ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಗೆ ಒಂದರ ಹರೆಯ. ಕಳೆದ ವರ್ಷ ಡಿಸೆಂಬರ್ 3 ರಂದು ಆರಂಭವಾದ ಧಾರಾವಾಹಿ ಇದೀಗ ಒಂದು ವರ್ಷ ಪೂರೈಸಿದ್ದು ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ಕಡಿಮೆ ಅವಧಿಯಲ್ಲಿ ಲಕ್ಷಾಂತರ ವೀಕ್ಷಕರ ಮನ ಸೆಳೆದಿರುವ 'ಪಾರು' ಧಾರಾವಾಹಿಗೆ ಅದರದ್ದೇ ಆದ ಅಭಿಮಾನಿಗಳಿದ್ದಾರೆ.
ವರ್ಷ ಪೂರೈಸಿದ ಪಾರು ಧಾರಾವಾಹಿ - ಒಂದು ವರ್ಷ ಪೂರೈಸಿದ ಪಾರು ಧಾರಾವಾಹಿ
ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟ 'ಪಾರು'
ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಿರುವ 'ಪಾರು' ಧಾರಾವಾಹಿ ಮಹಿಳೆಯರಿಗೆ ಬಹಳ ಅಚ್ಚುಮೆಚ್ಚು. ಗುರುಪ್ರಸಾದ್ ಮುಡೇನಹಳ್ಳಿ ಸಾರಥ್ಯದಲ್ಲಿ ಸಾಗುತ್ತಿರುವ ಈ ಧಾರಾವಾಹಿಯನ್ನು ಧೃತಿ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ರಾಜ್ ಅವರ ಯೋಜನೆಯಂತೆ ಬಹಳ ಅದ್ಧೂರಿಯಾಗಿ ಧಾರಾವಾಹಿಯ ಚಿತ್ರೀಕರಣವನ್ನು ಮಾಡಲಾಗುತ್ತದೆ. ಅರಸನ ಕೋಟೆ ಅಖಿಲಾಂಡೇಶ್ವರಿ ಆಗಿ ವಿನಯ ಪ್ರಸಾದ್ ಅಭಿನಯಿಸುತ್ತಿದ್ದರೆ, ಧಾರಾವಾಹಿಯ ನಾಯಕಿ ಪಾರು ಅಲಿಯಾಸ್ ಪಾರ್ವತಿ ಆಗಿ ವೀಕ್ಷಕರ ಮನ ಸೆಳೆಯುವಲ್ಲಿ ಮೋಕ್ಷಿತಾ ಯಶಸ್ವಿಯಾಗಿದ್ದಾರೆ. ಬಣ್ಣದ ಲೋಕಕ್ಕೆ ಅವರು ಹೊಸಬರಾಗಿದ್ದರೂ ಮೊದಲ ಪ್ರಯತ್ನದಲ್ಲೇ ಪಾಸ್ ಆಗಿದ್ದಾರೆ. ಇನ್ನು ನಾಯಕ ಆದಿ ಆಗಿ ಶರತ್ ಅವರು ಕಾಣಿಸಿಕೊಂಡಿದ್ದು ಪಾರು ಮತ್ತು ಆದಿತ್ಯ ಅವರ ಜೋಡಿಯನ್ನು ಕಣ್ಣಾರೆ ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿರುತ್ತಾರೆ.