ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಒಗ್ಗರಣೆ ಡಬ್ಬಿ' ಕಾರ್ಯಕ್ರಮದ ಮೂಲಕ ಖ್ಯಾತರಾದ ನಿರೂಪಕ ಮುರಳಿ ನಂತರ ಬಿಗ್ಬಾಸ್ - 6 ಸೀಸನ್ನಲ್ಲೂ ಭಾಗವಹಿಸಿದ್ದರು. ಅಡುಗೆ ಮೂಲಕ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಕೂಡಾ ಅವರು ಹೊಂದಿದ್ದಾರೆ.
ಒಗ್ಗರಣೆ ಡಬ್ಬಿ ಮುರಳಿಯಿಂದ ಮತ್ತೊಂದು ಮನರಂಜನೆ ಕಾರ್ಯಕ್ರಮ - undefined
ಅಡುಗೆ ಮೂಲಕ ಆಹಾರಪ್ರಿಯರನ್ನು ಸೆಳೆದಿದ್ದ ಮುರಳಿ ಈಗ ದಂಪತಿಗಳನ್ನು ಸೆಳೆಯಲು 'ಸೂಪರ್ ದಂಪತಿ' ಎಂಬ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಶೋಗಾಗಿ ರಾಜ್ಯಾದ್ಯಂತ ಉತ್ತಮ ದಂಪತಿಗಳನ್ನು ಮುರಳಿ ಸಂಪರ್ಕಿಸಲಿದ್ದಾರೆ.

ಕೆಲವು ದಿನಗಳ ಹಿಂದೆ ಒಂದು ಸಿನಿಮಾ 30 ರೂಪಾಯಿಗೆ ತೋರಿಸುವಂತ 'ಸ್ಟಾರ್ ಕ್ಯೂ' ಆ್ಯಪ್ ಪರಿಚಯಿಸಿದ್ದರು. ಆ ವೇಳೆ ಸುಮಾರು 3 ಲಕ್ಷಕ್ಕೂ ಹೆಚ್ಚು ಮಂದಿ ಮುರಳಿ ಬಳಿ ನೋಂದಣಿ ಮಾಡಿಸಿಕೊಂಡಿದ್ದರು. ಇದೀಗ ಅವರು ಮತ್ತೊಂದು ಮನರಂಜನೆ ಕಾರ್ಯಕ್ರಮ ನೀಡಲು ಮುಂದಾಗಿದ್ದಾರೆ. ಅಡುಗೆ ಮೂಲಕ ಆಹಾರಪ್ರಿಯರನ್ನು ಸೆಳೆದಿದ್ದ ಮುರಳಿ ಈಗ ದಂಪತಿಗಳನ್ನು ಸೆಳೆಯಲು ಮುಂದಾಗಿದ್ದಾರೆ. ಖಾಸಗಿ ವಾಹಿನಿ ಮೂಲಕ 'ಸೂಪರ್ ದಂಪತಿ' ಎಂಬ ಕಾರ್ಯಕ್ರಮವನ್ನು ದಂಪತಿಗಳಿಗಾಗಿಯೇ ಆಯೋಜಿಸಿದ್ದಾರೆ. ಈ ಶೋಗಾಗಿ ರಾಜ್ಯಾದ್ಯಂತ ಉತ್ತಮ ದಂಪತಿ ಮುರಳಿ ಸಂಪರ್ಕಿಸಲಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಬೆಸ್ಟ್ ಎನಿಸುವಂತ ದಂಪತಿಗಳನ್ನು ಆರಿಸಲಿದ್ದಾರೆ ಮುರಳಿ. ಅದಕ್ಕಾಗಿ ಹಲವು ಟಾಸ್ಕ್ ನೀಡಲಿದ್ದಾರೆ. ಈ ಮೂಲಕ ಆಕರ್ಷಕ ಬಹುಮಾನಗಳನ್ನೂ ದಂಪತಿಗಳು ತಮ್ಮದಾಗಿಸಿಕೊಳ್ಳಬಹುದು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಆರಂಭವಾಗಲಿರುವ ಈ ಶೋನಲ್ಲಿ ಭಾಗವಹಿಸಲು ದಂಪತಿಗಳು Voot ಆಪ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.