ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ನಾಯಕಿ ತಾಪ್ಸಿ ಆಗಿ ನಟಿಸಿ ಮನೆ ಮಾತಾಗಿದ್ದ ನಯನಾ ಅವರು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಯನಾ ಇತ್ತೀಚೆಗೆ ತಮ್ಮ ಮುದ್ದು ರಾಜಕುಮಾರನ ನಾಮಕರಣ ಮಾಡಿದ್ದಾರೆ.
ಮುದ್ದು ಮಗನಿಗೆ ನಾಮಕರಣ ಮಾಡಿದ ನಟಿ ನಯನಾ ವೆಂಕಟೇಶ್ - ಮಗನ ಹೆಸರಲ್ಲಿ ಇನ್ಸ್ಟಾಗ್ರಾಮ್ ಪೇಜ್ ತೆರೆದ ನಟಿ ನಯನಾ
ನಯನಾ ವೆಂಕಟೇಶ್ ದಂಪತಿ ಇತ್ತಿಚೆಗೆ ಮಗುವಿಗೆ ನಾಮಕರಣ ಮಾಡಿದ್ದು ಪ್ರಯಾನ್ ಭಾರಧ್ವಾಜ್ ಎಂದು ನಾಮಕರಣ ಮಾಡಿದ್ದಾರೆ. ಗರ್ಭಿಣಿ ಆದ ನಂತರ ನಯನಾ ನಟನೆಯಿಂದ ದೂರವಿದ್ದು ಸದ್ಯಕ್ಕೆ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಿದ್ದಾರೆ.
ನಯನಾ ವೆಂಕಟೇಶ್ ದಂಪತಿ ಇತ್ತಿಚೆಗೆ ಮಗುವಿಗೆ ನಾಮಕರಣ ಮಾಡಿದ್ದು ಪ್ರಯಾನ್ ಭಾರಧ್ವಾಜ್ ಎಂದು ನಾಮಕರಣ ಮಾಡಿದ್ದಾರೆ. ಗರ್ಭಿಣಿ ಆದ ನಂತರ ನಯನಾ ನಟನೆಯಿಂದ ದೂರವಿದ್ದು ಸದ್ಯಕ್ಕೆ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗನ ಹೊಸ ಇನ್ಸ್ಟಾಗ್ರಾಮ್ ಖಾತೆಯನ್ನು ಕೂಡಾ ನಯನ ತೆರೆದಿದ್ದಾರೆ. ಆ ಪೇಜ್ಗೆ ಲಿಟಲ್ ಎನ್ವಿಸ್ ಎಂದು ಹೆಸರಿಟ್ಟಿದ್ದಾರೆ. ಈ ಪುಟ್ಟ ಕಂದನಿಗೆ ಈಗಾಗಲೇ ಮೂರು ಸಾವಿರ ಮಂದಿ ಫಾಲೋವರ್ಸ್ಗಳಿದ್ದಾರೆ. ಈ ಪೇಜ್ನಲ್ಲಿ ನಯನಾ ತಮ್ಮ ಮಗುವಿನ ಪೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.
'ಚಿಕ್ಕಮ್ಮ' ಧಾರಾವಾಹಿಯ ಮೂಲಕ ನಟನಾ ಪಯಣ ಆರಂಭಿಸಿದ ನಯನಾ ಗಾಳಿಪಟ, ವಸುದೈವ ಕುಟುಂಬಕಂ, ಪುಟ್ಟ ಗೌರಿ ಮದುವೆ, ಕನಕ, ಕರ್ಪೂರದ ಗೊಂಬೆ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದರ ಜೊತೆಗೆ 'ವಾರಸ್ದಾರ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ ನಯನಾ ಮನೆದೇವ್ರು, ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಕೂಡಾ ವಿಲನ್ ಆಗಿ ಹೆಸರು ಮಾಡಿದ್ದಾರೆ.