ಫೋಟೋಶೂಟ್ ಹಾಗೂ ಸೆಲಬ್ರಿಟಿಗಳು ಬೆಸ್ಟ್ ಫ್ರೆಂಡ್ಸ್ ಎನ್ನಬಹುದು. ಏಕೆಂದರೆ ಇಬ್ಬರದ್ದೂ ಬಿಟ್ಟಿರಲಾರದ ಸಂಬಂಧ. ಆಗ್ಗಾಗ್ಗೆ ಹೊಸ ಫೋಟೋಶೂಟ್ ಮಾಡಿಸದಿದ್ದಲ್ಲಿ ಸೆಲಬ್ರಿಟಿಗಳಿಗೆ ಸಮಾಧಾನ ಆಗುವುದಿಲ್ಲ.
ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿ ಪ್ರಮುಖ ಪಾತ್ರಧಾರಿ ಮೋಕ್ಷಿತಾ ಪೈ ಕೂಡಾ ಹೊಸ ಪೋಟೋಶೂಟ್ ಮಾಡಿಸಿದ್ದಾರೆ. ಇಷ್ಟು ದಿನ ನಟನೆಯ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದ ಮೋಕ್ಷಿತಾ, ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿಕೊಂಡಿದ್ದು ಸಾಂಪ್ರದಾಯಿಕ ಉಡುಗೆಯಲ್ಲಿ ದಂತದ ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಆಗಿ ವೀಕ್ಷಕರನ್ನು ಮನರಂಜಿಸುತ್ತಿದ್ದ ಪಾರುವಿನ ವಿಭಿನ್ನ ಫೊಟೋಶೂಟ್ ಕಂಡು ನೆಟ್ಟಿಗರು ಮನ ಸೋತಿದ್ದಾರೆ.
ಬಯಸದೆ ನಟನಾ ಕ್ಷೇತ್ರಕ್ಕೆ ಬಂದು ಮೊದಲ ಧಾರಾವಾಹಿಯಲ್ಲೇ ಜನರ ಮನ ಗೆದ್ದ ಕರಾವಳಿ ಕುವರಿ ಪಡ್ಡೆ ಹೈದರ ಮನ ಕದ್ದಿದ್ದಾರೆ. ಫ್ಯಾಷನ್ನತ್ತ ವಿಶೇಷ ಆಕರ್ಷಣೆ ಹೊಂದಿದ್ದ ಮೋಕ್ಷಿತಾಗೆ ಫ್ಯಾಷನ್ ಡಿಸೈನರ್ ಆಗಬೇಕೆಂಬ ಮಹಾದಾಸೆ ಇತ್ತು. ಅಂತೆಯೇ ಆ ಕೋರ್ಸ್ ಮಾಡಲು ಬೇಕಾದ ತಯಾರಿಯೂ ನಡೆಸುತ್ತಿದ್ದರು. ಅಷ್ಟರಲ್ಲಿ ಮೋಕ್ಷಿತಾ ಫೋಟೋ ನೋಡಿದ ಧಾರಾವಾಹಿ ತಂಡ, ಆಡಿಷನ್ನಲ್ಲಿ ಭಾಗವಹಿಸುವಂತೆ ಕೇಳಿಕೊಂಡರು. ಒಲ್ಲೆ ಎನ್ನದೆ ಆಡಿಶನ್ಗೆ ಹೋದ ಮೋಕ್ಷಿತಾ, ಅದೃಷ್ಟದ ಬಾಗಿಲು ತೆರೆದೇಬಿಡ್ತು. ಏಕೆಂದರೆ ಮೋಕ್ಷಿತಾ ಧಾರಾವಾಹಿಗೆ ಸೆಲೆಕ್ಟ್ ಆಗಿದ್ದರು.
ಆ್ಯಕ್ಟಿಂಗ್ ಬಗ್ಗೆ ಏನೂ ತಿಳಿದಿಲ್ಲದ ಕಾರಣ ಮೋಕ್ಷಿತಾ ಮೊದಲ ಬಾರಿ ಕ್ಯಾಮರಾ ಫೇಸ್ ಮಾಡಿದಾಗ ಬಹಳ ಭಯಭೀತರಾಗಿದ್ದರಂತೆ. ಆದರೆ ಧಾರಾವಾಹಿ ತಂಡ ಅವರಿಗೆ ಎಲ್ಲವನ್ನೂ ಕಲಿಸಿದೆ. ಮೋಕ್ಷಿತಾ ಹಿರಿಯ ಕಲಾವಿದರ ಪ್ರೋತ್ಸಾಹದಿಂದ ಇಂದು ಪಾರುವಾಗಿ ನಿಮ್ಮ ಮನೆಗೆ ಬರುತ್ತಿದ್ದಾರೆ. ಕಿರುತೆರೆ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮೋಕ್ಷಿತಾ, ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕೂಡಾ ಮಿಂಚಿದ್ದಾರೆ. ಇಂದು ಮೋಕ್ಷಿತಾ ಎಲ್ಲೇ ಹೋದರೂ ಜನ ಗುರುತಿಸುವುದು ಪಾರುವಾಗಿ. ಮೊದಲ ಧಾರಾವಾಹಿಯಲ್ಲೇ ಇಷ್ಟು ದೊಡ್ಡ ಯಶಸ್ಸು ಬಂದಿರುವುದು ಮೋಕ್ಷಿತಾಗೆ ಖುಷಿ ತಂದಿದೆ.
ಅಭಿಮಾನಿಗಳ ಮನಕ್ಕೆ ಮತ್ತಷ್ಟು ಹತ್ತಿರವಾದ ಮೋಕ್ಷಿತಾ