ಸದಾ ಕಾಲ ಹೊಚ್ಚ ಹೊಸ ಕಾರ್ಯಕ್ರಮ, ರಿಯಾಲಿಟಿ ಶೋ ಮೂಲಕ ಜನರ ಮನವನ್ನು ಸೆಳೆಯುತ್ತಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ಕೂಡಾ ಒಂದು. 'ಅರಮನೆ ಗಿಳಿ', 'ಪ್ರೇಮಲೋಕ' ದಂತಹ ಹೊಸ ಧಾರಾವಾಹಿಗಳನ್ನು ಆರಂಭಿಸಿದ ಈ ವಾಹಿನಿ ಮಧ್ಯಾಹ್ನದ ಧಾರಾವಾಹಿಗಳನ್ನು ಶುರು ಮಾಡಿ ಆ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿತ್ತು.
ಕಿರುತೆರೆ ಧಾರಾವಾಹಿಗಳ ಸಾಲಿಗೆ ಸೇರ್ಪಡೆಯಾಗುತ್ತಿದ್ದಾಳೆ 'ಇಂತಿ ನಿಮ್ಮ ಆಶಾ' - ಸ್ಟಾರ್ ಸುವರ್ಣ
ವಿಭಿನ್ನ ಧಾರಾವಾಹಿಗಳ ಮೂಲಕ ಮನರಂಜನೆಯ ಮಹಾಪೂರವೇ ಉಣ ಬಡಿಸುತ್ತಿದ್ದ ನಿಮ್ಮ ನೆಚ್ಚಿನ ವಾಹಿನಿಯಲ್ಲಿ ಹೊಸ ಧಾರಾವಾಹಿ ಆರಂಭವಾಗುತ್ತಿದೆ. 'ಇಂತಿ ನಿಮ್ಮ ಆಶಾ' ಎಂಬ ಧಾರಾವಾಹಿ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು ನಟಿ ಸಂಗೀತ 'ಆಶಾ' ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.
'ಯಜಮಾನಿ' ಮತ್ತು 'ಶ್ರುತಿ ಸೇರಿದಾಗ' ಧಾರಾವಾಹಿಯ ಮೂಲಕ ಸ್ಟಾರ್ ಸುವರ್ಣ ತಾವು ನೀಡುವ ಮನರಂಜನೆಯನ್ನು ದುಪ್ಪಟ್ಟಾಗಿಸಿದೆ. ಇದೀಗ ಈ ಸಾಲಿಗೆ 'ಆಶಾ' ಕೂಡಾ ಸೇರ್ಪಡೆಯಾಗಿದ್ದಾಳೆ. ಹೊಸ ಹೊಸ ಧಾರಾವಾಹಿಗಳ ಮೂಲಕ ಮನರಂಜನೆಯ ಮಹಾಪೂರವೇ ಉಣಬಡಿಸುತ್ತಿದ್ದ ನಿಮ್ಮ ನೆಚ್ಚಿನ ವಾಹಿನಿಯಲ್ಲಿ ಇದೀಗ ಮತ್ತೊಂದು ಧಾರಾವಾಹಿ ಶುರುವಾಗುತ್ತಿದೆ. 'ಇಂತಿ ನಿಮ್ಮ ಆಶಾ' ಧಾರಾವಾಹಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು ಕಿರುತೆರೆ ನಟಿ ಸಂಗೀತ 'ಆಶಾ' ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಈಗಾಗಲೇ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ನಾಯಕನ ಅಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿರುವ ಸಂಗೀತ ಇಲ್ಲಿ ಆಶಾ ಆಗಿ ಬದಲಾಗಲಿದ್ದಾರೆ. ಈ ಧಾರಾವಾಹಿಯ ಪ್ರೋಮೋ ಕೂಡಾ ಬಿಡುಗಡೆಯಾಗಿದ್ದು ಸಾಕಷ್ಟು ಸುದ್ದಿ ಮಾಡುತ್ತಿದೆ. ಸಂಗೀತ ಅವರೇ ಸ್ವತಃ 'ನಿಮ್ಮ ನೆಚ್ಚಿನ ಸಂಗೀತ ಇನ್ನು ಮುಂದೆ 'ಆಶಾ' ಆಗಿ ನಿಮ್ಮ ಮನೆಗೆ ಬರಲಿದ್ದೇನೆ. ನನಗಂತೂ ತುಂಬಾ ಖುಷಿಯಾಗುತ್ತಿದೆ. ಈ ಧಾರಾವಾಹಿ ನಿಮಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ದಯ ಮಾಡಿ ಧಾರಾವಾಹಿ ನೋಡಿ, ಪ್ರೋತ್ಸಾಹಿಸಿ' ಎಂದು ಹೇಳಿದ್ದಾರೆ.