ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಯಲ್ಲಿ ವರುಧಿನಿ ಪಾತ್ರಕ್ಕೆ ಜೀವ ತುಂಬುತ್ತಿರುವ ಸಾರಾ ಅಣ್ಣಯ್ಯ ಹಾಟ್ ಅವತಾರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಹೆಚ್ಚಾಗಿ ಮಾಡ್ರನ್ ಅವತಾರದಲ್ಲಿ ಪಡ್ಡೆ ಹುಡುಗರ ಕಣ್ಣು ಸೆಳೆಯುವ ಸಾರಾ ಅವರಿಗೆ ಯಾವ ಡ್ರೆಸ್ ಆದರೂ ಚೆನ್ನಾಗಿ ಕಾಣುತ್ತದೆ.
'ಕನ್ನಡತಿ' ವರುಧಿನಿಯ ಹಾಟ್ ಅವತಾರಕ್ಕೆ ಫಿದಾ ಆದ ನೆಟಿಜನ್ಸ್ - Sara annayya Hot look
'ಕನ್ನಡತಿ' ಧಾರಾವಾಹಿಯಲ್ಲಿ ವರುಧಿನಿ ಆಗಿ ನಟಿಸುತ್ತಿರುವ ಸಾರಾ ಅಣ್ಣಯ್ಯ ಹಾಟ್ ಲುಕ್ಗೆ ನೆಟಿಜನ್ಸ್ ಫಿದಾ ಆಗಿದ್ದಾರೆ. ಸಾರಾ, ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದು ಆಗ್ಗಾಗ್ಗೆ ತಮ್ಮ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಬೆಳ್ಳಿತೆರೆ ಮೂಲಕ ನಟನಾ ಯಾನ ಶುರು ಮಾಡಿದ ಸಾರಾ, ಸದ್ಯ ಕಿರುತೆರೆಯಲ್ಲಿ ಬ್ಯುಸಿಯಿದ್ದಾರೆ. 'ನಮ್ಮೂರ ಹೈಕ್ಳು' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಜಗತ್ತಿಗೆ ಬಂದ ಸಾರಾ ಅವರು ಕಿರುತೆರೆಯಲ್ಲಿ ನಟಿಸುತ್ತಿರುವುದು ಇದೇ ಮೊದಲ ಬಾರಿ. 'ಕನ್ನಡತಿ'ಯಲ್ಲಿ ವೆಡ್ಡಿಂಗ್ ಪ್ಲ್ಯಾನರ್ ವರುಧಿನಿ ಆಗಿ ನಟಿಸುತ್ತಿರುವ ಆಕೆ, ದೊಡ್ಡ ಮನೆತನದ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ಸ್ಟ್ರೈಟ್ ಫಾರ್ವರ್ಡ್ ಹುಡುಗಿ. ಇದರ ಜೊತೆಗೆ ಈಕೆಗೆ ತನಗೆ ಬೇಕಾದ್ದನ್ನು ಪಡೆದೇ ತೀರುವ ಹಠ.
ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾರಾ ಅಣ್ಣಯ್ಯ, ಈಗಾಗಲೇ ತಮಿಳು ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯಲ್ಲೂ ತಮ್ಮ ನಟನಾ ಛಾಪನ್ನು ಪಸರಿಸಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಮೊದಲು ಬಣ್ಣ ಹಚ್ಚಬೇಕು ಎಂದು ಮಹದಾಸೆ ಹೊಂದಿದ್ದ ಸಾರಾ ಅವರು ಲೇಟ್ ಆಗಿ ಕಿರುತೆರೆ ಲೋಕಕ್ಕೆ ಬಂದರೂ ಉತ್ತಮ ಪಾತ್ರ ಸಿಕ್ಕಿದೆ ಎಂಬ ಸಂತೋಷದಲ್ಲಿದ್ದಾರೆ.
TAGGED:
Sara annayya Hot look