ಕರ್ನಾಟಕ

karnataka

By

Published : Aug 5, 2020, 10:26 AM IST

ETV Bharat / sitara

ಮತ್ತೊಂದು ಹೃದಯಸ್ಪರ್ಶಿ ಕಿರುಚಿತ್ರ ತಯಾರಿಸಿದ ಯತಿರಾಜ್​​

ಕೊರೊನಾ ಲಾಕ್​ ಡೌನ್ ಆರಂಭವಾದಾಗಿನಿಂದ ನಟ, ನಿರ್ದೇಶಕ, ಯತಿರಾಜ್ ಹೆಚ್ಚಾಗಿ ಕಿರುಚಿತ್ರ ನಿರ್ಮಾಣದತ್ತ ಗಮನ ನೀಡುತ್ತಿದ್ದಾರೆ. ಇದೀಗ ಅವರು 'ಚಿಂಟು' ಎಂಬ ಮತ್ತೊಂದು ಕಿರುಚಿತ್ರವನ್ನು ತಯಾರಿಸಿದ್ದಾರೆ.

One more Short film by Yethiraj
ಯತಿರಾಜ್​​

ಕಿರುತೆರೆ, ಬೆಳ್ಳಿತೆರೆಯ ನಟ , ನಿರ್ದೇಶಕ, ನಿರ್ಮಾಪಕ, ಪತ್ರಕರ್ತ ಆಗಿ ಕೂಡಾ ಹೆಸರು ಮಾಡಿರುವ ಕಲಾವಿಧ ಫಿಲಂ ಅಕಾಡೆಮಿ ಸಂಸ್ಥಾಪಕ ಯತಿರಾಜ್​​​​​​​​​​​​​​​​​​​​​​​​​​ ಈ ಕೊರೊನಾ ರಜೆ ಸಮಯವನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಕಳೆದ 4-5 ತಿಂಗಳಲ್ಲಿ ಅವರು ಆರು ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ.

ಇದೀಗ ಯತಿರಾಜ್​​​​​​​​​​​​ 'ಚಿಂಟು' ಎಂಬ ಕಿರುಚಿತ್ರವನ್ನು ತಯಾರಿಸಿದ್ದಾರೆ. ಒಂದು ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಈ ಚಿಂಟು ಕಿರುಚಿತ್ರವನ್ನು ನೋಡಿ ಮೆಚ್ಚಿದ್ದಾರೆ. ಯತಿರಾಜ್ ಅವರ ಕಿರುಚಿತ್ರಗಳು ಜನರಿಗೆ ಇಷ್ಟ ಆಗಲು ಕಾರಣ ಅವರು ಆಯ್ಕೆ ಮಾಡಿಕೊಳ್ಳುವ ಕಥಾವಸ್ತು. ಅಷ್ಟೇ ಅಲ್ಲ, ಅವರ ಪ್ರತಿ ಕಿರುಚಿತ್ರದಲ್ಲೂ ಏನಾದರೊಂದು ಸಂದೇಶ ಇದ್ದೇ ಇರುತ್ತದೆ. ಇದೀಗ 'ಚಿಂಟು' ಮೂಲಕ ಕೊರೊನಾ ಸಮಯದಲ್ಲಿ ಖಾಸಗಿ ಶಾಲೆಗಳ ಕನ್ನಡ ಶಿಕ್ಷಕರ ಪರಿಸ್ಥಿತಿ ಏನಾಗಿದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.

ಸಂಬಳ ನೀಡಲಾಗದೆ ಖಾಸಗಿ ಶಾಲೆಯ ಕನ್ನಡ ಶಿಕ್ಷಕರನ್ನು ಶಾಲೆಯವರು ಕೆಲಸದಿಂದ ತೆಗೆದಾಗ ಮನೆಯ ಬೇಕು-ಬೇಡಗಳನ್ನು ಪೂರೈಸಲು ಆ ಶಿಕ್ಷಕ ರಸ್ತೆಬದಿಯ ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರ ಶುರು ಮಾಡುತ್ತಾರೆ. ಆಕಸ್ಮಿಕವಾಗಿ ಅಲ್ಲಿಗೆ ತಾಯಿಯೊಂದಿಗೆ ಬರುವ ಆ ಶಿಕ್ಷಕರ ವಿದ್ಯಾರ್ಥಿಯೊಬ್ಬ ತಮ್ಮ ಗುರುಗಳನ್ನು ಅಲ್ಲಿ ನೋಡುತ್ತಾನೆ. ನಂತರ ಏನು ಜರುಗುತ್ತದೆ ಎಂಬುದನ್ನು ಕಿರುಚಿತ್ರದಲ್ಲಿ ಯತಿರಾಜ್ ಬಹಳ ಚೆನ್ನಾಗಿ ತೋರಿಸಿದ್ದಾರೆ.

6:19 ನಿಮಿಷ ಅವಧಿಯ ಈ ಕಿರುಚಿತ್ರ ನಿಜಕ್ಕೂ ಮನ ಮುಟ್ಟುವಂತಿದೆ. ರಾಜಾ ಎಂಬ ಶಿಕ್ಷಕರೊಬ್ಬರು ಈಗ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು ಅವರೇ ಈ ಕಿರುಚಿತ್ರಕ್ಕೆ ಸ್ಫೂರ್ತಿ ಎನ್ನುತ್ತಾರೆ ಯತಿರಾಜ್. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಮಾಡಿರುವ ಯತಿರಾಜ್​, ಬಸವೇಶ್ವರ ನಗರ ಬಜಾರ್ ರಸ್ತೆ, ವಿಜಯ ಪಬ್ಲಿಕ್ ಶಾಲೆ, ಸುಂಕದ ಕಟ್ಟೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಎರಡು ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ. ಪೃಥ್ವಿರಾಜ ಛಾಯಾಗ್ರಹಣ ಮಾಡಿದ್ದಾರೆ, ಅರುಣ್ ಸಂಕಲನ, ಮಂಗಳ ಗೌರಿ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಯತಿರಾಜ್​​

'ಚಿಂಟು-ನಂಬಲಾಗದ ನಂಟು' ಕಿರುಚಿತ್ರದಲ್ಲಿ ಯತಿರಾಜ್ ಕನ್ನಡ ಶಿಕ್ಷಕರ ಪಾತ್ರ ನಿರ್ವಹಿಸಿದ್ದಾರೆ. ಪ್ರಿಯಾ ತರುಣ್ ತಾಯಿ ಪಾತ್ರ ಮಾಡಿದ್ದಾರೆ. ಜಾಹ್ನವಿ, ರಾಜಾ ನಾಯಕ್, ಗಂಗಾಧರ್ ಭಟ್ ಜೊತೆಗೆ ಪುಟಾಣಿಗಳಾದ ಮಹಾಶ್ವಿನ್, ಶ್ರಾವ್ಯ ಕಿರಣ್, ಸಂಜಯ್ ನಾಯಕ್, ಮೇಘನ, ಮನಸ್ವಿ, ವರುಣ್ ನಾಯಕ್, ಖುಷಿ, ಶ್ರುತಿ, ದಿಲೀಪ್ ನಾಯಕ್ ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಕಿರುಚಿತ್ರ ಯತಿರಾಜ್ ಅವರ ಕಲಾವಿಧ ಫಿಲಂ ಅಕಾಡೆಮಿ ಯೂಟ್ಯೂಬ್ ಚಾನೆಲ್​​​​ನಲ್ಲಿ ಲಭ್ಯವಿದೆ.

ABOUT THE AUTHOR

...view details