ಕರ್ನಾಟಕ

karnataka

ETV Bharat / sitara

ಕೊರೊನಾ ಮಹಾಮಾರಿಯಿಂದ 'ಪೌರ್ಣಮಿ' ಸೀರಿಯಲ್​ಗೆ ಪೂರ್ಣ ವಿರಾಮ.. - pournami serial latest news

ಧಾರಾವಾಹಿಯಲ್ಲಿನ ತಂತ್ರಜ್ಞರು ಕೇವಲ ಒಂದು ಧಾರಾವಾಹಿಗೆ ಮಾತ್ರ ಕೆಲಸ ಮಾಡುವುದಿಲ್ಲ. ಬದಲಿಗೆ ಎಲ್ಲಾ ಸೀರಿಯಲ್​​ಗಳಲ್ಲೂ ಅವರು ಕಾಣಿಸಿಕೊಳ್ಳುತ್ತಾರೆ. ಆ ಕಾರಣದಿಂದ ನಾನು ಇದೀಗ ಕ್ವಾರಂಟೈನ್​ನಲ್ಲಿದ್ದೇನೆ ಎನ್ನುತ್ತಾರೆ ರಶ್ಮಿ ಪ್ರಭಾಕರ್​​. ಶೂಟಿಂಗ್ ಆರಂಭವಾಗುವ ಮೊದಲು ಪೌರ್ಣಮಿ ತಂಡ ಸಾಕಷ್ಟು ಎಚ್ಚರಿಕೆ ವಹಿಸಿತ್ತು..

pournami serial shooting closed by the effect of corona
ರಶ್ಮಿ ಪ್ರಭಾಕರ್

By

Published : Jun 28, 2020, 3:08 PM IST

ಇಡೀ ವಿಶ್ವವೇ ಕೊರೊನಾ ಮಹಾಮಾರಿಗೆ ತತ್ತರಿಸಿ ಪ್ರಾಣ ಉಳಿಸಿಕೊಳ್ಳಲು ಪರಾದಾಡುತ್ತಿದೆ. ಈ ಮಧ್ಯೆ ಲಾಕ್​ಡೌನ್​ಗೆ ಸಿಲುಕಿ ಮನೆಯಲ್ಲಿ ಕುಳಿತ ಅದೆಷ್ಟೋ ಟಿವಿ ವೀಕ್ಷಕರು ತಮ್ಮ ದಿನದ ಹೆಚ್ಚಿನ ಸಮಯವನ್ನು ಧಾರವಾಹಿಗಳ ವೀಕ್ಷಣೆಯಲ್ಲಿ ಕಳೆಯುತ್ತಿದ್ದರು. ಆದ್ರೀಗ ಮಹಾಮಾರಿ ಸೀರಿಯಲ್​​​ ಪ್ರಿಯರಿಗೂ ಮತ್ತೆ ಶಾಕ್​ ನೀಡಿದೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಅಲಿಯಾಸ್ ಚಿನ್ನು ಆಗಿ ಅಭಿನಯಿಸುತ್ತಿದ್ದ ರಶ್ಮಿ ಪ್ರಭಾಕರ್ ಅಭಿನಯದ ಧಾರಾವಾಹಿಯ ಚಿತ್ರೀಕರಣ ರದ್ದಾಗಿದೆ. ಕೊರೊನಾ ವೈರಸ್ ಅಲ್ಲಿಗೂ ಕಾಲಿಟ್ಟಿದ್ದು, ಈ ಕಾರಣದಿಂದಾಗಿ ಧಾರಾವಾಹಿ ಶೂಟಿಂಗ್ ಕ್ಯಾನ್ಸಲ್ ಆಗಿದೆ.

