ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕಮಲಿ'ಯಲ್ಲಿ ಇದೀಗ ರೋಚಕವಾದ ಟ್ವಿಸ್ಟ್ ಎದುರಾಗಿದೆ. ಕಮಲಿ ಧಾರಾವಾಹಿಯಲ್ಲಿ ಅಂಬಿಯ ಆಗಮನವಾಗಲಿದೆ. ರೆಬಲ್ ಸ್ಟಾರ್ ಅಂಬರೀಶ್ ಕಟ್ಟಾ ಅಭಿಮಾನಿಯಾದ ಅಂಬಿ ಆಲಿಯಾಸ್ ಅಂಬಿಕಾ ಎನ್ನುವ ಹೊಸ ಪಾತ್ರ ಕಮಲಿ ಧಾರಾವಾಹಿಗೆ ಎಂಟ್ರಿ ಆಗಲಿದೆ.
'ಕಮಲಿ' ಧಾರಾವಾಹಿಯಲ್ಲಿ ಟ್ವಿಸ್ಟ್..ನಾಯಕಿಗೆ ಸಹಾಯ ಮಾಡಲು ಅಂಬಿ ಎಂಟ್ರಿ..! - Ambi character in Kamali serial
'ಕಮಲಿ' ಧಾರಾವಾಹಿ ಕಥೆಗೆ ಟ್ವಿಸ್ಟ್ ದೊರೆಯುತ್ತಿದ್ದು ನೋವಿನಿಂದ ಕಂಗಾಲಾಗಿ ಹೋಗಿರುವ ಕಮಲಿಗೆ ಸಹಾಯ ಮಾಡಲು ಅಂಬಿ ಎಂಬ ಹೊಸ ಪಾತ್ರದ ಎಂಟ್ರಿ ಆಗುತ್ತಿದೆ.
ಅಂಬಿ, ನೋಡಲು ಕಮಲಿಯಂತೆಯೇ ಇರುವುದು ವಿಶೇಷ. ಮಾತ್ರವಲ್ಲ ಅಂಬಿಯ ಪಾತ್ರದಿಂದ ಕಥೆಯಲ್ಲಿ ರೋಚಕ ತಿರುವು ಸಿಗಲಿದೆ. ರಸ್ತೆ ಅಪಘಾತದಲ್ಲಿ ತನ್ನ ತಾಯಿ ಗೌರಿಯನ್ನು ಕಳೆದುಕೊಂಡಿರುವ ಕಮಲಿಗೆ ಈಗ ಅಪ್ಪ ಚಂದ್ರಕಾಂತ್ ಆಸರೆ. ಆದರೆ ಅಪ್ಪನನ್ನು ಹುಚ್ಚ ಎಂದು ಹೇಳುವ ಅನಿಕಾ ಕಮಲಿಗೆ ಈಗಲೂ ಚಿತ್ರಹಿಂಸೆ ನೀಡುತ್ತಿದ್ದಾಳೆ. ಮಾತ್ರವಲ್ಲ ತಾನು ಪ್ರೀತಿಸುವ ರಿಷಿ ಕೂಡಾ ತನಗೆ ಬೇಕು ಎಂದು ಅನಿಕಾ ಪಟ್ಟು ಹಿಡಿಯುತ್ತಿರುತ್ತಾಳೆ.
ಎಲ್ಲಾ ನೋವಿನಿಂದ ಕಂಗಾಲಾಗಿ ಹೋಗಿರುವ ಕಮಲಿಗೆ ಸಹಾಯ ಮಾಡಲು ಬರುವಾಕೆಯೇ ಅಂಬಿ ಅಲಿಯಾಸ್ ಅಂಬಿಕಾ. ಅಂಬಿಕಾ ಪಾತ್ರ ನಿಜಕ್ಕೂ ವಿಶಿಷ್ಟವಾದುದು. ರೆಬಲ್ ಸ್ಟಾರ್ ಅಂಬರೀಶ್ ಅವರ ಪಕ್ಕಾ ಅಭಿಮಾನಿಯಾಗಿರುವ ಅಂಬಿಕಾ, ತನ್ನ ಹೆಸರನ್ನು ಕೂಡಾ ಅಂಬಿ ಎಂದೇ ಇಟ್ಟುಕೊಂಡಿರುತ್ತಾಳೆ. ಬಾಯಿ ತೆಗೆದರೆ ಸಾಕು, ಬರುವುದು ಅಂಬಿ ಡೈಲಾಗ್ಗಳೇ. ಕಳ್ಳತನ ಮಾಡುವ ಅಂಬಿ ಆಲಿಯಾಸ್ ಅಂಬಿಕಾಗೆ ಅವಳ ಅಜ್ಜಿಯೇ ಎಲ್ಲಾ. ಅಜ್ಜಿಯ ಮಾತನ್ನು ಚಾಚೂ ತಪ್ಪದೇ ಮಾಡುವ ಅಂಬಿಕಾ, ಕಮಲಿ ಜೀವನದಲ್ಲಿ ಹೇಗೆ ಪ್ರವೇಶ ಪಡೆಯುತ್ತಾಳೆ...? ನೋವಿನಲ್ಲಿರುವ ಕಮಲಿಗೆ ಯಾವ ರೀತಿ ಸಹಾಯ ಮಾಡುತ್ತಾಳೆ..? ಆಕೆಯ ಆಗಮನದಿಂದ ಕಮಲಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ಮುಂದಿನ ಎಪಿಸೋಡ್ಗಳಲ್ಲಿ ನೋಡಬಹುದು.