ಸಾಮಾನ್ಯವಾಗಿ ಸುಂದವಾಗಿರುವ ನಟಿಯರು ನಾಯಕಿ ಪಾತ್ರ ಬೇಕು ಎಂದು ಸಂಕಲ್ಪ ಮಾಡುತ್ತಾರೆ. ಆದರೆ ಜನಪ್ರಿಯ ಕಿರುತೆರೆ ನಟಿ, ನಾಲ್ಕು ಸಿನಿಮಾಗಳಲ್ಲಿ ಕೂಡಾ ಅಭಿನಯಿಸಿರುವ ಚೆಲುವೆ ಪಲ್ಲವಿ ಗೌಡ ಅವರಿಗೆ ಖಳನಾಯಕಿ ಆಗಬೇಕೆಂಬ ಕನಸಂತೆ.
ಈ ಮುದ್ದು ಚೆಲುವೆಗೆ ಖಳನಟಿ ಪಾತ್ರ ಹೆಚ್ಚು ಇಷ್ಟವಂತೆ... ಅದಕ್ಕೆ ಕಾರಣ ಇಷ್ಟೇ - ನೆಗೆಟಿವ್ ಪಾತ್ರಕ್ಕೆ ಪಲ್ಲವಿ ಗೌಡ ಒಲವು
ನಾಯಕಿ ಆಗಿ ಮಿಂಚುವ ಅವಕಾಶ ಇದ್ದರೂ ಅವರಿಗೆ ಖಳನಾಯಕಿ ಪಾತ್ರದಲ್ಲೇ ಹೆಚ್ಚು ಆಸಕ್ತಿ ಇದೆಯಂತೆ. ಕನ್ನಡ ಮಾತ್ರವಲ್ಲ ಈಗಾಗಲೇ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡಾ ಪಲ್ಲವಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಇನ್ನು ಪಲ್ಲವಿ ಗೌಡ ಖಳನಾಯಕಿ ಆಗಬೇಕು ಎಂದುಕೊಂಡಿರುವುದು ಆ ಪಾತ್ರದಲ್ಲಿ ವೈವಿಧ್ಯತೆ ಇದೆ ಎಂಬ ಕಾರಣಕ್ಕೆ. ಅಲ್ಲದೆ ಜನರು ಆ ಪಾತ್ರವನ್ನು ಹೆಚ್ಚು ನೆನಪು ಇಡುತ್ತಾರೆ ಎಂಬ ಕಾರಣ ಕೂಡಾ ಹೌದು. ಹಾಗೆ ನೋಡಿದರೆ ಕಿರುತೆರೆಯ 'ಜೋಡಿಹಕ್ಕಿ' ಹಾಗೂ 'ನಂ ಗಣಿ ಬಿಕಾಂ ಪಾಸು' ಸಿನಿಮಾದಲ್ಲಿ ಪಲ್ಲವಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿ ಆಗಿ ಮಿಂಚುವ ಅವಕಾಶ ಇದ್ದರೂ ಅವರಿಗೆ ಖಳನಾಯಕಿ ಪಾತ್ರದಲ್ಲೇ ಹೆಚ್ಚು ಆಸಕ್ತಿ ಇದೆಯಂತೆ. ಕನ್ನಡ ಮಾತ್ರವಲ್ಲ ಈಗಾಗಲೇ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡಾ ಪಲ್ಲವಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
‘ಸವಿರುಚಿ’ ಕಾರ್ಯಕ್ರಮದ ಮೂಲಕ ಪರಿಚಯ ಆದ ಪಲ್ಲವಿ, ನಂತರ 'ಮನೆಯೊಂದು ಮೂರು ಬಾಗಿಲು, ಪರಿಣಯ, ಚಂದ್ರ ಚಕೋರಿ, ಗಾಳಿಪಟ, ಜೋಡಿ ಹಕ್ಕಿ, ಸೇವಂತಿ ಹಾಗೂ ಇನ್ನಿತರ ಮೆಗಾ ಧಾರಾವಾಹಿಗಳಲ್ಲಿ ನಟಿಸಿದರು. ನಂತರ 'ಪ್ರೇಮ ಗೀಮ ಜಾನೆ ದೋ' ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕೂಡಾ ಅವರು ಕಾಲಿರಿಸಿದರು. 'ಕಿಡಿ' ಚಿತ್ರದಲ್ಲಿ ಕೂಡಾ ಅವರಿಗೆ ಒಳ್ಳೆ ಪಾತ್ರವೊಂದು ದೊರೆತಿತ್ತು. ಇದೀಗ ಅವರು 'ಕೊಡೆ ಮುರುಗ' ಎಂಬ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.