ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ಬಾರಮ್ಮ' ಕೂಡಾ ಒಂದು. 6 ವರ್ಷಗಳ ಕಾಲ ಕಿರುತೆರೆ ವೀಕ್ಷಕರ ಮನ ಸೆಳೆದ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕಿ ಶ್ರುತಿ ಅಲಿಯಾಸ್ ಗೊಂಬೆಯಾಗಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದ ಚೆಲುವೆ ನೇಹಾ ಗೌಡ ಬಹಳ ದಿನಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಬರುತ್ತಿದ್ದಾರೆ. ಆದರೆ ಈ ಬಾರಿ ಅವರು ನಟಿಸುತ್ತಿರುವುದು ತಮಿಳು ಧಾರಾವಾಹಿಯಲ್ಲಿ.
'ಪಾವಂ ಗಣೇಶನ್' ಎನ್ನುವ ತಮಿಳು ಧಾರಾವಾಹಿ ಮೂಲಕ ಕಿರುತೆರೆಗೆ ವಾಪಸಾಗಿರುವ ನೇಹಾ ಗೌಡ ಇದೀಗ ಪರಭಾಷೆ ಕಿರುತೆರೆಯಲ್ಲೂ ಮಿಂಚಲು ಹೊರಟಿದ್ದಾರೆ. ತಾಯಿಸೆಲ್ವಂ ನಿರ್ದೇಶನದ ಈ ಧಾರಾವಾಹಿಯಲ್ಲಿ ಜವಾಬ್ದಾರಿಯುತ ಹುಡುಗಿ ಪಾತ್ರಕ್ಕೆ ನೇಹಾ ಜೀವ ತುಂಬಲಿದ್ದಾರೆ. ಮಾರ್ಚ್ ನಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮುಗಿದಿತ್ತು. ನಂತರ 'ಮೂರುಗಂಟು' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ ಈಕೆ ಇದೀಗ ದೊಡ್ಡ ಗ್ಯಾಪ್ ನಂತರ ಮತ್ತೆ ಮರಳುತ್ತಿದ್ದಾರೆ. ಒಳ್ಳೆ ಅವಕಾಶಗಳು ದೊರೆತರ ಮತ್ತೆ ಕನ್ನಡದಲ್ಲಿ ನಟಿಸುತ್ತೇನೆ ಎಂದು ನೇಹಾಗೌಡ ಹೇಳಿದ್ದಾರೆ.