ತೆಲುಗಿನ ಪೌರ್ಣಮಿ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿ ಪ್ರಭಾಕರ್ ಲಾಕ್​ಡೌನ್​​ ನಂತರ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ತೆರಳಿದ್ದರು. ಅಷ್ಟರಲ್ಲಿ ತೆಲುಗಿನ ಕಿರುತೆರೆ ಕಲಾವಿದರೊಬ್ಬರಿಗೆ ಕೊರೊನಾ ಸೋಂಕು ತಗುಲಿದ ವಿಚಾರ ತಿಳಿದು ಬಂದಿದೆ. ಇದರಿಂದಾಗಿ ಧಾರಾವಾಹಿಗಳ ಶೂಟಿಂಗ್ ನಿಲ್ಲಿಸುವಂತೆ ಅಲ್ಲಿನ ಟಿವಿ ಅಸೋಸಿಯೇಷನ್ ಸೂಚನೆ ನೀಡಿದೆ. ಅದೇ ಕಾರಣಕ್ಕಾಗಿ ರಶ್ಮಿ ಪ್ರಭಾಕರ್ ಅಭಿನಯದ ಪೌರ್ಣಮಿ ಧಾರಾವಾಹಿಯ ಶೂಟಿಂಗ್ ಕೂಡಾ ನಿಂತು ಹೋಗಿದೆ.

ರಶ್ಮಿ ಪ್ರಭಾಕರ್
ಇಲ್ಲಿನ ಕಿರುತೆರೆ ಕಲಾವಿದರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ತೆಲುಗಿನ ಒಂದಷ್ಟು ಧಾರಾವಾಹಿಯಲ್ಲಿ ಅವರು ಅಭಿನಯಿಸಿದ್ದರು. ಧಾರಾವಾಹಿಯಲ್ಲಿನ ತಂತ್ರಜ್ಞರು ಕೇವಲ ಒಂದು ಧಾರಾವಾಹಿಗೆ ಮಾತ್ರ ಕೆಲಸ ಮಾಡುವುದಿಲ್ಲ. ಬದಲಿಗೆ ಎಲ್ಲಾ ಸೀರಿಯಲ್​​ಗಳಲ್ಲೂ ಅವರು ಕಾಣಿಸಿಕೊಳ್ಳುತ್ತಾರೆ. ಆ ಕಾರಣದಿಂದ ನಾನು ಇದೀಗ ಕ್ವಾರಂಟೈನ್​ನಲ್ಲಿದ್ದೇನೆ ಎನ್ನುತ್ತಾರೆ ರಶ್ಮಿ ಪ್ರಭಾಕರ್​​. ಶೂಟಿಂಗ್ ಆರಂಭವಾಗುವ ಮೊದಲು ಪೌರ್ಣಮಿ ತಂಡ ಸಾಕಷ್ಟು ಎಚ್ಚರಿಕೆ ವಹಿಸಿತ್ತು.
ಸೀರಿಯಲ್​​​ ಶೂಟಿಂಗ್​​ ನಡೆಯುವ ಸ್ಥಳ, ಕಲಾವಿದರುಗಳ ಬ್ಯಾಗ್ ಎಲ್ಲವನ್ನು ಸ್ಯಾನಿಟೈಸ್ ಮಾಡಲಾಗುತ್ತಿತ್ತು. ಥರ್ಮಲ್ ಸ್ಕ್ರೀನಿಂಗ್ ಆದ ಬಳಿಕವೇ ಶೂಟಿಂಗ್ ಆರಂಭವಾಗುತ್ತಿತ್ತು. ಕಲಾವಿದರುಗಳ ಜೊತೆಗೆ ತಂತ್ರಜ್ಞರು ಕೂಡಾ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದರು. ಮೇಕಪ್ ಆರ್ಟಿಸ್ಟ್‌ಗಳಂತೂ ಪಿಪಿಟಿ ಕಿಟ್ ಧರಿಸಿಯೇ ಕೆಲಸ ಮಾಡುತ್ತಿದ್ದರು ಎಂದು ಶೂಟಿಂಗ್ ಜಾಗದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆಯ ಬಗ್ಗೆ ವಿವರಿಸಿದ್ದಾರೆ ರಶ್ಮಿ.

ABOUT THE AUTHOR

...view details