ಕರ್ನಾಟಕ

karnataka

ETV Bharat / sitara

ಯಶೋಧ ಧಾರಾವಾಹಿಯಿಂದ 'ಫ್ಯಾಂಟಮ್' ಚಿತ್ರದವರೆಗೆ ನೀತಾ ಅಶೋಕ್ ಜರ್ನಿ - Neeta Ashok small screen journey

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದವರಲ್ಲಿ ನೀತಾ ಅಶೋಕ್ ಕೂಡಾ ಒಬ್ಬರು. ಯಶೋಧ ಧಾರಾವಾಹಿ ಮೂಲಕ ಕಿರುತೆರೆ ಪಯಣ ಆರಂಭಿಸಿದ ನೀತು ಈಗ ಸುದೀಪ್ ಜೊತೆ 'ಫ್ಯಾಂಟಮ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

Actress Neeta Ashok
ನೀತಾ ಅಶೋಕ್

By

Published : Sep 18, 2020, 5:45 PM IST

ಯಶೋಧ ಧಾರಾವಾಹಿಯ ಯಶು ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ನೀತಾ ಅಶೋಕ್ ಬಣ್ಣದ ಲೋಕಕ್ಕೆ ಬಂದಿರುವುದು ಅನಿರೀಕ್ಷಿತ. ಮೊದಲ ಧಾರಾವಾಹಿಯಲ್ಲೇ ಧಾರಾವಾಹಿಪ್ರಿಯರ ಮನ ಸೆಳೆದ ಈ ಹುಡುಗಿಯನ್ನು ಇಂದು ಎಲ್ಲರೂ ಗುರುತಿಸುತ್ತಾರೆ.

ನೀತಾ ಅಶೋಕ್

ನಿರ್ದೇಶಕ ವಿನೋದ್ ಧೊಂಡಾಳೆ ತಮ್ಮ ಧಾರಾವಾಹಿಗೆ ಹೊಸಬರನ್ನು ಹುಡುಕುತ್ತಿದ್ದರು. ಅದೇ ಸಮಯಕ್ಕೆ ಸಿಕ್ಕವರು ನೀತಾ ಅಶೋಕ್. ಫೇಸ್​​​​​ಬುಕ್​​​​​​​​​​​ನಲ್ಲಿ ನೀತಾ ಅಶೋಕ್ ಫೋಟೋಗಳನ್ನು ನೋಡಿದ ನಿರ್ದೇಶಕ ವಿನೋದ್ ಧಾರಾವಾಹಿಯಲ್ಲಿ ನಟಿಸುವ ಅವಕಾಶ ನೀಡಿದರು‌. ಬಾಲ್ಯದಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ನೀತಾ, ನಟಿಸುವ ಅವಕಾಶ ದೊರೆತಾಗ ನಿರಾಕರಿಸಲಿಲ್ಲ. ಯಶೋಧ ಧಾರಾವಾಹಿಯ ಯಶು ಆಗಿ ನಟನಾ ಲೋಕಕ್ಕೆ ಬಂದ ನೀತಾ, ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನಾಯಕಿ ನಂದಿನಿ ಆಗಿ ನಟಿಸಿದರು. ಜೊತೆಗೆ 'ನೀಲಾಂಬರಿ' ಹಾರರ್ ಧಾರಾವಾಹಿಯಲ್ಲೂ ನಾಯಕಿಯಾಗಿ ನಟಿಸಿದ್ದಾರೆ.

'ಫ್ಯಾಂಟಮ್' ಚಿತ್ರದಲ್ಲಿ ನಟಿಸುತ್ತಿರುವ ನೀತಾ

ನಟನೆಗೆ ಬರುವ ಮುನ್ನ ನೀತಾ ಮಾಡೆಲಿಂಗ್ ಮಾಡುತ್ತಿದ್ದರು. ಕೆಲವೊಂದು ಜಾಹೀರಾತುಗಳಿಗೆ ರೂಪದರ್ಶಿಯಾಗಿಯೂ ಕಾಣಿಸಿಕೊಂಡಿದ್ದ ನೀತಾ. ತುಳು ಸಿನಿಮಾ 'ಜಬರ್​​​​​​ದಸ್ತ್​​​​​​​​​​​​​​​'ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕೋಸ್ಟಲ್​​​​​​​ವುಡ್​​​​​ನಲ್ಲೂ ಗುರುತಿಸಿಕೊಂಡಿದ್ದಾರೆ. ಇದೀಗ ಕನ್ನಡ ಸಿನಿಮಾಗಳಲ್ಲೂ ನೀತಾ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಫ್ಯಾಂಟಮ್' ಸಿನಿಮಾದ ಮೂವರು ನಾಯಕಿಯರಲ್ಲಿ ಅಪರ್ಣಾ ಬಲ್ಲಾಳ್ ಆಗಿ ನೀತಾ ನಟಿಸುತ್ತಿದ್ದಾರೆ. ಫ್ಯಾಂಟಮ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದೇನೆ. ಈ ಪಾತ್ರ ನಿಜಕ್ಕೂ ವಿಭಿನ್ನವಾಗಿದೆ. ಜವಾಬ್ದಾರಿ ಕೂಡಾ ಹೆಚ್ಚಾಗಿದೆ ಎನ್ನುತ್ತಾರೆ ನಿತಾ.

ತುಳು ಚಿತ್ರಗಳಲ್ಲೂ ನಟಿಸಿರುವ ಚೆಲುವೆ

ABOUT THE AUTHOR

...view details