ಕರ್ನಾಟಕ

karnataka

ETV Bharat / sitara

ಅನಾಥಾಶ್ರಮದಲ್ಲಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪಾರು! - ಅನಾಥ ಮಕ್ಕಳೊಂದಿಗೆ ಬರ್ತಡೇ ಆಚರಿಸಿಕೊಂಡ ಪಾರು

ಪಾರು ಅಲಿಯಾಸ್ ಮೋಕ್ಷಿತ ನಿನ್ನೆ ಬೆಂಗಳೂರಿನ ಸರ್ಜಾಪುರದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಂತೋಷದಿಂದ ಸಮಯ ಕಳೆದಿದ್ದು, ಮಕ್ಕಳಿಗೆ ಊಟ ಬಡಿಸುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಅನಾಥ ಮಕ್ಕಳೊಂದಿಗೆ ಮೋಕ್ಷಿತ

By

Published : Oct 23, 2019, 7:43 PM IST

ಕಿರುತೆರೆ ನಟಿ ಮೋಕ್ಷಿತ ಪೈ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಬರ್ತಡೇ ಎಂದರೆ ನೆನಪಾಗುವುದು ಕೇಕ್, ಚಾಕೋಲೇಟ್, ಫ್ರೆಂಡ್​​ಗಳ ಜೊತೆ ಪಾರ್ಟಿ. ಆದರೆ ಮೋಕ್ಷಿತ ಇವೆಲ್ಲವನ್ನೂ ಪಕ್ಕಕ್ಕೆ ಇಟ್ಟು ಅನಾಥಾಶ್ರಮದಲ್ಲಿ ಅನಾಥ ಮಕ್ಕಳೊಂದಿಗೆ ಬರ್ತಡೇ ಆಚರಿಸಿಕೊಂಡಿದ್ದಾರೆ.

ಅನಾಥ ಮಕ್ಕಳಿಗೆ ಊಟ ಬಡಿಸುತ್ತಿರುವ ಮೋಕ್ಷಿತ

ಪಾರು ಅಲಿಯಾಸ್ ಮೋಕ್ಷಿತ ನಿನ್ನೆ ಬೆಂಗಳೂರಿನ ಸರ್ಜಾಪುರದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಂತೋಷದಿಂದ ಸಮಯ ಕಳೆದಿದ್ದಾರೆ. ಅಲ್ಲಿನ ಮಕ್ಕಳಿಗೆ ತಾವೇ ಕೈಯಾರೆ ಊಟ ಬಡಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಾರ್ಥಕವಾಗಿಸಿಕೊಂಡಿದ್ದಾರೆ. ಪ್ರತಿ ವರ್ಷವೂ ಮೋಕ್ಷಿತ ತಮ್ಮ ಬರ್ತಡೇಯನ್ನು ಇದೇ ರೀತಿ ಆಚರಿಸುತ್ತಾರಂತೆ. ಅನಾಥ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೋಕ್ಷಿತ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಪಾರು' ಧಾರಾವಾಹಿ ಮೂಲಕ ಪಾರು ಎಂದೇ ಖ್ಯಾತಿ ಆಗಿರುವ ಮೋಕ್ಷಿತ ಇತ್ತೀಚೆಗೆ ನಡೆದ ಜೀ ಕುಟುಂಬ ಅವಾರ್ಡ್​ನಲ್ಲಿ ಬೆಸ್ಟ್ ಲೀಡ್ ರೋಲ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

ಅನಾಥ ಮಕ್ಕಳೊಂದಿಗೆ ಬರ್ತಡೇ ಆಚರಿಸಿಕೊಂಡ ಮೋಕ್ಷಿತ

For All Latest Updates

TAGGED:

ABOUT THE AUTHOR

...view details