೊಳಗೆ ರಾಜ ದರ್ಬಾರ್ ಶುರುವಾಗಿದೆ. ಈಗಾಗಲೇ ಮನೆಯ ಕ್ಯಾಪ್ಟನ್ ಆಗಿ ವಿಶ್ವನಾಥ್‌ ಮಿಂಚುತ್ತಿದ್ದರೆ, ಇತ್ತ ಮನೆಯ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿರುವ ಪ್ರಶಾಂತ್ ಸಂಬರಗಿ ಈ ವಾರ ಜೈಲು ಪಾಲಾಗಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು

ಮಂಜು, ವೈಷ್ಣವಿ, ನಿಧಿ ಸೇರಿದಂತೆ ಹಲವರ ಅಭಿಪ್ರಾಯದಂತೆ ಪ್ರಶಾಂತ್ ಸಂಬರಗಿ ಮನೆಯ ಸದಸ್ಯರ ಕೋಪಕ್ಕೆ ತುತ್ತಾಗಿದ್ದಾರೆ. ಮಂಜು ಹಾಗೂ ನಿಧಿ ಅವರ ಅಭಿಪ್ರಾಯ ಪೂರ್ವನಿಯೋಜಿತ ಎಂದು ಸಂಬರಗಿ ಕಿಡಿಕಾರಿದ್ದಾರೆ.

ಜೈಲಿಗೆ ಹೋದ ಪ್ರಶಾಂತ್ ಸತ್ಯಾಗ್ರಹ ಆರಂಭಿಸಿದ್ದಾರೆ. ಜೈಲಿಂದ ಹೊರ ಬರುವವರೆಗೂ ಊಟ ಮಾಡುವುದಿಲ್ಲ ಹಾಗೂ ಮಾತನಾಡುವುದಿಲ್ಲವೆಂದು ಮುನಿಸಿಕೊಂಡಿದ್ದಾರೆ. ಆದರೆ, ವೈಷ್ಣವಿ ಊಟದ ಮೇಲೆ ಕೋಪ ತೋರಿಸಬೇಡಿ ಎಂದು ಸಮಾಧಾನ ಪಡಿಸಿದ್ದಾರೆ.

ಇನ್ನು ಈ ವಾರದ ಅತ್ಯುತ್ತಮ ಪ್ರದರ್ಶನಕ್ಕೆ ವೈಷ್ಣವಿ ಪಾತ್ರರಾಗಿದ್ದಾರೆ. ಕಳೆದ ವಾರಗಳಿಗೆ ಹೋಲಿಸಿದರೆ ಈ ವಾರ ವೈಷ್ಣವಿ ಹೆಚ್ಚು ಆ್ಯಕ್ಟಿವ್ ಆಗಿ ಓಪನ್ ಅಪ್ ಆಗಿದ್ದಾರೆ ಎಂದು ಮೆಚ್ಚುಗೆ ಗಳಿಸಿದ್ದಾರೆ.

ಮಂಜು ವಿರುದ್ಧ ದಿವ್ಯಾ ಸುರೇಶ್ ಗರಂ:

ಬಿಗ್ ಬಾಸ್ ಕನ್ನಡ 8 ಅವತರಣಿಕೆಯ ಕಾರ್ಯಕ್ರಮದಲ್ಲಿ ಮೊದಲ ವಾರ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಸ್ಪರ್ಧಿಗಳು ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್. ಮೊದಲ ವಾರವೇ ಪ್ರೀತಿ, ಮದುವೆ ಅಂತೆಲ್ಲಾ ಮಂಜು ಹಾಗೂ ದಿವ್ಯಾ ಸುರೇಶ್ ನಾಟಕ ಮಾಡಿ ಎಲ್ಲರಿಗೂ ಮನರಂಜನೆ ನೀಡಿದ್ದರು. ಆದರೀಗ ಮಂಜು ವಿರುದ್ಧ ದಿವ್ಯಾ ಸುರೇಶ್​ಗೆ ಐಡೆಂಟಿಟಿ ಉಳಿಸಿಕೊಳ್ಳುವ ಬಗ್ಗೆ ಪ್ರಶಾಂತ್ ಎತ್ತಿಕಟ್ಟಿಕೊಟ್ಟಿದ್ದರು. ಹೀಗಾಗಿ, ನೀನು ಮಂಜು ಬಾಲ ಆಗ್ತಾ ಇದೀಯಾ, ನೆರಳಲ್ಲಿ ಬದುಕಬೇಡ. ನೀನು ಒಬ್ಬರ ವಸ್ತು ಆಗಬಾರದು ಎಂದಿದ್ದರು.

ಮಂಜು, ದಿವ್ಯಾ ಸುರೇಶ್

ಮಂಜುಗೆ ಕಿಚನ್​ ಡಿಪಾರ್ಟ್​ಮೆಂಟ್ ನೀಡಲಾಗಿದೆ. ಹೀಗಾಗಿ, ಪಾತ್ರೆ ತೊಳೆಯಬೇಕಿತ್ತು. ಆದರೆ, ಮಂಜು ಅಡುಗೆ ಮನೆಗೆ ಹೋಗದೆ ಮಾತನಾಡುತ್ತಾ ಕುಳಿತಿದ್ದರು. ಇತ್ತ ದಿವ್ಯ ಸುರೇಶ್ ತಾವೇ ಅಡುಗೆ ಮನೆ ಕೆಲಸ ಮಾಡಿ ಮುಗಿಸಿದ್ದರು. ಇದರಿಂದ ಮಂಜು ಬೇಸರಗೊಂಡು ಹೊರ ನಡೆದರು. ಬಿಗ್ ಬಾಸ್ ಆರಂಭವಾದಾಗಿನಿಂದ ಜೊತೆಯಲ್ಲಿದ್ದ ಮಂಜು ಹಾಗೂ ದಿವ್ಯಾ ಸುರೇಶ್ ಇದೀಗ ನಿಧಾನವಾಗಿ ಮುನಿಸಿಕೊಳ್ಳಲು ಆರಂಭಿಸಿದ್ದಾರೆ.

ವಿಶ್ವನಾಥ್

ವಿಶ್ವನಿಗೆ ಇಬ್ಬರು ರಾಣಿಯರು:

ಮನೆಯ ಕ್ಯಾಪ್ಟನ್ ಆಗಿರುವ ವಿಶ್ವನಾಥ್‌ ದಿನಪೂರ್ತಿ ರಾಜನಾಗಿರುತ್ತಾರೆ. ಅವರಿಗೆ ಇಬ್ಬರು ರಾಣಿಯರು ಇರುತ್ತಾರೆ. ಅವರಿಂದ ದಿನಪೂರ್ತಿ ಸೇವೆ ಮಾಡಿಸಿಕೊಳ್ಳುವ ಅವಕಾಶವಿದ್ದು, ನಿಧಿ ಸುಬ್ಬಯ್ಯ ಮತ್ತು ವೈಷ್ಣವಿ ಗೌಡ ಅವರನ್ನು ರಾಣಿಯರನ್ನಾಗಿ ವಿಶ್ವನಾಥ್ ಆಯ್ಕೆ ಮಾಡಿಕೊಂಡಿದ್ದಾನೆ. ರಘು ಕೂಡ ಟಾಸ್ಕ್​ನಲ್ಲಿ ಹೆಚ್ಚು ಮನರಂಜಿಸಿದರು.

ವಿಶ್ವನಿಗೆ ರಾಣಿಯರಾದ ನಿಧಿ ಸುಬ್ಬಯ್ಯ ಮತ್ತು ವೈಷ್ಣವಿ ಗೌಡ

ABOUT THE AUTHOR

...view details