ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಎರಡನೇ ಪುತ್ರ ಪ್ರೀತಮ್ ಪ್ರೇಯಸಿ ಜನನಿಯಾಗಿ ನಟಿಸುತ್ತಿರುವ ಪವಿತ್ರಾ ನಾಯ್ಕ್ ಇತ್ತೀಚೆಗೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ.
ಪವಿತ್ರಾ ನಾಯ್ಕ್ ಹೊಸ ಪೋಟೋಶೂಟ್ ಹಸಿರು ಜರತಾರಿ ಸೀರೆಗೆ ಕೆಂಪು ಬಣ್ಣದ ರವಿಕೆ ಧರಿಸಿ ಅಪ್ಪಟ ವಧುವಿನಂತೆ ಕಂಗೊಳಿಸುತ್ತಿರುವ ಪವಿತ್ರಾರನ್ನು ಕಂಡು ನೆಟಿಜನ್ಸ್ ಫಿದಾ ಆಗಿದ್ದಾರೆ. ಇಷ್ಟು ದಿನ ನಟನೆಯ ಮೂಲಕ ಮನೆ ಮಾತಾಗಿದ್ದಈ ಚೆಲುವೆ ಇದೀಗ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಚಿಕ್ಕಮಗಳೂರಿನ ಚೆಲುವೆ ಪವಿತ್ರಾ ಹಿರಿತೆರೆಯ ಮೂಲಕ ನಟನಾ ಯಾನ ಆರಂಭಿಸಿದ್ದರೂ ಅವರಿಗೆ ಜನಪ್ರಿಯತೆ ದೊರಕಿದ್ದು ಕಿರುತೆರೆಯಲ್ಲಿ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ಮುದ್ದಿನ ತಂಗಿಯಾಗಿ ನಟಿಸುವ ಮೂಲಕ ಕಿರುತೆರೆ ಪಯಣ ಆರಂಭಿಸಿದ ಪವಿತ್ರಾ ಮನೋಜ್ಞ ಅಭಿನಯದ ಮೂಲಕ ಕಿರುತೆರೆಯಾದ್ಯಂತ ಮನೆ ಮಾತಾಗಿದ್ದಾರೆ.
ಪಾರು ಧಾರಾವಾಹಿಯ ಜನನಿ ಪಾತ್ರಧಾರಿ
'ರಕ್ಷಾಬಂಧನ' ಧಾರಾವಾಹಿ ನಂತರ ಪಾರು ಧಾರಾವಾಹಿಯ ಜನನಿ ಆಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಪವಿತ್ರಾ ನಾಯ್ಕ್, ಕಿರುತೆರೆಯ ಮೂಲಕವೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಕಿರುತೆರೆಯಲ್ಲಿ ಬಣ್ಣ ಹಚ್ಚುವಂತೆ ಅವಕಾಶ ದೊರೆತಾಗ ಖುಷಿಗಿಂತ ಭಯ ಆಗಿದ್ದೇ ಹೆಚ್ಚು. ಬೆಳ್ಳಿತೆರೆಯಲ್ಲಿ ಈಗಾಗಲೇ ನಾನು ನಟಿಸಿದ್ದರೂ ಕಿರುತೆರೆಗೆ ಹೊಸಬಳು. ಜನ ನನ್ನನ್ನು ಮೆಚ್ಚುತ್ತಾರಾ ಎಂಬ ಭಯವಿತ್ತು. ಆದರೆ ಮೊದಲ ಧಾರಾವಾಹಿಯಲ್ಲೇ ಆ ಭಯ ಕಡಿಮೆ ಆಯ್ತು ಎನ್ನುವ ಪವಿತ್ರಾ ಸದ್ಯ 'ಪಾರು' ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.