ಕರ್ನಾಟಕ

karnataka

ETV Bharat / sitara

ಲ್ಯಾಂಬೋರ್ಗಿನಿ ಕಾರಿನ ಒಡೆಯ ಬಾಹುಬಲಿ ಪ್ರಭಾಸ್​: ಟ್ವಿಟರ್​ನಲ್ಲಿ ಟ್ರೆಂಡಿಂಗ್​ ಕ್ರಿಯೇಟ್​ - ಪ್ರಭಾಸ್​

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ 6 ಕೋಟಿ ರೂ. ಬೆಲೆಯ ಲ್ಯಾಂಬೋರ್ಗಿನಿ ಅವೆಂಟಡಾರ್​ ಎಸ್​ ರೋಡ್​ಸ್ಟರ್​ ಕಾರನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರಿನಲ್ಲಿ ಪ್ರಭಾಸ್ ಸವಾರಿ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Prabhas
ಲ್ಯಾಂಬರ್ಗಿನಿ ಕಾರಿನ ಒಡೆಯ ಬಾಹುಬಲಿ ಪ್ರಭಾಸ್

By

Published : Mar 29, 2021, 11:17 AM IST

Updated : Mar 29, 2021, 11:59 AM IST

ಹೈದರಾಬಾದ್: ನಟ ಪ್ರಭಾಸ್ ಅವರು ಸಂಗ್ರಹ ಮಾಡಿದ ಕಾರುಗಳ ಲಿಸ್ಟ್​ಗೆ ಮತ್ತೊಂದು ಐಷಾರಾಮಿ ಕಾರು ಸೇರ್ಪಡೆಗೊಂಡಿದೆ. ಬಾಹುಬಲಿ ಖ್ಯಾತಿಯ ನಟ ಪ್ರಭಾಸ್​ 6 ಕೋಟಿ ರೂ. ಬೆಲೆಯ ಲ್ಯಾಂಬೋರ್ಗಿನಿ ಅವೆಂಟಡಾರ್​ ಎಸ್​ ರೋಡ್​ಸ್ಟರ್ ಕಾರನ್ನು ಖರೀದಿಸಿದ್ದಾರೆ.

ಈ ಐಷಾರಾಮಿ ಕಾರಿನಲ್ಲಿ ಪ್ರಭಾಸ್ ಸವಾರಿ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪ್ರಭಾಸ್​​ ಈಗಾಗಲೇ ಬಿಎಂಡಬ್ಲ್ಯು 520 ಡಿ, ಇನ್ನೋವಾ ಕ್ರಿಸ್ಟಾ, ಜಾಗ್ವಾರ್ ಎಕ್ಸ್‌ಜೆಎಲ್ ಮತ್ತು ರೇಂಜ್ ರೋವರ್ ವೋಗ್‌ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಲ್ಯಾಂಬೋರ್ಗಿನಿ ಕಾರು ಅತೀ ಹೆಚ್ಚು ಬೆಲೆಬಾಳುವ ಕಾರುಗಳಲ್ಲಿ ಒಂದು. ಇದನ್ನು ಖ್ಯಾತ ಭಾರತೀಯ ಸೆಲೆಬ್ರಿಟಿಗಳು ಖರೀದಿಸಿದ್ದಾರೆ. ಪ್ರಭಾಸ್​ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಕಾರು ಖರೀದಿಸಿದ್ದರಿಂದ ಸಂತೋಷಗೊಂಡಿದ್ದು, ಟ್ವಿಟರ್​ನಲ್ಲಿ ಟ್ರೆಂಡಿಂಗ್​ ಕ್ರಿಯೇಟ್​ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋಗಳಲ್ಲಿ, ಪ್ರಭಾಸ್ ಅವರು ಕಾರನ್ನು ಅನಾವರಣಗೊಳಿಸುವುದು ಮತ್ತು ರಾತ್ರಿ ವೇಳೆ ಚಲಾಯಿಸುತ್ತಿರುವುದು ಕಾಣಬಹುದು.

ಪ್ರಭಾಸ್ ತಮ್ಮ ಮುಂಬರುವ ಸಿನಿಮಾ ಆದಿಪುರುಷ್​ಗಾಗಿ ಸಿದ್ಧತೆ ಮಾಡುತ್ತಿದ್ದಾರೆ. ಈ ವರ್ಷದ ಜುಲೈ 30 ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿರುವ ರಾಧೆ - ಶ್ಯಾಮ್ ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿಯೂ ಪ್ರಭಾಸ್​ ಅಭಿನಯಿಸಿದ್ದಾರೆ.

Last Updated : Mar 29, 2021, 11:59 AM IST

ABOUT THE AUTHOR

...view details