ಕಿರುತೆರೆ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಪ್ರಮೋದ್ ಮದ್ದೂರು ಇಂದು ಬೆಳ್ಳಿತೆರೆಯಲ್ಲಿ ಬಹಳ ಬ್ಯುಸಿ. 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಪ್ರಮೋದ್ ಆ ಚಿತ್ರದಲ್ಲೇ ಎಲ್ಲರ ಗಮನ ಸೆಳೆದಿದ್ದರು. ಆದರೆ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ 'ಪ್ರೀಮಿಯರ್ ಪದ್ಮಿನಿ' ಚಿತ್ರ.
ಸೋಷಿಯಲ್ ಮೀಡಿಯಾದಲ್ಲಿ ಹಳೆಯ ನೆನಪನ್ನು ಹಂಚಿಕೊಂಡ ಪ್ರಮೋದ್ - Sanju Mattu Naanu serial
'ಪ್ರೀಮಿಯರ್ ಪದ್ಮಿನಿ' ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ಪ್ರಮೋದ್ ಮದ್ದೂರು ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಪ್ರಮೋದ್ ತಾವು ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದ 'ಸಂಜು ಮತ್ತು ನಾನು' ಧಾರಾವಾಹಿ ಕ್ಲಿಪ್ಪಿಂಗ್ ಒಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಿರುತೆರೆಯಲ್ಲಿ ನಟಿಸುತ್ತಾ ಸಿನಿಮಾಗಳಲ್ಲಿ ಕಷ್ಟಪಟ್ಟು ಅವಕಾಶಗಳನ್ನು ಪಡೆದು ಮುಂದೆ ಬಂದಿದ್ದಾರೆ ಪ್ರಮೋದ್. ಸದ್ಯಕ್ಕೆ ಪ್ರಮೋದ್ ಅಭಿನಯದ ಹೊಸ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಚಿತ್ರರಂಗದಲ್ಲಿ ಮಿಂಚುತ್ತಿರುವ ಪ್ರಮೋದ್ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಸಂಜು ಮತ್ತು ನಾನು' ಎಂಬ ಧಾರಾವಾಹಿಯ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿರುವ ಪ್ರಮೋದ್ ನನ್ನ ಇನ್ಸ್ಟಾಗ್ರಾಮ್ ಗೆಳೆಯರೊಬ್ಬರು ಸಂಜು ಮತ್ತು ನಾನು ಧಾರಾವಾಹಿಯ ಈ ವಿಡಿಯೋವೊಂದನ್ನು ಕಳುಹಿಸಿದ್ದಾರೆ ಥ್ಯಾಂಕ್ ಯೂ ಎಂದು ಬರೆದುಕೊಂಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯ ಚುಕ್ಕಿ, ಜೀ ಕನ್ನಡದ ಮಹಾದೇವಿ ಧಾರಾವಾಹಿಯಲ್ಲಿ ನಟಿಸಿರುವ ಪ್ರಮೋದ್ ಸಂಜು ಮತ್ತು ನಾನು ಧಾರಾವಾಹಿಯಲ್ಲೂ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು. ಮನೋಜ್ಞ ಅಭಿನಯದ ಮೂಲಕ ವೀಕ್ಷಕರ ಮನ ಸೆಳೆದಿರುವ ಪ್ರಮೋದ್ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 24 ಸಂಚಿಕೆಗಳನ್ನು ಹೊಂದಿದ್ದ 'ಸಂಜು ಮತ್ತು ನಾನು' ಧಾರಾವಾಹಿಯಲ್ಲಿ ಪ್ರಥಮ್ , ಭುವನ್ ಪೊನ್ನಣ್ಣ , ಸಂಜನಾ ಚಿದಾನಂದ್ ಚಿ.ಗುರುದತ್ , ಜೈಜಗದೀಶ್ ಹಾಗೂ ಸಂಗೀತಾ ನಟಿಸಿದ್ದರು.