ಕರ್ನಾಟಕ

karnataka

ETV Bharat / sitara

'ಜೊತೆಜೊತೆಯಲಿ' ಧಾರಾವಾಹಿಗೆ ಹೊಸ ಎಂಟ್ರಿ ನೀಡಿರುವ ನೀಲ್ ಯಾರು..? - New character Neel entry to Jotejoteyali serial

ನಾಗರಾಜ್, ಬೆಳ್ಳಿ ತೆರೆಗೆ ಕಾಲಿಟ್ಟ ನಂತರ ತಮ್ಮ ಹೆಸರನ್ನು ಪೃಥ್ವಿ ಅಂಬರ್ ಎಂದು ಬದಲಿಸಿಕೊಂಡರು. ಕಿರುತೆರೆ ಜೊತೆಗೆ ಕೋಸ್ಟಲ್​​​​​ವುಡ್​​​​​​​​​​​​​ನಲ್ಲೂ ಮಿಂಚಿದ ಪ್ರತಿಭೆ ಈ ಪೃಥ್ವಿ ಅಂಬರ್. ಈಗಾಗಲೇ 4-5 ತುಳು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು, ಅಲ್ಲೂ ಕೂಡಾ ತಮ್ಮ ನಟನಾ ಕಂಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

Prithvi ambar
ಪೃಥ್ವಿ ಅಂಬರ್

By

Published : Jan 13, 2020, 5:50 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಜೊತೆಜೊತೆಯಲಿ' ಧಾರಾವಾಹಿಗೆ ಹೊಸ ನಟನ ಎಂಟ್ರಿ ಆಗಿದೆ. ನೀಲ್ ಎಂಬ ಹೆಸರಿನಲ್ಲಿ ಧಾರಾವಾಹಿಗೆ ಬಂದಿರುವ ಈ ಚಾಕೊಲೇಟ್ ಹುಡುಗನ ಹೆಸರು ಪೃಥ್ವಿ ಅಂಬರ್. ಅಂದ ಹಾಗೆ ಪೃಥ್ವಿ ಅವರಿಗೆ ಕಿರುತೆರೆಗೆ ಹೊಸತೇನಲ್ಲ.

ಪೃಥ್ವಿ ಅಂಬರ್

ನಿರೂಪಕನಾಗಿ ಬಣ್ಣದ ಪ್ರಯಣ ಆರಂಭಿಸಿದ ಕರಾವಳಿ ಕುವರ ಪೃಥ್ವಿ ಅಂಬರ್, 'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ನಂತರ 'ಲವಲವಿಕೆ', 'ಸಾಗರ ಸಂಭ್ರಮ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಪೃಥ್ವಿ ಅವರ ಮೂಲ ಹೆಸರು ನಾಗರಾಜ್ ಅಂಬರ್. ನಾಗರಾಜ್ ಬೆಳ್ಳಿ ತೆರೆಗೆ ಕಾಲಿಟ್ಟ ನಂತರ ತಮ್ಮ ಹೆಸರನ್ನು ಪೃಥ್ವಿ ಅಂಬರ್ ಎಂದು ಬದಲಿಸಿಕೊಂಡರು. ಕಿರುತೆರೆ ಜೊತೆಗೆ ಕೋಸ್ಟಲ್​​​​​ವುಡ್​​​​​​ನಲ್ಲೂ ಮಿಂಚಿದ ಪ್ರತಿಭೆ ಈ ಪೃಥ್ವಿ ಅಂಬರ್. ಈಗಾಗಲೇ 4-5 ತುಳು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು, ಅಲ್ಲೂ ಕೂಡಾ ತಮ್ಮ ನಟನಾ ಕಂಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ‌. ಪೃಥ್ವಿ ಅಭಿನಯದ 'ದಿಯಾ' ಸಿನಿಮಾ ಕೂಡಾ ಸಾಕಷ್ಟು ಸುದ್ದಿ ಮಾಡುತ್ತಿದೆ. ಕಳೆದ ವರ್ಷವಷ್ಟೇ ತಮ್ಮ ಬಹುಕಾಲದ ಗೆಳತಿ ಪಾರುಲ್ ಶುಕ್ಲಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಪೃಥ್ವಿ ಅಂಬರ್ ಇದೀಗ 'ಜೊತೆ ಜೊತೆಯಲಿ' ಧಾರಾವಾಹಿಯ ನೀಲ್ ಆಗಿ ಮತ್ತೆ ಕಿರುತೆರೆ ಪಯಣ ಆರಂಭಿಸಿದ್ದಾರೆ.

ABOUT THE AUTHOR

...view details