ಕರ್ನಾಟಕ

karnataka

ETV Bharat / sitara

ಬರ್ತಿದೆ ಹೊಸ ರಿಯಾಲಿಟಿ ಶೋ 'ಮನೆ ಮನೆ ಮಹಾಲಕ್ಷ್ಮಿ' - Anchor Sushma Rao

ಮಾರ್ಚ್ 1 ರಿಂದ ಜೀ ಕನ್ನಡದಲ್ಲಿ 'ಮನೆ ಮನೆ ಮಹಾಲಕ್ಷ್ಮಿ' ಎಂಬ ಹೊಸ ಕಾರ್ಯಕ್ರಮ ಆರಂಭವಾಗಲಿದ್ದು ಈ ಕಾರ್ಯಕ್ರಮವನ್ನು ಸುಷ್ಮಾ ಕೆ. ರಾವ್ ನಿರೂಪಣೆ ಮಾಡಲಿದ್ದಾರೆ. ವಾಹಿನಿಯವರು ರಾಜ್ಯದ ಮೂಲೆ ಮೂಲೆಗೂ ತೆರಳಿ ಚಿತ್ರೀಕರಣ ಮಾಡಲಾಗುತ್ತಿದೆ.

Mane mane mahalaskhmi
'ಮನೆ ಮನೆ ಮಹಾಲಕ್ಷ್ಮಿ'

By

Published : Feb 24, 2021, 4:22 PM IST

ನಿರೂಪಕಿ ಸುಷ್ಮಾ ಕೆ.ರಾವ್ ಹೊಸ ರಿಯಾಲಿಟಿ ಶೋ ಮೂಲಕ ಮನೆ ಮನೆಗೆ ಬರಲಿದ್ದಾರೆ.'ಮನೆ ಮನೆ ಮಹಾಲಕ್ಷ್ಮಿ' ಎಂಬ ವಿನೂತನ ರಿಯಾಲಿಟಿ ಗೇಮ್ ಶೋ ಕರ್ನಾಟಕದ 31 ಜಿಲ್ಲೆಗಳ 175 ತಾಲೂಕುಗಳ ಆಯ್ದ ಮನೆ ಮನೆಗಳಿಗೆ ತಲುಪಲಿದೆ. ರಾಜ್ಯದ ಪ್ರತಿ ಜಿಲ್ಲೆಯ ಪ್ರತಿ ತಾಲೂಕಿನ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಿರೂಪಕಿ ಸುಷ್ಮಾ ತಾವೇ ಸ್ವತಃ ಮನೆಗಳಿಗೆ ಭೇಟಿ ನೀಡಿ ಎಲೆ ಮರೆ ಕಾಯಿಯಂತೆ ಕುಟುಂಬದ ಶ್ರೇಯಸ್ಸಿಗೆ ಶ್ರಮಿಸುತ್ತಿರುವ ಗೃಹಿಣಿಯರ ಸಾಧನೆಯನ್ನು ಅನಾವರಣಗೊಳಿಸುತ್ತಾರೆ.

ಸುಷ್ಮಾ ಕೆ.ರಾವ್

ಇದನ್ನೂ ಓದಿ: ಶ್ರೀದೇವಿ 3ನೇ ವರ್ಷದ ಪುಣ್ಯಸ್ಮರಣೆ..ಮೆಚ್ಚಿನ ನಟಿಯನ್ನು ಸ್ಮರಿಸಿದ ಅಭಿಮಾನಿಗಳು

ಮೊದಲಿಗೆ ಮಾರ್ಚ್ ಮೊದಲ ವಾರ ಶಿವಮೊಗ್ಗ, ಸಿದ್ದಾಪುರಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಗದಗಕ್ಕೆ ಪ್ರಯಾಣಿಸಲಿದ್ದಾರೆ.ಗೃಹಿಣಿಯರು ತಮಗೆ ಅನುಕೂಲವಾಗುವ ರೀತಿಯಲ್ಲಿ ಆಟಗಳನ್ನು ಆಡಬಹುದು. ಕ್ಯಾಮರಾ ನೋಡದೆ ಆಟ ಆಡುವಂತಹ ರೀತಿಯಲ್ಲಿ ನಮ್ಮ ತಂಡ ಎಲ್ಲಾ ವ್ಯವಸ್ಥೆ ಮಾಡಿದೆ. ಮನೆಗಳಲ್ಲೇ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದ್ದು ನಮ್ಮ ತಂಡ ಚಿತ್ರೀಕರಣಕ್ಕೆ ಸಜ್ಜಾಗಿದೆ ಎನ್ನುತ್ತಾರೆ ನಿರೂಪಕಿ ಸುಷ್ಮಾ ಕೆ. ರಾವ್. ಮಾರ್ಚ್ 1 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1-2 ಗಂಟೆಯವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುಟುಂಬಕ್ಕೆ ವಿವಿಧ ಬಗೆಯ ಟಾಸ್ಕ್ ನೀಡಿ ಅವರನ್ನು ಸಕ್ರಿಯರಾಗಿಸುತ್ತಾರೆ. ನಗದು ಬಹುಮಾನಗಳನ್ನೂ ಗೆಲ್ಲಲು ಅವಕಾಶವಿದೆ.

ABOUT THE AUTHOR

...view details