ಕರ್ನಾಟಕ

karnataka

ETV Bharat / sitara

ಕನ್ನಡ ಸಿನಿಮಾ ಕಾರ್ಮಿಕರ ಸಹಾಯಕ್ಕೆ ಬಂದ 'ಯುವರಾಜ' - Kannada film workers

'ಸ್ಯಾಂಡಲ್‌ವುಡ್ ಯುವರಾಜ' ನಿಖಿಲ್ ಕುಮಾರ್ ಕನ್ನಡ ಚಿತ್ರರಂಗದ ಸಿನಿಮಾ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ್ದಾರೆ.

Nikhil Kumaraswamy
ಕನ್ನಡ ಸಿನಿಮಾ ಕಾರ್ಮಿಕರ ಸಹಾಯಕ್ಕೆ ಬಂದ ಯುವರಾಜ!!

By

Published : Mar 28, 2020, 10:23 AM IST

ಕೊರೊನಾ ವೈರಸ್​ ದಾಳಿಯಿಂದ ಇಡೀ ದೇಶವೇ ಲಾಕ್ ಡೌನ್ ಸ್ಥಿತಿಗೆ ತಲುಪಿದೆ. ಹೀಗಾಗಿ ಎಲ್ಲಾ ಉದ್ಯಮಗಳು ಸ್ಥಗಿತವಾಗಿದ್ದು ಜನರು ದುಡಿಮೆಯಿಲ್ಲದೆ ಅನಿವಾರ್ಯವಾಗಿ ಮನೆಯಲ್ಲೇ ಕೂರಬೇಕಾಗಿದೆ. ಅದೇ ರೀತಿ ಸಿನಿಮಾ ಉದ್ಯಮ ಕೂಡ ಸಂಪೂರ್ಣ ಬಂದ್ ಆಗಿರುವ ಕಾರಣ, ದಿನಗೂಲಿ ನಂಬಿ ಬದುಕುತ್ತಿದ್ದ ಸಿನಿಮಾ ಕಾರ್ಮಿಕರ ವರ್ಗ ಕಂಗಾಲಾಗಿದೆ. ಈ ಪರಿಸ್ಥಿತಿ ಅರಿತುಕೊಡಿರುವ ನಿಖಿಲ್ ಕುಮಾರ್ ಕಾರ್ಮಿಕರಿಗೆ ಸಹಾಯ ನೀಡಲು ಮುಂದೆ ಬಂದಿದ್ದಾರೆ.

ಸಿನಿಮಾ ಕಾರ್ಮಿಕರಾದ ಲೈಟ್‌ ಬಾಯ್ಸ್ ಅಸೋಸಿಯೇಷನ್, ಯೂನಿಟ್ ಬಾಯ್ಸ್ ಅಸೋಸಿಯೇಷನ್, ಪ್ರೊಡಕ್ಷನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಮೇಕಪ್ ಮೆನ್ ಸೇರಿದಂತೆ ಸುಮಾರು 3 ಸಾವಿರ ಸಿನಿಮಾ ಕಾರ್ಮಿಕರ ಅಕೌಂಟ್​ಗೆ ನೇರವಾಗಿ ಧನ ಸಹಾಯ ಮಾಡಲು ಅವರು ತೀರ್ಮಾನಿಸಿದ್ದಾರೆ.

ಈ ನಿರ್ಧಾರ ತಿಳಿದ ಸಿನಿ ಕಾರ್ಮಿಕರು ನಿಖಿಲ್ ಕುಮಾರ್​ಗೆ ಧನ್ಯವಾದ ತಿಳಿಸಿದ್ದಾರೆ.

ABOUT THE AUTHOR

...view details