ಕರ್ನಾಟಕ

karnataka

ETV Bharat / sitara

ಇವರಿಬ್ರನ್ನೂ ನೋಡ್ತಿದ್ರೆ ಯಾಕೋ ಅನುಮಾನ ಅಂತಿದ್ದಾರೆ ನೆಟ್ಟಿಗರು - Lakshmi baramma fame Kavita

ಇತ್ತೀಚೆಗೆ ಹೆಚ್ಚಾಗಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟ ಚಂದನ್​ ಕುಮಾರ್ ಹಾಗೂ ಕವಿತಾ ಗೌಡ ಬಗ್ಗೆ ನೆಟಿಜನ್ಸ್​​ ಅನುಮಾನ ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ ಪ್ರೀತಿಸುತ್ತಿದ್ದಾರೆ, ಇವರು ರಿಯಲ್ ಲೈಫ್​​ನಲ್ಲಿ ಜೋಡಿಗಳಾಗುವುದು ಖಂಡಿತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Kavita gowda and Chandan kumar
ಕವಿತಾ ಗೌಡ, ಚಂದನ್ ಕುಮಾರ್

By

Published : Sep 9, 2020, 12:10 PM IST

ಸೆಲಬ್ರಿಟಿಗಳು ಎಂದರೆ ಅವರ ಬಗ್ಗೆ ಗಾಸಿಪ್ ಇದ್ದೇ ಇರುತ್ತದೆ. ಅದರಲ್ಲೂ ಅವರು ಸಿನಿಮಾ ಹೊರತುಪಡಿಸಿ ಹೊರಗಡೆ ಒಟ್ಟಾಗಿ ಕಾಣಿಸಿಕೊಂಡರೆ ಮುಗಿಯಿತು, ಇಬ್ಬರ ನಡುವೆ ಏನೋ ಇದೆ ಎಂಬ ಅನುಮಾನ ಎಲ್ಲರನ್ನೂ ಕಾಡಲು ಆರಂಭಿಸುತ್ತದೆ.

ಶಿವಗಂಗೆ ಬೆಟ್ಟದಲ್ಲಿ 'ಲಕ್ಷ್ಮಿ ಬಾರಮ್ಮ' ಜೋಡಿ

ಸಿನಿಮಾ ನಟ, ನಟಿಯರಿಗೆ ಇದು ಮಾಮೂಲು. ಆದರೆ ಇದೀಗ ಕಿರುತೆರೆ ಕಲಾವಿದರೂ ಕೂಡಾ ಈ ಗಾಸಿಪ್​​​ ಸುದ್ದಿಗಳಿಗೆ ಆಹಾರವಾಗುತ್ತಿದ್ದಾರೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಜೋಡಿಗಳಾಗಿ ನಟಿಸಿದ್ದ ಕವಿತಾ ಗೌಡ ಹಾಗೂ ಚಂದನ್ ಧಾರಾವಾಹಿಯಲ್ಲಿ ಎಷ್ಟು ಹೆಸರು ಮಾಡಿದ್ದರೋ, ನಿಜ ಜೀವನದಲ್ಲಿ ಕೂಡಾ ಇಬ್ಬರೂ ಸುದ್ದಿಯಾಗುತ್ತಿದ್ದಾರೆ. ಕವಿತಾ ಹುಟ್ಟುಹಬ್ಬದಂದು ಚಂದನ್, ಸ್ನೇಹಿತರೊಂದಿಗೆ ಕವಿತಾ ಮನೆಗೆ ಹೋಗಿ ಸರ್ಪೈಸ್ ಕೊಟ್ಟು ಗಿಫ್ಟ್​​ ನೀಡಿ ಬಂದಿದ್ದರು. ಇದೆಲ್ಲಾ ಫ್ರೆಂಡ್ಸ್​​​​​​​ ನಡುವೆ ಮಾಮೂಲು ಬಿಡಿ. ಆದರೆ ಮತ್ತೆ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾದರು.

ಲಾಕ್​ ಡೌನ್ ಸಮಯದಲ್ಲಿ ಇಬ್ಬರೂ ವಿಡಿಯೋ ಕಾಲ್ ಮಾಡಿ ಅದರ ಸ್ಕ್ರೀನ್ ಶಾಟ್ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದ್ದರು. ನಂತರ ಸ್ನೇಹಿತರೊಂದಿಗೆ ಶಿವಗಂಗೆ ಬೆಟ್ಟಕ್ಕೆ ತೆರಳಿದ್ದರು. ಕೆಲವು ದಿನಗಳ ಹಿಂದಷ್ಟೇ ಕವಿತಾ ಗೌಡ ಚಂದನ್​​​​ರನ್ನು ಬೆಳ್ಳಂಬೆಳಗ್ಗೆ ಏರ್​​ಪೋರ್ಟ್​ಗೆ ಡ್ರಾಪ್ ಮಾಡಿದ್ದರು. ಈ ವಿಚಾರವನ್ನು ಕೂಡಾ ಚಂದನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿ 'ಕ್ಯೂಟ್ ಡ್ರೈವರ್​ಗೆ ಥ್ಯಾಂಕ್ಸ್' ಎಂದು ಹೇಳಿದ್ದರು.

ಕವಿತಾ ಗೌಡ, ಚಂದನ್ ಕುಮಾರ್

ಇದೀಗ ಚಂದನ್ ಫೋಟೋಶೂಟ್ ಮಾಡಿಸಿದ್ದು ಇದರಲ್ಲಿ ಕವಿತಾ ಗೌಡ ಕೂಡಾ ಚಂದನ್ ಜೊತೆ ಪೋಟೋ ತೆಗೆಸಿಕೊಂಡಿದ್ದಾರೆ. ಇದನ್ನು ಚಂದನ್​​​​​​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದ್ದು ಕವಿತಾ ಜೊತೆ ಮೊದಲ ಫೋಟೋಶೂಟ್ ಎಂದು ಬರೆದುಕೊಂಡಿದ್ದಾರೆ. ಇಷ್ಟೆಲ್ಲಾ ಇರುವ ಇವರು ಖಂಡಿತ ರಿಯಲ್ ಲೈಫ್​​​​ನಲ್ಲಿ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಈಗಾಗಲೇ ನಿರ್ಧರಿಸಿದ್ದಾರೆ. ಆದರೆ ಕವಿತಾ ಆಗಲೀ, ಚಂದನ್ ಆಗಲಿ ಈ ಬಗ್ಗೆ ತುಟಿ ಬಿಚ್ಚಿಲ್ಲ.

ABOUT THE AUTHOR

...view details