ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿ ಒಂದು ವರ್ಷ ಪೂರೈಸಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಈ 'ಪಾರು' ಧಾರಾವಾಹಿಗೆ ಹೊಸ ಕಲಾವಿದೆಯ ಎಂಟ್ರಿ ಆಗಿದೆ. ಅರಸನ ಕೋಟೆ ಅಖಿಲಾಂಡೇಶ್ವರಿ ಎರಡನೇ ಪುತ್ರ ಪ್ರೀತಮ್ ಪ್ರೀತಿಯಲ್ಲಿ ಬಿದ್ದಿದ್ದಾನೆ. ಅವನ ಹೃದಯ ಕದ್ದ ಮನದನ್ನೆಯ ಪರಿಚಯ ಇಂದಿನ ಸಂಚಿಕೆಯಲ್ಲಿ ಪ್ರೇಕ್ಷಕರಿಗೆ ಆಗಲಿದೆ.
'ಪಾರು' ಧಾರಾವಾಹಿಗೆ ಹೊಸ ಎಂಟ್ರಿ....ಜಾನು ಆಗಿ ಬದಲಾದ ನಂದಿನಿ..! - ಪಾರು ಧಾರಾವಾಹಿಗೆ ಪವಿತ್ರಾ ನಾಯಕ್ ಎಂಟ್ರಿ
ಪ್ರೀತಮ್ ಪ್ರೇಯಸಿ ಜಾನು ಆಗಿ ಕಾಣಿಸಿಕೊಳ್ಳುತ್ತಿರುವುದು ಬೇರಾರೂ ಅಲ್ಲ, ಪವಿತ್ರಾ ನಾಯ್ಕ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಕ್ಷಾ ಬಂಧನ' ಧಾರಾವಾಹಿಯಲ್ಲಿ ನಾಯಕಿ ನಂದಿನಿ ಆಗಿ ಮನೆ ಮಾತಾಗಿದ್ದ ಚೆಲುವೆ ಪವಿತ್ರಾ ನಾಯ್ಕ್ ಇದೀಗ ಜಾನು ಆಗಿ ಅಭಿನಯಿಸುತ್ತಿದ್ದಾರೆ.
ಪ್ರೀತಮ್, ಜಾನು ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು ಈ ವಿಷಯವನನ್ನು ಮನೆಯವರಿಗೆ ತಿಳಿಸುವುದು ಹೇಗೆ ಎಂದು ಪರಿತಪಿಸುತ್ತಿರುತ್ತಾನೆ. ಕೊನೆಗೆ ಜಾನು ಜೊತೆಗೆ ಕೂಡಿ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡುತ್ತಾರೆ. ಆದರೆ ಪಾರು ಅವರನ್ನು ತಡೆದಿದ್ದು ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ಅಂದ ಹಾಗೇ ಪ್ರೀತಮ್ ಪ್ರೇಯಸಿ ಜಾನು ಆಗಿ ಕಾಣಿಸಿಕೊಳ್ಳುತ್ತಿರುವುದು ಬೇರಾರೂ ಅಲ್ಲ, ಪವಿತ್ರಾ ನಾಯ್ಕ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಕ್ಷಾ ಬಂಧನ' ಧಾರಾವಾಹಿಯಲ್ಲಿ ನಾಯಕಿ ನಂದಿನಿ ಆಗಿ ಮನೆ ಮಾತಾಗಿದ್ದ ಚೆಲುವೆ ಪವಿತ್ರಾ ನಾಯ್ಕ್ ಇದೀಗ ಜಾನು ಆಗಿ ಅಭಿನಯಿಸುತ್ತಿದ್ದಾರೆ.
ಈಗಾಗಲೇ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ ಪವಿತ್ರಾ ಅವರು 'ರಕ್ಷಾಬಂಧನ' ಧಾರಾವಾಹಿ ಮೂಲಕ ಕಿರುತೆರೆ ಪ್ರಯಾಣ ಆರಂಭಿಸಿದ್ದರು. ಮಾತ್ರವಲ್ಲ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಜಾನು ಆಗಿ ಬದಲಾಗಿರುವ ಪವಿತ್ರಾ, ಪಾರುವಿನಲ್ಲಿ ಯಾವ ರೀತಿ ಮೋಡಿ ಮಾಡುತ್ತಾರೆ ಎಂದು ಕಾದು ನೋಡಬೇಕಾಗಿದೆ.