ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಗಳು ಜಾನಕಿ' ರಾಜ್ಯದ ಜನಮನ ಗೆದ್ದಿರುವ ಧಾರವಾಹಿ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವ ಈ ಧಾರವಾಹಿಯನ್ನು ಟಿ.ಎನ್. ಸೀತಾರಾಮ್ ನಿರ್ದೇಶಿಸುತ್ತಿದ್ದಾರೆ.
ಸೀರೆ ಬಿಟ್ಟು ಖಾಕಿ ತೊಟ್ಟ ಜಾನಕಿ: ಧಾರವಾಹಿಯಲ್ಲಿ ಶುರುವಾಗಲಿದೆ ಹೊಸ ಅಧ್ಯಾಯ - undefined
'ಮಗಳು ಜಾನಕಿ' ಧಾರವಾಹಿಯಲ್ಲಿ ಇದೀಗ ಹೊಸ ಅಧ್ಯಾಯ ಆರಂಭವಾಗಿದ್ದು ಇದುವರೆಗೂ ಸೀರೆ ತೊಟ್ಟಿದ್ದ ಜಾನಕಿ ಇದೀಗ ಖಾಕಿ ಯೂನಿಫಾರ್ಮ್ ಧರಿಸಿ ಐಪಿಎಸ್ ಅಧಿಕಾರಿಯಾಗಿ ಬದಲಾಗಿದ್ದಾರೆ.

ಧಾರವಾಹಿ ಇದೀಗ ಕುತೂಹಲದ ಘಟ್ಟಕ್ಕೆ ಬಂದಿದ್ದು ಕಥೆಯಲ್ಲಿ ತಿರುವು ಪಡೆದುಕೊಂಡಿದೆ. ಸೀರೆ ಉಡುವ ಜಾನಕಿ ಈಗ ಖಾಕಿ ತೊಟ್ಟು ಐಪಿಎಸ್ ಜಾನಕಿ ಆಗಿ ಬದಲಾಗಿದ್ದಾರೆ. ಈ ಮೂಲಕ ಜಾನಕಿಯ ಐಪಿಎಸ್ ಕನಸು ನನಸಾಗುವ ಕಾಲ ಬಂದಿದೆ. ಒಂದೆಡೆ ಜಾನಕಿ ತಂದೆ ಪಿತೂರಿ ನಡೆಸಿ ಸಚಿವ ಸ್ಥಾನ ಪಡೆದುಕೊಂಡರೆ ಇತ್ತ ಜಾನಕಿ ಐಪಿಎಸ್ ಅಧಿಕಾರಿಯಾಗಿ ಬದಲಾಗಿದ್ದಾರೆ. ಇದನ್ನು ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.
ಇನ್ನು ಮತ್ತೊಂದೆಡೆ ಸಿಎಸ್ಪಿ ಮಗ ಮಧುಕರ್ ಮನೆಬಿಟ್ಟು ಹೋಗಲು ನಿರ್ಧರಿಸಿದ್ದಾರೆ. ಚಂಚಲ ವಿದೇಶದಿಂದ ಮನೆಗೆ ವಾಪಸಾಗಿದ್ದಾರೆ. ನಿರಂಜನ್ ಬ್ಯುಸಿನೆಸ್ ಕಡೆ ಗಮನ ಹರಿಸುತ್ತಿದ್ದಾರೆ. ಜಾನಕಿ-ನಿರಂಜನ್ ಡಿವೋರ್ಸ್ ಬಗ್ಗೆ ಮಾತನಾಡುತ್ತಿದ್ದರೂ ಇಬ್ಬರೂ ಮುಂದೆ ಹೋಗುತ್ತಿಲ್ಲ. ಒಟ್ಟಿನಲ್ಲಿ 'ಮಗಳು ಜಾನಕಿ' ಧಾರವಾಹಿ ಇದೀಗ ಹೊಸ ತಿರುವು ಪಡೆದುಕೊಂಡಿದೆ.