'ಕಿನ್ನರಿ' ಧಾರಾವಾಹಿಯಲ್ಲಿ ಶಿವಂ ಆಲಿಯಾಸ್ ನಕುಲ್ ಆಗಿ ಅಭಿನಯಿಸಿದ್ದ ಪವನ್ ಕುಮಾರ್ ಇದೀಗ ಒಂದು ವರ್ಷದ ಬಳಿಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆಕೃತಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಪವನ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
'ಕಿನ್ನರಿ' ಧಾರಾವಾಹಿ ಮುಗಿದು ಒಂದು ವರ್ಷದ ಬಳಿಕ ಅದೇ ದಿನಾಂಕದಂದು ಆಕೃತಿ ಸೀರಿಯಲ್ ಮೂಲಕ ಮತ್ತೆ ಬರುತ್ತಿದ್ದೇನೆ. ನಿಜವಾಗಿಯೂ ಇದು ಎಷ್ಟು ಸುಂದರ ಅಲ್ವೇ ? ಇದು ಯಾವ ಅಧ್ಯಾಯದ ಆರಂಭ ಎಂದು ನನಗೆ ತಿಳಿಯುತ್ತಿಲ್ಲ. ಕಿನ್ನರಿ ಧಾರಾವಾಹಿಗೆ ನಾನು ನಡುವೆ ಬಂದು ಸೇರಿಕೊಂಡೆ. ಆ ಕಾರಣದಿಂದ ನನಗೆ ಧಾರಾವಾಹಿ ಪ್ರಸಾರದ ಮೊದಲ ದಿನದ ಸಂತಸದ ಅನುಭವ ಆಗಿರಲಿಲ್ಲ. ಆದರೆ ಇದೀಗ ಆಕೃತಿಯೊಂದಿಗೆ ಈ ಸವಿಯನ್ನು ಅನುಭವಿಸಲಿದ್ದೇನೆ' ಎಂದಿದ್ದಾರೆ.
'ಕಿನ್ನರಿ' ಯ ನಕುಲ್ ಪಾತ್ರಧಾರಿ ಆಕೃತಿ ಮೂಲಕ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಪವನ್ ಕುಮಾರ್ಗೆ ಜನವರಿಯಲ್ಲಿ ಧಾರಾವಾಹಿಯಲ್ಲಿ ನಟಿಸುವ ಆಫರ್ ಬಂತು. ಇದು ವಿಭಿನ್ನವಾದ ಕಥಾಹಂದರವಾಗಿರುವ ಕಾರಣ ಪವನ್ ಕೂಡಾ ನಟಿಸಲು ಉತ್ಸುಕರಾಗಿದ್ದರು. ಜೂನ್ ಅಂತ್ಯದಿಂದ ಶೂಟಿಂಗ್ ಆರಂಭಿಸಿರುವ ಆಕೃತಿ ಧಾರಾವಾಹಿಯು ಪ್ರೇಕ್ಷಕರನ್ನು ಮರುಳು ಮಾಡುತ್ತಿದೆ. ಸಂಗೀತದಿಂದ ಹಿಡಿದು ಶಾಟ್ಸ್ , ಕಥೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ.
'ಆಕೃತಿ' ಧಾರಾವಾಹಿ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಟ ಆಕೃತಿ ಧಾರಾವಾಹಿಯಲ್ಲಿ ಪವನ್, ಪತ್ರಕರ್ತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪತ್ರಕರ್ತನಾಗಿರುವ ಬಾಲಾಜಿ ಬಹಳ ಪ್ರಾಕ್ಟಿಕಲ್ ಮನುಷ್ಯ. ನೇರ, ದಿಟ್ಟ ವ್ಯಕ್ತಿಯಾಗಿರುವ ಆತನಿಗೆ ಏನಾದರೂ ಸಾಧಿಸಬೇಕೆಂಬ ಹಂಬಲವಿರುತ್ತದೆ ಎಂದು ತಮ್ಮ ಪಾತ್ರವನ್ನು ವಿವರಿಸುವ ಪವನ್, ಬಾಲಾಜಿ ಪಾತ್ರ ಕಿನ್ನರಿಯ ನಕುಲ್ ಪಾತ್ರದಂತಿಲ್ಲ. ಇದು ಒಂದರ್ಥದಲ್ಲಿ ನೋಡಿದರೆ ಪ್ರಯೋಗಕ್ಕೆ ಒಡ್ಡಿಕೊಳ್ಳುವಂತಹ ಪಾತ್ರ. ಏನೇ ಆಗಲಿ ಹಾರರ್ ಸೀರಿಯಲ್ನಲ್ಲಿ ನಟಿಸುತ್ತಿರುವುದಕ್ಕೆ ಬಹಳ ಎಕ್ಸೈಟ್ ಆಗಿದ್ದೇನೆ. ಇದೊಂದು ಸುಂದರ ಪಯಣ ಎನ್ನುತ್ತಾರೆ ಪವನ್.
'ಆಕೃತಿ' ಯಲ್ಲಿ ಪತ್ರಕರ್ತನ ಪಾತ್ರದಲ್ಲಿ ಪವನ್ ನಟನೆ