'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಖಳನಾಯಕಿ ತಾಪ್ಸಿ ಆಗಿ ಅಭಿನಯಿಸುತ್ತಿದ್ದ ನಯನಾ ವೆಂಕಟೇಶ್ ಸದ್ಯ ತಾಯ್ತನದ ಸುಂದರ ಕ್ಷಣಗಳನ್ನು ಸವಿಯುತ್ತಿದ್ದಾರೆ. ಸದ್ಯಕ್ಕೆ ನಟನೆಯಿಂದ ದೂರವಿರುವ ನಯನಾ ವೆಂಕಟೇಶ್ ತನ್ನ ಮುದ್ದು ಮಗ ಪ್ರಯಾನ್ ಭಾರಧ್ವಾಜ್ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಮಗನ ಆರೈಕೆಗಾಗಿ ಅವರು ಕಿರುತೆರೆಯಿಂದ ದೂರ ಉಳಿದಿದ್ದಾರೆ.
ಮಗ ಪ್ರಯಾನ್ ಭಾರಧ್ವಾಜ್ ಜೊತೆಗೆ ಕಾಲ ಕಳೆಯುತ್ತಿರುವ ನಯನಾ ವೆಂಕಟೇಶ್ ಇನ್ಸ್ಟಾಗ್ರಾಮ್ನಲ್ಲಿ ಬಹಳ ಆ್ಯಕ್ಟೀವ್ ಆಗಿದ್ದಾರೆ. ಮಗನ ಫೋಟೋಗಳು ಹಾಗೂ ವಿಡಿಯೋಗಳೊಂದಿಗೆ ಒಂದಷ್ಟು ಉಪಯುಕ್ತ ಟಿಪ್ಸ್, ಮಾಹಿತಿಗಳನ್ನು ಕೂಡಾ ನಯನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ತಾವು ಗರ್ಭಿಣಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡಿರುವ ನಯನಾ, ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. " ಡಿಸೆಂಬರ್ ನನಗೆ ವಿಶೇಷವಾದ ತಿಂಗಳು. ಎರಡು ವರ್ಷಗಳ ಹಿಂದೆ ಇದೇ ದಿನ ನಾನು ತಾಯಿಯಾಗುವ ವಿಷಯ ತಿಳಿಯಿತು. ನಾನು ದುಬೈಗೆ ತೆರಳಿ ಇದನ್ನು ಸಂಭ್ರಮಿಸಿದ್ದೆ. ಈಗ ಆ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ, ಇದು ಎಂದಿಗೂ ವಿಶೇಷ" ಎಂದು ಬರೆದುಕೊಂಡಿದ್ದಾರೆ.